Virat Kohli: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 400 ರನ್ ಗಳಿಸಿದ ದಾಖಲೆ ಸೃಷ್ಟಿಸಿದ ವಿರಾಟ್
ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಟಾಪ್ ರನ್ ಗೆಟರ್ ಆಗಿದ್ದಾರೆ. ಇನ್ನಿಂಗ್ಸ್ ಆರಂಭಿಸುತ್ತಿರುವ ವಿರಾಟ್ ಕೊಹ್ಲಿ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ವಿರಾಟ್ ಕೊಹ್ಲಿಗೆ, ದಾಖಲೆಗಳನ್ನು ಸೃಷ್ಟಿಸುವುದು ರನ್ ಗಳಿಸಿದಷ್ಟೇ ಸುಲಭವಾಗಿದೆ. 2024 ರ ಟಿ20 ವಿಶ್ವಕಪ್ ಗೆದ್ದ ನಂತರ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ರನ್ ಗಳಿಸುವ ಅವರ ಹಸಿವು ಇನ್ನೂ ಮುಗಿದಿಲ್ಲ.
ಭಾನುವಾರ ನಡೆದ ಐಪಿಎಲ್ 2025 ರ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್‌ಗಳ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಆದರೆ ಅವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಿದರು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವಿರಾಟ್ ಕೊಹ್ಲಿ ಡೆಲ್ಲಿ ವಿರುದ್ಧ ಅರ್ಧಶತಕ ಗಳಿಸುತ್ತಿದ್ದಂತೆ ದಾಖಲೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 400 ರನ್‌ಗಳ ಗಡಿ ದಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ವಿರಾಟ್ ಕೊಹ್ಲಿ ಐಪಿಎಲ್‌ನ 18 ಸೀಸನ್‌ಗಳಲ್ಲಿ 11 ಬಾರಿ 400 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 443 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ವಿರಾಟ ಪರ್ವ
ಐಪಿಎಲ್ 2011- 557 ರನ್,
ಐಪಿಎಲ್ 2013- 634 ರನ್
ಐಪಿಎಲ್ 2015- 505 ರನ್
ಐಪಿಎಲ್ 2016- 973 ರನ್
ಐಪಿಎಲ್ 2018- 530 ರನ್
ಐಪಿಎಲ್ 2019- 464 ರನ್
ಐಪಿಎಲ್ 2020- 466 ರನ್
ಐಪಿಎಲ್ 2021- 405 ರನ್
ಐಪಿಎಲ್ 2023- 639 ರನ್
ಐಪಿಎಲ್ 2024- 741 ರನ್
ಐಪಿಎಲ್ 2025- 443* ರನ್
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 400+ ರನ್ ಗಳಿಸಿದವರು
ವಿರಾಟ್ ಕೊಹ್ಲಿ - 11 ಬಾರಿ
ಸುರೇಶ್ ರೈನಾ - 9 ಬಾರಿ
ಶಿಖರ್ ಧವನ್ - 9 ಬಾರಿ
ಡೇವಿಡ್ ವಾರ್ನರ್ - 9 ಬಾರಿ
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 30 ಇನ್ನಿಂಗ್ಸ್‌ಗಳಲ್ಲಿ 1154 ರನ್ ಗಳಿಸಿದ್ದಾರೆ. ಇದಾದ ನಂತರ, ಪಂಜಾಬ್ ವಿರುದ್ಧ 1134 ರನ್ ಗಳಿಸಿರುವ ಆಸ್ಟ್ರೇಲಿಯಾದ ಮಾಜಿ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ.
ಟಿ20ಯಲ್ಲಿ ಒಂದೇ ತಂಡದ ವಿರುದ್ಧ ಹೆಚ್ಚು ರನ್ ಗಳಿಸಿದವರು
ವಿರಾಟ್ ಕೊಹ್ಲಿ vs ಡೆಲ್ಲಿ ಕ್ಯಾಪಿಟಲ್ಸ್- 1154 ರನ್
ಡೇವಿಡ್ ವಾರ್ನರ್ vs ಪಂಜಾಬ್ ಕಿಂಗ್ಸ್- 1134 ರನ್
ಶಿಖರ್ ಧವನ್ vs ಚೆನ್ನೈ ಸೂಪರ್ ಕಿಂಗ್ಸ್- 1105 ರನ್
ವಿರಾಟ್ ಕೊಹ್ಲಿ vs ಪಂಜಾಬ್ ಕಿಂಗ್ಸ್- 1104 ರನ್
ವಿರಾಟ್ ಕೊಹ್ಲಿ vs ಚೆನ್ನೈ ಸೂಪರ್ ಕಿಂಗ್ಸ್- 1098 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications