ತಂಡಕ್ಕೆ ಆಯ್ಕೆಯಾಗದ್ದಕ್ಕೆ ರಾತ್ರಿಯಿಡೀ ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿ

ವಿಶ್ವ ಕ್ರಿಕೆಟ್‌ನ ಎಲ್ಲಾ ದಾಖಲೆಗಳನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಯುತ್ತಾ ಅತ್ಯುತ್ತಮ ಕ್ರಿಕೆಟಿಗ ಎಂಬ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ದಿಗ್ಗಜ ಆಟಗಾರರೂ ವಿರಾಟ್ ಕೊಹ್ಲಿಯ ಆಟವನ್ನು ಮನಸಾರೆ ಹೊಗಳುತ್ತಿದ್ದಾರೆ. ಆದರೆ ಇಂತಾ ಆಟಗಾರ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದೆ ಕಣ್ಣೀರಿಟ್ಟಿದ್ದರು ಎಂದರೆ ನಂಬುತ್ತೀರಾ!

ಹೌದು ಈ ವಿಚಾರವನ್ನು ಬೇರೆ ಯಾರೂ ಹೇಳಿದ್ದಲ್ಲ. ಸ್ವತಃ ವಿರಾಟ್ ಕೊಹ್ಲಿ ಆನ್‌ಲೈನ್ ಸಂವಾದವೊಂದರಲ್ಲಿ ಹೇಳಿಕೊಂಡಿದ್ದಾರೆ. ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾಗ ಆಯ್ಕೆಯಾಗದ ಕ್ಷಣದಲ್ಲಿ ಆದ ಆಘಾತ ಮತ್ತು ಆ ಸಂದರ್ಭದಲ್ಲಿ ಪಟ್ಟ ಯಾತನೆಯನ್ನು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಕಣ್ಣೀರಿಟ್ಟ ಆ ಸಂದರ್ಭ ಯಾವುದು, ಏನು ಹೇಳಿದ್ದಾರೆ ಮುಂದೆ ಓದಿ..

ರಾಜ್ಯ ಕ್ರಿಕೆಟ್‌ಗೆ ಆಯ್ಕೆಯ ನಿರೀಕ್ಷೆ

ರಾಜ್ಯ ಕ್ರಿಕೆಟ್‌ಗೆ ಆಯ್ಕೆಯ ನಿರೀಕ್ಷೆ

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಪ್ರಾಥಮಿಕ ಹಂತದಲ್ಲಿದ್ದ ಸಂದರ್ಭದ ಕಥೆಯಿದು. ರಾಜ್ಯ ಕ್ರಿಕೆಟ್‌ಗೆ ಆಯ್ಕೆಯಾಗಲು ಕೊಹ್ಲಿ ಹವಣಿಸುತ್ತಿದ್ದರು. ಅದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದರು. ಆದರೆ ಅಂತಿಮವಾಗಿ ವಿರಾಟ್ ಕೊಹ್ಲಿಗೆ ಉಂಟಾಗಿದ್ದು ಬಹುದೊಡ್ಡ ಆಘಾತ .

ರಾಜ್ಯ ಕ್ರಿಕೆಟ್ ಸಂಸ್ಥೆ ತಿರಸ್ಕರಿಸಿತ್ತು

ರಾಜ್ಯ ಕ್ರಿಕೆಟ್ ಸಂಸ್ಥೆ ತಿರಸ್ಕರಿಸಿತ್ತು

ತನ್ನ ಅತ್ಯುತ್ತಮ ಆಟದ ಕಾರಣದಿಂದ ತಾನು ರಾಜ್ಯ ತಂಡಕ್ಕೆ ಆಯ್ಕೆಯಾಗುವ ದೊಡ್ಡ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಆಯ್ಕೆ ಸಮಿತಿ ತಿರಸ್ಕರಿಸಿದ್ದ ವಿಚಾರ ಮತ್ತು ಅದಕ್ಕೆ ನೊಂದು ರಾತ್ರಿಯಿಡೀ ಕಣ್ಣೀರಿಟ್ಟಿದ್ದ ಸಂಗತಿಯನ್ನು ಕೊಹ್ಲಿ ಹೇಳಿದ್ದಾರೆ.

ಎಲ್ಲವೂ ನನ್ನ ಪರವಾಗಿಯೇ ಇತ್ತು ಆದರೆ..

ಎಲ್ಲವೂ ನನ್ನ ಪರವಾಗಿಯೇ ಇತ್ತು ಆದರೆ..

ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಯಾಗುವ ನಿರೀಕ್ಷೆಯಲ್ಲಿ ತಾನಿದ್ದೆ, ಯಾಕೆಂದರೆ ನಾನು ಉತ್ತಮವಾಗಿ ರನ್ ಗಳಿಸಿದ್ದೆ. ಎಲ್ಲವೂ ನನ್ನ ಪರವಾಗಿಯೇ ಇತ್ತು, ತಂಡಕ್ಕೆ ಆಯ್ಕೆಯಾಗಲು ಬೇಕಾದ ಅರ್ಹತೆಯನ್ನು ನಾನು ಗಳಿಸಿಕೊಂಡಿದ್ದೆ. ಹಾಗಿದ್ದರೂ ನಾನು ತಿರಸ್ಕೃತನಾಗಿದ್ದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕಾರಣವೇನೆಂದು ತಿಳಿದುಕೊಳ್ಳುವ ಪ್ರಯತ್ನ

ಕಾರಣವೇನೆಂದು ತಿಳಿದುಕೊಳ್ಳುವ ಪ್ರಯತ್ನ

ಇದನ್ನು ನಂಬಲು ಸಾಧ್ಯವಾಗದೆ ನಾನು ರಾತ್ರಿಯಿಡೀ ಕಣ್ಣೀರಿಟ್ಟೆ. ಎರಡು ಗಂಟೆಗಳ ಕಾಲ ಕೋಚ್‌ಗೆ ಕರೆ ಮಾಡಿ ಮಾತನಾಡಿದೆ. ಯಾಕೆ ನಾನು ಆಯ್ಕೆಯಾಗಿಲ್ಲ ಎಂದು ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಪಟ್ಟೆ. ಯಾವಾಗ ನಮ್ಮಲ್ಲಿ ಉತ್ಸಾಹ ಮತ್ತು ಬದ್ಧತೆಯಿರುತ್ತದೋ ಅದು ನಮ್ಮ ಬೆಂಬಲಕ್ಕೆ ಇರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

2006ರಲ್ಲಿ ಡೆಲ್ಲಿ ತಂಡಕ್ಕೆ ಆಯ್ಕೆ

2006ರಲ್ಲಿ ಡೆಲ್ಲಿ ತಂಡಕ್ಕೆ ಆಯ್ಕೆ

ವಿರಾಟ್ ಕೊಹ್ಲಿ ಡೆಲ್ಲಿ ರಾಜ್ಯ ಕ್ರಿಕೆಟ್‌ಗೆ 2006ರಲ್ಲಿ ಪದಾರ್ಪಣೆಯನ್ನು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅದಾದ ಬಳಿಕ ಟೀಮ್ ಇಂಡಿಯಾದ ಕದ ತಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಎರಡು ವರ್ಷಗಳ ಬಳಿಕ ಅಂದರೆ 2008ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಆಯ್ಕೆಯಾಗುತ್ತಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, April 22, 2020, 21:55 [IST]
Other articles published on Apr 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X