IPL 2023: ಗಂಗೂಲಿಯನ್ನು ಗುರಾಯಿಸಿದ ಕೊಹ್ಲಿ: ಥ್ಯಾಂಕ್ಸ್ ಕೂಡ ನೀಡದೆ ಕಡೆಗಣನೆ!
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆಯಿತು. ಫೀಲ್ಡಿಂಗ್ ಮಾಡುವ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ಗುರಾಯಿಸಿದ ಕೊಹ್ಲಿ ಪಂದ್ಯ ಮುಗಿದ ಬಳಿಕ ಥ್ಯಾಂಕ್ಸ್ ಕೂಡ ನೀಡುವುದನ್ನು ತಪ್ಪಿಸಿದರು. ಇದು ಈಗ ಸಖತ್ ಚರ್ಚೆಯಾಗುತ್ತಿದೆ.
ಫೀಲ್ಡಿಂಗ್ ಮಾಡುವ ವೇಳೆ ಬೌಂಡರಿ ಸಮೀಪವೇ ಇದ್ದ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್‌ನಲ್ಲಿ ಕೂತಿದ್ದ ತಂಡದ ಕ್ರಿಕೆಟ್ ನಿರ್ದೇಶಕರಾಗಿರುವ ಸೌರವ್ ಗಂಗೂಲಿ ಅವರನ್ನು ದಿಟ್ಟಿಸಿ ನೋಡಿದರು. ಕೊಹ್ಲಿ ಗಂಗೂಲಿಯನ್ನು ದಿಟ್ಟಿಸಿ ನೋಡುವ ವಿಡಿಯೋ ಕೂಡ ವೈರಲ್ ಆಗಿದೆ.

ಪಂದ್ಯ ಮುಗಿದ ನಂತರ ಎರಡೂ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಕ್ರೀಡಾಸ್ಫೂರ್ತಿ ತೋರಲು ಹಸ್ತಲಾಘವ ಮಾಡಿದರು. ಆದರೆ, ಕೊಹ್ಲಿ ಮತ್ತು ಗಂಗೂಲಿ ಹಸ್ತಲಾಘವ ಮಾಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಗೂಲಿ ಇತರ ಆಟಗಾರರನ್ನು ಭೇಟಿ ಮಾಡಲು ಸರದಿಯಲ್ಲಿ ಮುಂದೆ ಹೋದಾಗ ವಿರಾಟ್ ಕೊಹ್ಲಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಅವರ ಜೊತೆ ಮಾತುಕತೆಯಲ್ಲಿ ತೊಡಗಿದರು.
ಸಖತ್ ವೈರಲ್ ಆಗುತ್ತಿದೆ ವಿಡಿಯೋ
ಪಂದ್ಯದ ನಂತರ ಇಬ್ಬರೂ ಭೇಟಿಯಾಗುವುದು ಖಚಿತವಾಗಿತ್ತು. ಆಟ ಮುಗಿದ ತಕ್ಷಣ, ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸಂಪ್ರದಾಯದಂತೆ ಹಸ್ತಲಾಘವ ಮಾಡಿದರು. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಿಂದ ಕೊಹ್ಲಿ ಇದ್ದರೆ, ಗಂಗೂಲಿ ಡೆಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್‌ಗಿಂತ ಹಿಂದಿದ್ದರು.
ಗಂಗೂಲಿ ಡು ಪ್ಲೆಸಿಸ್‌ಗೆ ಕೈಕುಲುಕಿದರು ಮತ್ತು ಕೊಹ್ಲಿಯನ್ನು ಸ್ವಾಗತಿಸಲು ಅವರ ಸರದಿ ಬಂದಾಗ, ಕೊಹ್ಲಿ ನಿರಾಕರಿಸಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಪಾಂಟಿಂಗ್ ಅವರು ಗಂಗೂಲಿಯೊಂದಿಗೆ ಹಸ್ತಲಾಘವ ಮಾಡಲು ಕೊಹ್ಲಿಗೆ ಹೇಳುತ್ತಿರುವುದು ಕಂಡುಬಂದಿದೆ ಆದರೆ ಅವರು ಕೊಹ್ಲಿ ಅದನ್ನು ನಿರಾಕರಿಸಿದಂತೆ ಕಂಡುಬಂದಿದೆ.

ವಿವಾದಕ್ಕೆ ಕಾರಣವಾಗಿದ್ದ ಚೇತನ್ ಶರ್ಮಾ ಹೇಳಿಕೆ
ಬಿಸಿಸಿಐ ಮಾಜಿ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಮತ್ತು ಭಾರತದ ಮಾಜಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಮಧ್ಯೆ ಎಲ್ಲವೂ ಸರಿ ಇರಲಿಲ್ಲ ಎನ್ನುವ ವಿಚಾರ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿತ್ತು. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಲು ಸೌರವ್ ಗಂಗೂಲಿ ಕಾರಣ ಎಂದು ಚೇತನ್ ಶರ್ಮಾ ಆರೋಪ ಮಾಡಿದ್ದರು.
ರೋಹಿತ್ ಶರ್ಮಾ ಮೇಲಿನ ನಂಬಿಕೆಯಿಂದಲ್ಲ ವಿರಾಟ್ ಕೊಹ್ಲಿ ಮೇಲಿನ ದ್ವೇಷದ ಕಾರಣದಿಂದ ಭಾರತ ತಂಡದ ನಾಯಕತ್ವವನ್ನು ಬದಲಿಸಲಾಯಿತು, ವಿರಾಟ್ ಕೊಹ್ಲಿ ಬಗ್ಗೆ ಗಂಗೂಲಿ ದ್ವೇಷ ಹೊಂದಿದ್ದರು ಎಂದು ಚೇತನ್ ಶರ್ಮಾ ಹೇಳಿಕೆ ನೀಡಿದ್ದರು. ತಂಡದ ನಾಯಕತ್ವ ತ್ಯಜಿಸಿದ ಕೊಹ್ಲಿ, ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದರು.
2022ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ ಕೊಹ್ಲಿ, ನಂತರ ಏಕದಿನ, ಟೆಸ್ಟ್ ಮಾದರಿಯಲ್ಲಿ ಕೂಡ ಶತಕಗಳನ್ನು ಬಾರಿಸುವ ಮೂಲಕ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಐಪಿಎಲ್‌ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ಮುಂದುವರೆಸಿರುವ ಅವರು 4 ಪಂದ್ಯಗಳಲ್ಲಿ ಈಗಾಗಲೇ 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications