For Quick Alerts
ALLOW NOTIFICATIONS  
For Daily Alerts
 

Virat Kohli: ಸಿಎಸ್‌ಕೆ ವಿರುದ್ಧ 55 ರನ್‌ ಬಾರಿಸುತ್ತಿದ್ದಂತೆ "ವಿರಾಟ" ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಶುಭಾರಂಭ ಮಾಡಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಈ ವೇಳೆ ವಿರಾಟ್‌ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇದೇ ಪ್ರದರ್ಶನವನ್ನು ಇವರು ಐಪಿಎಲ್‌ನಲ್ಲಿ ಮುಂದುವರೆಸಿದ್ದರು. ಆಡಿದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಈ ಪ್ರದರ್ಶನ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಈಗ ಮತ್ತೊಮ್ಮೆ ಧೋನಿ ಸೈನ್ಯದ ಮುಂದೆ ವಿರಾಟ್‌ ಕೊಹ್ಲಿ ಬ್ಯಾಟ್‌ ಬೀಸಲು ಸಜ್ಜಾಗಿದ್ದಾರೆ.

Virat Kohli Eyes 13 000 T20 Runs Milestone in RCB vs CSK IPL Clash

ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ್ರೆ, ಹಲವು ದಾಖಲೆಗಳನ್ನು ನಿರ್ಮಿಸಬಹದು. ಆದರೆ ವಿರಾಟ್‌ ಕೊಹ್ಲಿ ಅವರ ಕಣ್ಣು ಮಾತ್ರ ಆ ಒಂದು ದಾಖಲೆಯ ಮೇಲೆ ನೆಟ್ಟಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ 55 ರನ್‌ ಬಾರಿಸುವಲ್ಲಿ ಯಶಸ್ವಿಯಾದ್ರೆ ದೊಡ್ಡ ದಾಖಲೆ ಬರೆಯಲಿದ್ದಾರೆ. ಈ ದಾಖಲೆಯನ್ನು ಈ ಮೊದಲು ಭಾರತೀಯ ಬ್ಯಾಟರ್‌ ಒಬ್ಬ ಮಾಡಿರಲಿಲ್ಲ. ಈ ಸಾಧನೆಯನ್ನು ಮಾಡಲು ವಿರಾಟ್ ಕೊಹ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಸಿಎಸ್‌ಕೆ ವಿರುದ್ಧ ವಿರಾಟ್‌ ಕೊಹ್ಲಿ ಅವರ ಅಂಕಿ ಅಂಶಗಳು ಸಹ ಅಮೋಘ ವಾಗಿವೆ.

Take a Poll

ಯಾವ ದಾಖಲೆಯ ಮೇಲೆ ಕಣ್ಣು

ವಿರಾಟ್‌ ಕೊಹ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ 55 ರನ್‌ ಸಿಡಿಸಿದಲ್ಲಿ ಟಿ20 ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ಗಳನ್ನು ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಗೆ ಎಂಟ್ರಿ ನೀಡಲಿದ್ದಾರೆ. ವಿರಾಟ್ ಕೊಹ್ಲಿ 400 ಟಿ20 ಪಂದ್ಯದಲ್ಲಿ 12945 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 31 ಆಗಿದೆ. ಇನ್ನು 9 ಶತಕ ಹಾಗೂ 98 ಅರ್ಧಶತಕ ಸಿಡಿಸಿದ್ದಾರೆ.

Virat Kohli Eyes 13 000 T20 Runs Milestone in RCB vs CSK IPL Clash

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌ಗೆ ಮೊದಲ ಸ್ಥಾನ. ಇವರು ಆಡಿದ 463 ಪಂದ್ಯಗಳಲ್ಲಿ 14562 ರನ್ ಕಲೆ ಹಾಕಿದ್ದಾರೆ. ಈ ವೇಳೆ 22 ಶತಕ ಹಾಗೂ 88 ಅರ್ಧಶತಕಗಳು ಸೇರಿವೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಾಧಕರು

ಕ್ರಿಸ್‌ ಗೇಲ್‌, 463 ಪಂದ್ಯ, 14562 ರನ್‌
ಅಲೆಕ್ಸ್‌ ಹೇಲ್ಸ್‌, 494 ಪಂದ್ಯ, 13610 ರನ್‌
ಶೋಯಿಬ್ ಮಲಿಕ್, 555 ಪಂದ್ಯ, 13557 ರನ್‌
ಕಿರನ್‌ ಪೋಲಾರ್ಡ್‌, 695 ಪಂದ್ಯ, 13537 ರನ್‌
ವಿರಾಟ್‌ ಕೊಹ್ಲಿ, 400 ಪಂದ್ಯ, 12945 ರನ್‌

Story first published: Wednesday, March 26, 2025, 20:04 [IST]
Other articles published on Mar 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+