Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs DC Virat Kohli: ಕ್ಯಾಪಿಟಲ್ಸ್‌ ವಿರುದ್ಧ ಹೇಗಿದೆ ವಿರಾಟ್ ಪ್ರದರ್ಶನ

ಗುರುವಾರ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಈ ವೇಳೆ ಆರ್‌ಸಿಬಿ ಮತ್ತೊಂದು ಗೆಲುವು ದಾಖಲಿಸುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕಾಗಿ ಕಾದಾಟ ನಡೆಸಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.

18ನೇ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ತಂಡ ಎಂಬ ಹೆಗ್ಗಳಿಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ್ದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆಕ ಕನ್ನಡಿಗ ಕೆಎಲ್ ರಾಹುಲ್‌ ಬಲ ತುಂಬಿದ್ದು, ಮತ್ತೊಂದು ಜಯದ ಹೊಸ್ತಿಲಲ್ಲಿ ಇದೆ. ಆರ್‌ಸಿಬಿ ಫಾರ್ಮ್‌ ಸಹ ಉತ್ತಮವಾಗಿದೆ. ಬೆಂಗಳೂರು ತಂಡ ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಉತ್ತಮ ಆರಂಭವನ್ನು ಕಂಡಿದೆ. ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

Virat Kohli Eyes Another Big Knock as RCB Take On Unbeaten Delhi Capitals at Chinnaswamy

ವಿರಾಟ್‌ ಕೊಹ್ಲಿ ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 54.67 ಸರಾಸರಿಯಲ್ಲಿ 164 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿರಾಟ್‌ 67 ರನ್‌ ಸಿಡಿಸಿ ಅಬ್ಬರಿಸಿದ್ದರು. ಇನ್ನು ಮೊದಲ ಪಂದ್ಯದಲ್ಲೂ ವಿರಾಟ್‌ ಅರ್ಧಶತಕ ಬಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ವಿರಾಟ್ ಪ್ರದರ್ಶನ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ವಿರಾಟ್ ಕೊಹ್ಲಿ ಅಂಕಿ ಅಂಶ ಉತ್ತಮವಾಗಿದೆ. ವಿರಾಟ್‌ ತಮ್ಮ ತವರು ತಂಡದ ವಿರುದ್ಧ ಆಡಿದ 29 ಪಂದ್ಯಗಳ 28 ಇನಿಂಗ್ಸ್‌ಗಳಲ್ಲಿ 1057 ರನ್‌ ಸಿಡಿಸಿದ್ದಾರೆ. ಈ ವೇಳೆ 10 ಅರ್ಧಶತಕ ಸೇರಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್‌ 99 ರನ್‌ ಸಿಡಿಸಿದ್ದು ಅಧಿಕ ರನ್ ಆಗಿದೆ. ಗುರುವಾರ ನಡೆಯಲಿರುವ ಪಂದ್ಯದಲ್ಲೂ ವಿರಾಟ್‌ ಇದೇ ಪ್ರದರ್ಶನ ಮುಂದುವರೆಸುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

Virat Kohli Eyes Another Big Knock as RCB Take On Unbeaten Delhi Capitals at Chinnaswamy

ಆರ್‌ಸಿಬಿ ಪ್ರದರ್ಶನ ಹೇಗಿದೆ?

ಆರ್‌ಸಿಬಿ ತಂಡ ಪ್ರಸಕ್ತ ವರ್ಷ ಆಡಿದ 4 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 7 ವಿಕೆಟ್‌ ಜಯ, ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ 50 ರನ್‌ ಗೆಲುವು ದಾಖಲಿಸಿದ್ದ ಆರ್‌ಸಿಬಿ, ತವರಿನಲ್ಲಿ ಗುಜರಾತ್ ವಿರುದ್ಧ ನಿರಾಸೆ ಅನುಭವಿಸಿದೆ. ಮುಂಬೈನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳಿಂದ ಜಯ ಸಾಧಿಸಿ ಅಬ್ಬರಿಸಿದೆ.

Story first published: Thursday, April 10, 2025, 9:21 [IST]
Other articles published on Apr 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+