Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಇಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವಾಡ್ತಾರಾ ವಿರಾಟ್‌ ಕೊಹ್ಲಿ?

ಮೇ 1 ಶನಿವಾರ, ಬಹುನಿರೀಕ್ಷತ 2024ರ ಐಸಿಸಿ ಪರುಷರ ಟಿ20 ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಿಗಾಗಿ ಆತಿಥೇಯ ವಹಿಸಿರುವ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾ ದೇಶಗಳು ಅದ್ಧೂರಿಯಾಗಿ ಸಿದ್ಧತೆ ಮಾಡಿಕೊಂಡಿವೆ.

ಈ ಟೂರ್ನಿಗೂ ಮೊದಲು ಎಲ್ಲ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಇಂದು (ಮೇ 1) ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕೈಕ ಅಭ್ಯಾಸ ಪಂದ್ಯ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ಭರ್ಜರಿಯಾಗಿ ಸಜ್ಜಾಗಿವೆ.

Virat Kohli doubtful to play in practice match against Bangladesh

ಈಗಾಗಲೇ ಟಿ20 ವಿಶ್ವಕಪ್‌ಗಾಗಿ ಟೀಮ್‌ ಇಂಡಿಯಾ ಎರಡು ಬ್ಯಾಚ್‌ಗಳಲ್ಲಿ ನ್ಯೂಯರ್ಕ್‌ ತಲುಪಿದೆ. ಈ ಎರಡು ಬ್ಯಾಚ್‌ಗಳಲ್ಲಿ ಭಾರತ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಪ್ರಯಾಣ ಮಾಡಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ನ್ಯೂಯಾರ್ಕ್ ತಲುಪಿ ತಂಡವನ್ನು ಯಾವಾಗ ಸೇರಿಕೊಳ್ಳುತ್ತಾರೋ ಎಂಬ ಆತಂಕ ಅಭಿಮಾನಿಗಳಲ್ಲಿತ್ತು.

ಇದೀಗ ಮೂಲಗಳ ಪ್ರಕಾರ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ನ್ಯೂಯಾರ್ಕ್ ತಲುಪಿದ್ದಾರೆ. ಇನ್ನು ಇಂದು ರಾತ್ರಿ 8 ಗಂಟೆಗೆ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಿಂದ ನ್ಯೂಯರ್ಕ್‌ಗೆ ತಲುಪಿರುವ ವಿರಾಟ್ ಕೊಹ್ಲಿ ಅವರು ಸತತ 16 ಗಂಟೆಗಳ ಪ್ರಯಾಣದ ನಂತರ ವಿಶ್ರಾಂತಿ ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆ.

ಏಕೆಂದರೆ ಒಂದು ತಿಂಗಳ ಕಾಲ ನ್ಯೂಯರ್ಕ್‌ನಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಪಂದ್ಯಗಳನ್ನು ಆಡುವ ನಿರೀಕ್ಷೆಯಲ್ಲಿದೆ. ಈ ಹಂತದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾದ ಪ್ರಮುಖ ಬ್ಯಾಟಿಂಗ್ ಭಾಗವಾಗಿದ್ದಾರೆ.

ಹೀಗಾಗಿ ಕೊಹ್ಲಿ ಅವರಿಗೆ ಪ್ರಯಾಣದ ನಂತರ ವಿಶ್ರಾಂತಿ ಬಹಳ ಮುಖ್ಯವಾಗಿದೆ. ಅದರಿಂದ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಣಕ್ಕೀಳಿಯುವುದು ಬಹುತೇಕ ಅನುಮಾನವಾಗಿದೆ.

ಕೊಹ್ಲಿಗೂ ಮುನ್ನವೇ ಭಾರತ ತಂಡದ ಎಲ್ಲ ಆಟಗಾರರು ಅಮೆರಿಕ ತಲುಪಿದ್ದರು. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಭ್ ಪಂತ್, ಖಲೀಲ್ ಅಹ್ಮದ್, ಜಸ್ಪ್ರೀತ್ ಬುಮ್ರಾ ಅವರು ಮೊದಲ ಬ್ಯಾಚ್‌ ನಲ್ಲಿ ಹಾರಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಫೈನಲ್‌ ಮುಗಿದ ಬಳಿಕ ಮೇ 27ರಂದು ಯಶಸ್ವಿ ಜೈಸ್ವಾಲ್, ಅವೇಶ್ ಖಾನ್, ಯುಜ್ವೇಂದ್ರ ಚಹಾಲ್ ತೆರಳಿದ್ದರು.

ಮತ್ತೊಂದೆಡೆ ವಿಕೆಟ್ ಕೀಪರ್ ಮತ್ತು ಬ್ಯಾಟರ್‌f ಸಂಜು ಸ್ಯಾಮ್ಸನ್ ದುಬೈನಿಂದ ಕೆಲಸ ಮುಗಿಸಿ ಯುಎಸ್ ತಲುಪಿದ್ದರು. ಇದಲ್ಲದೇ ಮೀಸಲು ಆಟಗಾರ ರಿಂಕು ಸಿಂಗ್ ಕೂಡ ಗುರುವಾರ ಟೀಮ್‌ ಇಂಡಿಯಾ ಸೇರಿಕೊಂಡಿದ್ದರು.

ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜೂನ್ 9 ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಹೈವೋಲ್ಟೇಜ್‌ ಪಂದ್ಯವನ್ನು ಆಡಲಿದೆ. ಮೂರನೇ ಪಂದ್ಯವನ್ನು 12 ರಂದು ಮತ್ತು ಕೊನೆಯ ಪಂದ್ಯವನ್ನು ಜೂನ್ 15 ರಂದು ಆಡಲಿದೆ.

ಈ ಬಾರಿ 9ನೇ ಆವೃತ್ತಿ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿದ್ದು, ತಲಾ 5 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ.

Story first published: Saturday, June 1, 2024, 8:40 [IST]
Other articles published on Jun 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+