ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿ

ಅಡಿಲೇಡ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ರನ್ ಮಷಿನ್ ಎಂಬ ಬಿರುದಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಕೊಹ್ಲಿ ಅನೇಕ (ಸಕಾರಾತ್ಮಕ) ದಾಖಲೆಗಳನ್ನು ನಿರ್ಮಿಸಿದ್ದಾರೆ, ನಿರ್ಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ದಂತಕತೆ ಸಚಿನ್ ದಾಖಲೆಗಳನ್ನು ಮೀರಿಸಬಲ್ಲ ಒಬ್ಬ ಬ್ಯಾಟ್ಸ್‌ಮನ್ ಇದ್ದರೆ ಅದು ಕೊಹ್ಲಿ ಎಂಬ ಮಾತು ಕ್ರಿಕೆಟ್ ಜಗತ್ತಿನಲ್ಲಿ ಕೇಳಿಬರುತ್ತಿರುತ್ತದೆ. ಕೊಹ್ಲಿ ನಿರ್ಮಿಸುತ್ತಿರುವ ದಾಖಲೆಗಳ ಸಾಲಿನಲ್ಲಿ ಒಂದಿಷ್ಟು ಬೇಡದ ದಾಖಲೆಗಳೂ ಇವೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲೂ ಕೊಹ್ಲಿ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್ ಹೀನಾಯ ಸೋಲು ಕಾಣುತ್ತಲೇ ಕೊಹ್ಲಿಯ ಹೆಸರಿಗೂ ಕೆಟ್ಟ ದಾಖಲೆ ಸೇರಿಕೊಂಡಿದೆ.

2020 ಕೊಹ್ಲಿ ಪಾಲಿಗೆ ಕೆಟ್ಟ ವರ್ಷ
2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20ಐನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು ಕೊಹ್ಲಿ ಪ್ರತೀ ವರ್ಷವೂ ಕನಿಷ್ಠ ಒಂದೆರಡು ಶತಕ ಆದರೂ ಬಾರಿಸುತ್ತಿದ್ದರು. ಆದರೆ ಕೊಹ್ಲಿ ಹೆಸರಿನಲ್ಲಿ ಶತಕವೇ ದಾಖಲಾಗದ ವರ್ಷವಿದ್ದರೆ ಅದು 2020. ಇನ್ನು ದ್ವಿತೀಯ ಪಂದ್ಯ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆಯಾದರೂ ಮುಂದಿನ ಯಾವುದೇ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ.

70 ಶತಕಗಳ ದಾಖಲೆ
2020ರ ಇಸವಿಯನ್ನು ಕೊಹ್ಲಿ ಒಂದೇ ಒಂದು ಶತಕ ಬಾರಿಸದೆ ಮುಗಿಸಿದಂತಾಗಿದೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಬಿಸಿಸಿಐನಿಂದ ಪಿತೃತ್ವ ರಜೆ ಮಂಜೂರು ಮಾಡಿಕೊಂಡಿದ್ದಾರೆ. ಅಂದರೆ ಮೊದಲ ಟೆಸ್ಟ್ ಬಳಿಕ ಕೊಹ್ಲಿ ಉಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಕೊರೊನಾ ಕಾಟದಿಂದ ಈ ವರ್ಷ ಕ್ರಿಕೆಟ್ ಪಂದ್ಯಗಳು ನಡೆದಿದ್ದೇ ಕಡಿಮೆ. ನಡೆದ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸುವ ಪ್ರದರ್ಶನ ತೋರಿಸಲೂಯಿಲ್ಲ. ಕೊಹ್ಲಿ ಟೆಸ್ಟ್‌ನಲ್ಲಿ 27 ಶತಕ, 7 ದ್ವಿಶತಕ, ಏಕದಿನದಲ್ಲಿ 43 ಶತಕಗಳನ್ನು ಬಾರಿಸಿದ್ದಾರೆ.

ಭಾರತ ಅತೀ ಕಡಿಮೆ ರನ್
ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 74, ಚೇತೇಶ್ವರ ಪೂಜಾರ 43, ಅಜಿಂಕ್ಯ ರಹಾನೆ 42 ರನ್ ಬಾರಿಸಿದ್ದೇ ಹೆಚ್ಚು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ 53 ರನ್ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತ್ತು. 21.2 ಓವರ್‌ಗೆ 9 ವಿಕೆಟ್ ಕಳೆದು 36 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 21 ಓವರ್‌ಗೆ 2 ವಿಕೆಟ್ ಕಳೆದು 93 ರನ್ ಬಾರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications