Virat Kohli: ಯುವರಾಜ್ ಸಿಂಗ್ ದಾಖಲೆಯ ಸಮಕ್ಕೆ ನಿಂತ ವಿರಾಟ್
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯ ವೇಳೆ ಲಯಕ್ಕೆ ಮರಳಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಬ್ಬರಿಸಿದ್ದ ವಿರಾಟ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ಅವರು ಶತಕವನ್ನು ಬಾರಿಸುವಲ್ಲಿ ಹಿಂದೆ ಬಿದ್ದಿರಬಹುದು. ಆದರೆ ಇವರ ಈ ಬ್ಯಾಟಿಂಗ್ ಯಾವುದೇ ಶತಕಕ್ಕಿಂತಲೂ ಕಡಿಮೆ ಏನು ಇರಲಿಲ್ಲ.
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಸೋತು, ವಿಶ್ವಕಪ್ ಕೈ ಚೆಲ್ಲಿತ್ತು. ಈ ಪಂದ್ಯದ ಸೋಲು ಭಾರತದ ಅಭಿಮಾನಿಗಳಿಗೆ ಬಹುವಾಗಿ ಕಾಡಿತ್ತು. ಮಾರ್ಚ್ 4 ರಂದು ಟೀಮ್ ಇಂಡಿಯಾ ಇದಕ್ಕೆಲ್ಲಾ ಉತ್ತರವನ್ನು ನೀಡಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಅರ್ಹತೆ ಪಡೆದಿದೆ. ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.

ಆಸ್ಟ್ರೇಲಿಯಾ ವಿರುದ್ಧ ವಿರಾಟ್ 98 ಎಸೆತಗಳಲ್ಲಿ 84 ರನ್‌ಗಳನ್ನು ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ವಿರಾಟ್ ಅವರ ಅಮೋಘ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಸಸ್ತಿಯು ಕೈ ಸಿಗುತ್ತಿದ್ದಂತೆ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ಬರೆದರು.
ಯುವಿ ದಾಖಲೆಯ ಸಮಕ್ಕೆ ನಿಂತ ವಿರಾಟ್
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಐಸಿಸಿ ನಾಕೌಟ್ ಪಂದ್ಯದಲ್ಲಿ ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ, ಐಸಿಸಿ ನಾಕೌಟ್‌ಗಳಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ದಿಗ್ಗಜ ಆಟಗಾರರನ್ನು ಈ ಪಟ್ಟಿಯಲ್ಲಿ ಹಿಂದೆ ಹಾಕುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದರು.

ಟೀಮ್ ಇಂಡಿಯಾದ ಪರ ಯುವರಾಜ್ ಸಿಂಗ್ ಇಂತಹದ್ದೇ ಸಾಧನೆ ಮಾಡಿದ್ದರು. ಇವರು 17 ಐಸಿಸಿ ನಾಕೌಟ್ ಪಂದ್ಯಗಳನ್ನು ಆಡಿದ್ದು, 3 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ 21 ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಮೂರನೇ ಬಾರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ. ಈಗ ವಿರಾಟ್ ಅವರ ಬಳಿ ಯುವರಾಜ್ ಸಿಂಗ್ ದಾಖಲೆಯನ್ನು ಸಹ ಮೀರಿ ನಿಲ್ಲುವ ಅವಕಾಶವಿದೆ. ಭಾರತ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ವೇಳೆ ವಿರಾಟ್ ಬ್ಯಾಟ್‌ನಿಂದ ಉತ್ತಮವಾಗಿ ರನ್‌ಗಳು ಹರಿದು ಬಂದಲ್ಲಿ ದೊಡ್ಡ ಸಾಧನೆಯನ್ನು ಮಾಡಬಹುದು. ಈ ವೇಳೆ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದರೆ, ಐಸಿಸಿ ನಾಕೌಟ್‌ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳುವ ಅವಕಾಶ ವಿರಾಟ್ ಅವರಿಗೆ ಇದೆ.
ಭಾರತದ ಪರ ಐಸಿಸಿ ಟೂರ್ನಿಯ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಆಟಗಾರರಲ್ಲಿ, ಮೊಹಿಂದರ್ ಅಮರನಾಥ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಇದ್ದಾರೆ. ಇವರು ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications