ತವರಿನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಆವೃತ್ತಿ ವೇಳೆ ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧಶತಕವಿಲ್ಲದೆಯೇ ಪ್ರವೇಶಿಸಿದ್ದರು.
ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಫೈನಲ್‌ನಲ್ಲಿ ಅಮೋಘ ಅರ್ಧಶತಕ ಮತ್ತು ಅದಕ್ಕೂ ಮುನ್ನ ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಶತಕ ಬಾರಿಸುವ ಮೊದಲು ಮಾಜಿ ನಾಯಕ ಒತ್ತಡದಲ್ಲಿ ಭರವಸೆ ಮೂಡಿಸಿದರು.

2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ವೈಯಕ್ತಿಕ 765 ರನ್‌ಗಳೊಂದಿಗೆ ವೈಭವದ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಅಭಿಯಾನ ಮುಗಿಸಿದರು. ಇದು ಏಕದಿನ ವಿಶ್ವಕಪ್‌ನ ಯಾವುದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್‌ನಿಂದ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ಆಗಿದೆ.
ವಿಶ್ವಕಪ್ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿಗೆ ಇದು ಕನಸಿನ ಕ್ಷಣವಾಗಿತ್ತು. ಏಕೆಂದರೆ ಅವರು ತಮ್ಮ 50ನೇ ಏಕದಿನ ಶತಕಗಳ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದರು ಮತ್ತು 2003ರ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ 673 ರನ್‌ಗಳನ್ನು ಮೀರಿಸಿದರು.
ವಿರಾಟ್ ಕೊಹ್ಲಿ ಈಗ ಏಕದಿನ ವಿಶ್ವಕಪ್‌ನಲ್ಲಿ, ಟಿ20 ವಿಶ್ವಕಪ್‌ನಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಗ್ರ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಈ ಮೂರು ಹೆಚ್ಚಿನ ಒತ್ತಡದ ಪಂದ್ಯಾವಳಿಗಳಾಗಿವೆ. ಎಂಬುದು ಗಮನಾರ್ಹ.

2023ರ ಏಕದಿನ ವಿಶ್ವಕಪ್ - 11 ಪಂದ್ಯಗಳಲ್ಲಿ 765 ರನ್, 3 ಶತಕ ಮತ್ತು 6 ಅರ್ಧಶತಕ
2016ರ ಐಪಿಎಲ್ - 16 ಪಂದ್ಯಗಳಲ್ಲಿ 973 ರನ್ - 4 ಶತಕ ಮತ್ತು 7 ಅರ್ಧಶತಕ
2014ರ ಟಿ20 ವಿಶ್ವಕಪ್ - 6 ಪಂದ್ಯಗಳಲ್ಲಿ 319 ರನ್ - 4 ಅರ್ಧಶತಕ
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ 54 ರನ್ ಗಳಿಸಿದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಧಾನಗತಿಯ ಪಿಚ್‌ನಲ್ಲಿ ತ್ವರಿತವಾಗಿ ಒಂದು ಮತ್ತು ಎರಡು ರನ್‌ಗಳನ್ನು ತೆಗೆದುಕೊಂಡರು.
ರೋಹಿತ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 47 ರನ್ ಗಳಿಸಿದರು. ಆದರೆ ಭಾರತ ತಂಡ ಮಧ್ಯಮ ಓವರ್‌ಗಳಲ್ಲಿ ಬೇಗನೆ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 109 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟವಾಡಿ ತಂಡದ ಸ್ಥಿತಿಯನ್ನು ಸ್ಥಿರಗೊಳಿಸಿದರು.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಶತಕವನ್ನು ಬಾರಿಸುವ ಮೂಲಕ ತಮ್ಮ ಹೆಸರನ್ನು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಬರೆದರು. ಇದು ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ದಾಖಲೆಯನ್ನು ಮುರಿಯುವ ಶತಕವಾಗಿತ್ತು.
2016ರ ಐಪಿಎಲ್ ಸೀಸನ್‌ಗೆ ಹಿಂದಿರುಗಿದರೆ, ವಿರಾಟ್ ಕೊಹ್ಲಿಯ ಪ್ರದರ್ಶನವು ಅಸಾಮಾನ್ಯವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆ ಋತುವಿನಲ್ಲಿ ಪ್ರಾಬಲ್ಯ ಸಾಧಿಸಿದರು. ಕೇವಲ 16 ಇನ್ನಿಂಗ್ಸ್‌ಗಳಲ್ಲಿ ಅಸಾಧಾರಣ 973 ರನ್‌ಗಳನ್ನು ಗಳಿಸಿದರು. ಇದು ಅವರಿಗೆ ಆರೆಂಜ್ ಕ್ಯಾಪ್ ತಂದುಕೊಟ್ಟಿತು.