Virat Kohli: ಬಾಬರ್ ಅಜಮ್ ದೊಡ್ಡ ದಾಖಲೆ ಅಳಿಸುವ ಸನಿಹದಲ್ಲಿ ವಿರಾಟ್
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಸದ್ಯ ಐಪಿಎಲ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಆರ್‌ಸಿಬಿ ಪರ ಆರಂಭಿಕ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ವಿರಾಟ್, ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಪ್ರಸಕ್ತ ಐಪಿಎಲ್‌ನಲ್ಲಿ ವಿರಾಟ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಈ ಆವೃತ್ತಿಯಲ್ಲಿ ಇವರು ಹಲವು ದಾಖಲೆಗಳನ್ನು ಬರೆಯುವ ಕನಸಿನಲ್ಲಿದ್ದಾರೆ. ಈ ಎಲ್ಲ ದಾಖಲೆಗಳಲ್ಲಿ ಎದ್ದು ಕಾಣುವ ಇನ್ನೊಂದು ದಾಖಲೆ ಇದಾಗಿದೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಮಾತ್ರ ಆಡಲಿದ್ದಾರೆ. ವಿರಾಟ್ ಆರ್‌ಸಿಬಿ ಪರ ಆಡಿದ ಮೂರು ಪಂದ್ಯಗಳಲ್ಲಿ ಒಂದು ಅರ್ಧಶತಕ ಸಹ ಬಾರಿಸಿದ್ದಾರೆ. ಈ ಐಪಿಎಲ್‌ನಲ್ಲಿ ವಿರಾಟ್ ಬೌಂಡರಿಗಳ ವಿಚಾರದಲ್ಲಿ ಪಾಕಿಸ್ತಾನದ ಬಾಬಾರ್ ಅಜಮ್ ದಾಖಲೆ ಅಳಿಸುವ ಸನಿಹದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಆಡಿದ 402 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 12983 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 1151 ರನ್ ಹರಿದು ಬಂದಿವೆ. ಅಲ್ಲದೆ 420 ಸಿಕ್ಸರ್ ಸಹ ಸಿಡಿಸಿದ್ದಾರೆ. ಬಾಬರ್ ಅಜಮ್ ಆಡಿದ 310 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ 11042 ರನ್ ಕಲೆ ಹಾಕಿದ್ದಾರೆ. ಈ ವೇಳೆ 1163 ಬೌಂಡರಿ ಬಾರಿಸಿದ್ದಾರೆ. ಅಲ್ಲದೆ 207 ಸಿಕ್ಸರ್ ಚಚ್ಚಿದ್ದಾರೆ. ವಿರಾಟ್‌ಗೆ ಈ ಐಪಿಎಲ್‌ನಲ್ಲಿ ಬಾಬರ್ ಅವರನ್ನು ಹಿಂದಿಕ್ಕಲು ಇನ್ನು 14 ಬೌಂಡರಿಗಳ ಅವಶ್ಯಕತೆ ಇದೆ. ಅಲ್ಲದೆ 17 ರನ್ ಬಾರಿಸುತ್ತಿದ್ದಂತೆ 13 ಸಾವಿರ ರನ್‌ಗಳ ಕ್ಲಬ್‌ಗೆ ಸಹ ವಿರಾಟ್ ಎಂಟ್ರಿ ಪಡೆಯಲಿದ್ದಾರೆ.
ಅಲೆಕ್ಸ್ ಹೆಲ್ಸ್ ಹೆಚ್ಚು ಬೌಂಡರಿ
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲೆಕ್ಸ್ ಹೆಲ್ಸ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಆಡಿದ 494 ಪಂದ್ಯಗಳಲ್ಲಿ 1491 ಬೌಂಡರಿ ಸಿಡಿಸಿದ್ದಾರೆ. ಇವರು ವಿಶ್ವದಾದ್ಯಂತ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್‌ಗೆ ಎರಡನೇ ಸ್ಥಾನ. ಇವರು 399 ಪಂದ್ಯಗಳಲ್ಲಿ 1306 ಬೌಂಡರಿಗಳನ್ನು ಬಾರಿಸಿದ್ದು, ನಾಲ್ಕನೇ ಸ್ಥಾದಲ್ಲಿ ಜೇಮ್ಸ್ ವಿನ್ಸ್ (1299 ಬೌಂಡರಿ) ಇದ್ದಾರೆ.

14 ಬೌಂಡರಿ ಅವಶ್ಯಕತೆ
ವಿರಾಟ್ ಕೊಹ್ಲಿ ಈ ದಾಖಲೆಯನ್ನು ಇನ್ನು ಎರಡರಿಂದ ಮೂರು ಪಂದ್ಯಗಳಲ್ಲಿ ಮಾಡಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಸದ್ಯ ಬಾಬಾರ್ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸ ಮುಗಿದ ಬಳಿಕ ಪಾಕ್‌ಗೆ ಆಗಮಿಸಲಿದ್ದು, ಪಿಎಸ್‌ಎಲ್‌ನಲ್ಲಿ ಆಡಲಿದ್ದಾರೆ. ಇವರು ಕಣಕ್ಕೆ ಇಳಿಯುವ ಮುನ್ನವೇ ವಿರಾಟ್ ಈ ಸಾಧನೆ ಮಾಡಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ವಿರಾಟ್ ಆಡಿದ 3 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 97 ರನ್ ಸಿಡಿಸಿದ್ದಾರೆ. ಈ ವೇಳೆ 7 ಬೌಂಡರಿ, 4 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications