ಆಟಗಾರರಿಗೆ ವಾರ್ಷಿಕ ಇಷ್ಟು ಕೋಟಿ ರು ನೀಡಿ ಎಂದ ಕೊಹ್ಲಿ
ಬೆಂಗಳೂರು, ಏಪ್ರಿಲ್ 04: ಭಾರತೀಯ ಕ್ರಿಕೆಟರ್ ಗಳ ವಾರ್ಷಿಕ ಗುತ್ತಿಗೆ ನವೀಕರಣ ಶುಲ್ಕ ಹೆಚ್ಚಳದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎ ಲಿಸ್ಟ್ ನಲ್ಲಿರುವ ಆಟಗಾರರಿಗೆ ವಾರ್ಷಿಕವಾಗಿ ಕನಿಷ್ಠ 5 ಕೋಟಿ ರು ನೀಡಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಇತ್ತೀಚೆಗೆ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿ, ಆಟಗಾರರ ಸಂಭಾವನೆಯನ್ನು ದುಪ್ಪಟ್ಟುಗೊಳಿಸಿತ್ತು. ಆದರೆ, ಈ ಬಗ್ಗೆ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎ ಶ್ರೇಣಿಯ ಆಟಗಾರರಿಗೆ 1 ಕೋಟಿ.ರೂ.ನಿಂದ 2 ಕೋಟಿ.ರೂ, ಬಿ ಶ್ರೇಣಿಯ ಆಟಗಾರರಿಗೆ 50 ಲಕ್ಷ ರೂ.ನಿಂದ 1 ಕೋಟಿ.ರೂ.ಗೆ ಏರಿಸಲಾಗಿತ್ತು.
ಆದರೆ, ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ವೇತನ ಹೆಚ್ಚಳದ ಬಗ್ಗೆ ಅತೃಪ್ತರಾಗಿದ್ದು, ಎ ಶ್ರೇಣಿಯ ಆಟಗಾರರಿಗೆ 5 ಕೋಟಿ.ರೂ., ಬಿ ಶ್ರೇಣಿಯ ಆಟಗಾರರಿಗೆ 3 ಕೋಟಿ.ರೂ. ಹಾಗೂ ಸಿ ಶ್ರೇಣಿಯ ಆಟಗಾರರಿಗೆ 1.5 ಕೋಟಿ.ರೂ. ಹೆಚ್ಚಳ ಮಾಡುವಂತೆ ಆಡಳಿತಾಧಿಕಾರಿಗಳ ಸಮಿತಿಗೆ(ಸಿಒಎ) ಬೇಡಿಕೆ ಸಲ್ಲಿಸಿದ್ದಾರೆ ಎಂದು ವರದಿ ಬಂದಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ದೇಶಗಳ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತದ ಆಟಗಾರರ ಸಂಭಾವನೆ ಕಡಿಮೆ ಇರುವುದು ಕೊಹ್ಲಿಯ ಬೇಡಿಕೆಗೆ ಮುಖ್ಯ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications