Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿರಾಟ್ ಯಾವಾಗ ನಿವೃತ್ತಿ ಆಗ್ತಾರೆ ಗೊತ್ತಾ? ಈ ಬಗ್ಗೆ ಕೊಹ್ಲಿ ಹೇಳಿದ್ದೇನು?

ಪಾಕಿಸ್ತಾನ ಆಯೋಜಿತ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ವೇಳೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಈ ಟೂರ್ನಿಯ ಫೈನಲ್‌ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ಹೊಂದುತ್ತಾರೆ ಎಂಬ ಊಹಾಪೋಹಗಳು ಇದ್ದವು. ಈ ಎಲ್ಲ ವದಂತಿಗಳಿಗೆ ಪತ್ರಿಕಾಗೋಷ್ಠಿಯಲ್ಲಿ ತೆರೆ ಏಳೆದಿದ್ದರು. ಈಗ ವಿರಾಟ್ ಕೊಹ್ಲಿ ಸಹ ತಮ್ಮ ನಿವೃತ್ತಿಯ ಬಗ್ಗೆ ಮೌನ ಮುರಿದಿದ್ದಾರೆ.

ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಭವಿಷ್ಯದ ಬಗ್ಗೆ ದೊಡ್ಡ ಬಹಿರಂಗ ಪಡಿಸಿದ್ದಾರೆ. 36 ವರ್ಷದ ವಿರಾಟ್ ಕೊಹ್ಲಿ ಇನ್ನು ಕ್ರಿಕೆಟ್‌ ಆನಂದಿಸುತ್ತಿದ್ದೇನೆ. ನಿವೃತ್ತಿಯ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ಗಳ ನಿವೃತ್ತಿ ವದಂತಿಗಳು ಹೆಚ್ಚಾದವು. ಐಪಿಎಲ್ 2025 ಕ್ಕೂ ಮೊದಲು, ಆರ್‌ಸಿಬಿ ಇನ್ನೋವೇಶನ್ ಲ್ಯಾಬ್‌ನ ಕಾರ್ಯಕ್ರಮದಲ್ಲಿ, ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Virat Kohli Dismisses ODI Retirement Rumors Says He Still Enjoys Cricket

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿರಾಟ್‌, ನಾನು ದಾಖಲೆಗಳು, ಸಾಧನೆಗೆ ಆಡುತ್ತಿಲ್ಲ. ಆಟವನ್ನು ಸದ್ಯ ನಾನು ಆನಂದಿಸುತ್ತಿದ್ದೇನೆ. ಸ್ಪರ್ಧಾತ್ಮಕ ಮನೋಭಾವ ಆಟಗಾರನಿಗೆ ಆಟದಿಂದ ಸುಲಭವಾಗಿ ಮೈದಾನದಿಂದ ದೂರ ಉಳಿಯಲು ಬಿಡುವುದಿಲ್ಲ. ನೀವು ಜೀವನದಲ್ಲಿ ಯಾವ ಹಂತದಲ್ಲಿ ನಿಂತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಟೀಮ್ ಇಂಡಿಯಾ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಹೇಳಿದ್ದರು ಎಂದು ಅವರು ಹೇಳಿದ್ದರು. ಕೆಲವೊಮ್ಮೆ ಕೆಟ್ಟ ಫಾರ್ಮ್‌ನಲ್ಲಿದ್ದಾಗ ಆಟ ಸಾಕು ಸಾಕು ಎನಿಸುತ್ತದೆ. ಆದರೆ ದುಡುಕಿ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಕುರಿತು ಮಾತನಾಡಿದ ಕೊಹ್ಲಿ, ಇದು ಕ್ರಿಕೆಟ್‌ಗೆ ತುಂಬಾ ಒಳ್ಳೆಯದು ಎಂದಿದ್ದಾರೆ. 2028 ರ ಒಲಿಂಪಿಕ್ಸ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಅವರಿಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ. 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿರುವುದು ಕ್ರೀಡೆಗೆ ಸಂದ ಜಯ' ಎಂದು ಕೊಹ್ಲಿ ಹೇಳಿದರು. ಇದರಲ್ಲಿ ಐಪಿಎಲ್ ಕೂಡ ದೊಡ್ಡ ಕೊಡುಗೆ ನೀಡಿದೆ. ನಾನು ಈಗಾಗಲೇ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಯಾಗಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಒಳ್ಳೆಯ ಅನುಭವವಾಗಿತ್ತು. ಈ ಕನಸಿಗಾಗಿ ನಾನು ಮತ್ತೆ ನನ್ನ ನಿವೃತ್ತಿಯ ನಿರ್ಧಾರವನ್ನು ಹಿಂಪಡಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಆಸೀಸ್ ಪ್ರವಾಸದ ಬಗ್ಗೆ ಕೋಹ್ಲಿ ಮಾತು

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್‌ ಕಲೆ ಹಾಕದೇ ಇರುವುದು ಬೇಸರದ ಸಂಗತಿ ಎಂದು ಕೊಹ್ಲಿ ಹೇಳಿದರು. 4 ವರ್ಷಗಳ ನಂತರ ನಾನು ಆಸ್ಟ್ರೇಲಿಯಾ ಪ್ರವಾಸ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ನೀವು ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಾಗ, ಜನರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸಲು ಪ್ರಾರಂಭಿಸುತ್ತಾರೆ ಎಂದು ವಿರಾಟ್ ತಿಳಿಸಿದ್ದಾರೆ.

Story first published: Saturday, March 15, 2025, 22:39 [IST]
Other articles published on Mar 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+