ನವದೆಹಲಿ, ಜೂನ್ 22: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಕೆಂಗಣ್ಣು ಬೀರಿದ್ದಾರೆ.
ಅನಿಲ್ ಕುಂಬ್ಳೆ ಅವರು ಕೋಚ್ ಸ್ಥಾನದಿಂದ ಕೆಳಗಿಳಿಯಲು ಕೊಹ್ಲಿಯೇ ಕಾರಣ ಎಂಬುದು ಒಂದೆಡೆಯಾದರೆ, ಇನ್ನೊಂದೆಡೆ ಕುಂಬ್ಳೆ ಬಗೆಗಿನ ಹಳೆ ಟ್ವೀಟ್ ವೊಂದನ್ನು ಕೊಹ್ಲಿ ಡಿಲೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅನಿಲ್ ಕುಂಬ್ಳೆ ಅವರು ಕೋಚ್ ಆದಾಗ(ಒಂದು ವರ್ಷದ ಹಿಂದೆ) ಅವರನ್ನು ಸ್ವಾಗತಿಸಿ, ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದರು. ಈಗ ಆ ಟ್ವೀಟ್ ಡಿಲೀಟ್ ಆಗಿದೆ.
