Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಕೆಕೆಆರ್‌ ವಿರುದ್ಧ ವಿರಾಟ್‌ 38 ರನ್‌ ಬಾರಿಸಿದರೆ ವಿಶೇಷ ಕ್ಲಬ್‌ಗೆ ಎಂಟ್ರಿ

ಇಂದಿನಿಂದ ಭಾರತದಲ್ಲಿ ಐಪಿಎಲ್‌ ಹಂಗಾಮಾ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ಸಹ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ವಿರಾಟ್‌ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಈ ದಾಖಲೆಯನ್ನು ಐಪಿಎಲ್‌ ಇತಿಹಾಸದಲ್ಲಿ ಒಬ್ಬನೇ ಭಾರತೀಯ ಬ್ಯಾಟರ್‌ ಸಾಧಿಸಿದ್ದಾನೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಐಪಿಎಲ್‌ ಮೊದಲ ಪಂದ್ಯ ನಡೆಯಲಿದೆ. ಈ ವೇಳೆ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೇಗೆ ಆಡುತ್ತಾರೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನಿಂತಿದೆ. ಏಕೆಂದರೆ ಇತ್ತೀಚಿಗೆ ಮುಕ್ತಾಯವಾಗಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದೇ ಫಾರ್ಮ್‌ನ್ನು ಐಪಿಎಲ್‌ನಲ್ಲೂ ಮುಂದುವರೆಸುವ ಇರಾದೆಯನ್ನು ವಿರಾಟ್‌ ಹೊಂದಿದ್ದಾರೆ.

Virat Kohli Eyes 1000-Run Milestone Against KKR in IPL 2025 Opener

ಯವಾ ದಾಖಲೆಯ ಮೇಲೆ ವಿರಾಟ್ ಕಣ್ಣು?

ವಿರಾಟ್‌ ಕೊಹ್ಲಿ ಕೆಕೆಆರ್‌ ವಿರುದ್ಧ ಅಮೋಘ ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದಾರೆ. ಇವರು 34 ಪಂದ್ಯಗಳಲ್ಲಿ 962 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಮೊದಲ ಪಂದ್ಯದಲ್ಲಿ 38 ರನ್‌ಗಳನ್ನು ಬಾರಿಸಿದ್ದೇ ಆದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಮೂಲಕ ವಿರಾಟ್‌ ಕೆಕೆಆರ್‌ ವಿರುದ್ಧ ಸಾವಿರ ರನ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಗೆ ಸ್ಥಾನವನ್ನು ಪಡೆಯಲಿದ್ದಾರೆ.

ಇದಕ್ಕೂ ಮೊದಲು ಕೆಕೆಆರ್ ಪರ ಈ ಸಾಧನೆಯನ್ನು ಇಬ್ಬರು ಬ್ಯಾಟರ್‌ಗಳು ಮಾತ್ರ ಮಾಡಿದ್ದಾರೆ. ಒಬ್ಬರು ಡೇವಿಡ್‌ ವಾರ್ನರ್‌. ಇವರು 1093 ರನ್‌ ಸಿಡಿಸಿದ್ದಾರೆ. ಇನ್ನೊಬ್ಬ ರೋಹಿತ್ ಶರ್ಮಾ 1070 ರನ್‌ ಕಲೆ ಹಾಕಿದ್ದಾರೆ. ಈ ವಿಶೇಷ ಕ್ಲಬ್‌ಗೆ ಸೇರಲು ವಿರಾಟ್‌ಗೆ ಇನ್ನು 38 ರನ್‌ಗಳ ಅವಶ್ಯಕತೆ ಇದೆ.

Virat Kohli Eyes 1000-Run Milestone Against KKR in IPL 2025 Opener

ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ ಈಡನ್ ಗಾರ್ಡನ್ಸ್‌ನಲ್ಲಿ ನಿರಂತರ ಮಳೆಯಿಂದಾಗಿ ಅಭ್ಯಾಸ ಕೊನೆಗೊಂಡಿತು. ತಂಡಗಳ ಅಭ್ಯಾಸ ಸಂಜೆ 5 ಗಂಟೆಗೆ ಪ್ರಾರಂಭವಾದವು, ಆದರೆ ಸಂಜೆ 6 ಗಂಟೆಯ ಸುಮಾರಿಗೆ ಮಳೆ ಬರಲು ಪ್ರಾರಂಭಿಸಿತು. ಇದರಿಂದಾಗಿ ಆಟಗಾರರು ಮೈದಾನ ಬಿಟ್ಟು ಹೊರನಡೆಯಬೇಕಾಯಿತು. ಪಂದ್ಯ ನಡೆಯುವ ದಿನ ಮಳೆ ಬೀಳುವ ಸಾಧ್ಯತೆ ಇದೆ. ಐಪಿಎಲ್ ನಿಯಮಗಳ ಪ್ರಕಾರ, ಲೀಗ್ ಹಂತದ ಪಂದ್ಯಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯವಿರುತ್ತದೆ. ಇದರರ್ಥ ಐದು ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ ರಾತ್ರಿ 10:56 ಆಗಿದೆ.

ಐಪಿಎಲ್‌ ಮೊದಲ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು ಯಾವ ತಂಡ ಶುಭಾರಂಭವನ್ನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, March 22, 2025, 8:45 [IST]
Other articles published on Mar 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+