Virat Kohli: ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಡಕೌಟ್: ಕೋಪಗೊಂಡ ವಿರಾಟ್ ಮಾಡಿದ್ದೇನು?
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್, ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿಗೆ ಸೊನ್ನೆಗೆ ಔಟ್ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಮೌನಕ್ಕೆ ಶರಣಾದಂತೆ ಕಂಡು ಬಂದಿತು. ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದಂತೆ ಕಂಡ ಅವರು, ರನ್ ಗಳಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ವೇಗಿಗಳು ಹಾಕಿಕೊಂಡ ರಣ ತಂತ್ರವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಇಂಗ್ಲೆಂಡ್ ತಂಡದ ವೇಗಿಗಳು ಟೀಮ್ ಇಂಡಿಯಾದ ಸ್ಟಾರ್ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಸಫಲರಾದರು.
ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಡಕೌಟ್
ಸತತ ಎಂಟು ಎಸೆತಗಳನ್ನು ಎದುರಿಸಿ ಖಾತೆ ತೆರೆಯುವಲ್ಲಿ ವಿಫಲರಾದ ವಿರಾಟ್, ಔಟ್ ಆದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ಎಡವಿದರು. ಡೇವಿಡ್ ವಿಲ್ಲಿ ಅವರು ಎಸೆದ ಗುಡ್ ಲೆಂತ್ ಎಸೆತವನ್ನು ತಪ್ಪಾಗಿ ಅರ್ಥಹಿಸಿಕೊಂಡ ಕೊಹ್ಲಿ, ಮಿಡ್ ಆಫ್ ನಲ್ಲಿ ಬೆನ್ ಸ್ಟೋಕ್ಸ್ ಗೆ ಕ್ಯಾಚ್ ನೀಡಿದರು.

ವಿರಾಟ್ ಕೊಹ್ಲಿ ಇದೇ ವೇಳೆ ಒಂದು ಕ್ಲಾಸ್ ಕವರ್ ಡ್ರೈವ್ ಮಾಡಿ ಲಯದಲ್ಲಿರುವ ಸೂಚನೆ ನೀಡಿದರು. ಆದರೆ ಈ ವೇಳೆ ಯಾವುದೇ ರನ್ ಬಾರಲಿಲ್ಲ. ಪರಿಣಾಮ ವಿರಾಟ್ ಖಾತೆ ಖಾಲಿಯಾಗಿ ಉಳಿಯಬೇಕಾಯಿತು.
ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇದ್ದ ವಿರಾಟ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಟೀಮ್ ಇಂಡಿಯಾಕ್ಕೆ ಹಿನ್ನಡೆ ಉಂಟಾಯಿತು. ಲಖನೌ ಅಂಗಳದಲ್ಲಿ ವಿರಾಟ್ ಆಟವನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಕೊಹ್ಲಿ ಐದನೇ ಬಾರಿಗೆ ಸೊನ್ನೆ ಸುತ್ತಿದ್ದಾರೆ. ಇನ್ನು ಭಾರತದಲ್ಲೇ ವಿರಾಟ್ ಮೂರನೇ ಬಾರಿಗೆ ಇಂಗ್ಲೆಂಡ್ ವಿರುದ್ದ ಡಕೌಟ್ ಆಗಿದ್ದಾರೆ.
ಕೋಪಗೊಂಡ ವಿರಾಟ್ ಕೊಹ್ಲಿ
ಡಕ್‌ಗೆ ಔಟಾದ ಕಾರಣ ವಿರಾಟ್ ಕೊಹ್ಲಿ ನಿರಾಶೆಗೊಂಡರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಹ ಆಟಗಾರ ಡೇವಿಡ್ ವಿಲ್ಲಿಗೆ ತಮ್ಮ ವಿಕೆಟ್‌ನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ ಕೋಪಗೊಂಡಿದ್ದರು. ತಾವು ಔಟಾದ ರೀತಿಗೆ ಅಸಮಾಧಾನಗೊಂಡ ಅವರು ಹತಾಶೆಯಿಂದ ಡ್ರೆಸ್ಸಿಂಗ್ ರೂಮ್ ಸೋಫಾಗೆ ಗುದ್ದುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications