Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂಡದ ಗೆಲುವನ್ನು ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ

Virat Kohli dedicates the Trent Bridge win to Kerala flood victims

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 22: ಅತಿಥೇಯ ಇಂಗ್ಲೆಂಡ್ ನಡುವಿನ ನ್ಯಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾದಿಂದ 203ರನ್ ಗಳಿಂದ ಇಂದು ಗೆದ್ದುಕೊಂಡಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ನಂತರ ಮಾತನಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಅವರು ಈ ಪಂದ್ಯದ ಗೆಲುವು ಹಾಗೂ ಗೆಲುವಿನ ಮೊತ್ತವನ್ನು ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಿಸಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿತ್ತು. ಆದರೆ, ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿತು.

ಭಾರತ vs ಇಂಗ್ಲೆಂಡ್ : 3ನೇ ಟೆಸ್ಟ್ ಪಂದ್ಯ ಲೈವ್ ಸ್ಕೋರ್ ಕಾರ್ಡ್

ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ಕೇರಳದಲ್ಲಿ ಜನರು ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ನಾವು ಈ ಮೂಲಕ ನಮ್ಮ ಕೊಡುಗೆ ನೀಡಲು ಮುಂದಾಗಿದ್ದೇವೆ ಎಂದರು.

ಎಜ್ ಬಾಸ್ಟನ್ ಹಾಗೂ ಲಾರ್ಡ್ಸ್ ನಲ್ಲಿ ಪಂದ್ಯ ಕಳೆದುಕೊಂಡಿದ್ದ ಭಾರತ 0-2ರಿಂದ ನ್ಯಾಟಿಂಗ್ ಹ್ಯಾಮ್ ನಲ್ಲಿ ಪಂದ್ಯ ಆರಂಭಿಸಿ, ಬುಧವಾರದ ಅಂತ್ಯಕ್ಕೆ 2-1ರಲ್ಲಿ ಸಂತಸದ ಕೊನೆಗೊಂಡಿದೆ. ಆಗಸ್ಟ್ 30ರಿಂದ ಸೌಂಥಾಪ್ಟನ್ ನಲ್ಲಿ ನಾಲ್ಕನೇ ಪಂದ್ಯ ನಡೆಯಲಿದೆ. ವೇಗಿ ಭುವನೇಶ್ವರ್ ಕುಮಾರ್ ಅವರು ಗಾಯದಿಂದ ಗುಣಮುಖರಾಗಿದ್ದು, ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಕೇರಳದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ 370 ಜನ ಪ್ರಾಣ ಕಳೆದುಕೊಂಡಿದ್ದರೆ, 8 ಲಕ್ಷ ಮಂದಿ ಪುನರ್ವಸತಿ ಕೇಂದ್ರಗಳಲಿದ್ದಾರೆ. ಕೇಂದ್ರ ಸರ್ಕಾರದಿಂದ 600 ಕೋಟಿ ರು ನೀಡಲಾಗಿದೆ. ಪ್ರವಾಹ ಸಂತ್ರಸ್ತರಿಗೆ ನೀಡುವ ದೇಣಿಗೆ ತೆರಿಗೆ ಮುಕ್ತವಾಗಲಿದೆ.

Story first published: Wednesday, August 22, 2018, 18:32 [IST]
Other articles published on Aug 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+