Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿರಾಟ್‌ ಕೊಹ್ಲಿ 61 ರನ್‌ ಬಾರಿಸುತ್ತಿದ್ದಂತೆ ಇತಿಹಾಸ

ಎಂಟು ವರ್ಷಗಳ ಬಳಿಕ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕುತೂಹಲ ಘಟ್ಟ ತಲುಪಿದೆ. ಈ ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಗಿದಿದ್ದು, ಮಂಗಳವಾರದಿಂದ ಸೆಮಿಫೈನಲ್‌ ಪಂದ್ಯ ಆರಂಭವಾಗುತ್ತದೆ. ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಲೀಗ್‌ ಹಂತದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿರುವ ಭಾರತ, ಅಗ್ರ ಸ್ಥಾನೀಯವಾಗಿ ಈ ಹಂತವನ್ನು ತಲುಪಿದೆ. ಈ ಟೂರ್ನಿಯಲ್ಲಿ ಇನ್ನೇರಡು ಗೆಲುವು ದಾಖಲಿಸಿದರೆ, ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಬಹುದಾಗಿದೆ.

ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ಕಾದಾಟವನ್ನು ನಡೆಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್‌ ಆಟಗಾರರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಭಾರತದ ಅನುಭವಿ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಆಸ್ಟ್ರೇಲಿಯಾ ವಿರುದ್ಧ ಆಡುವುದು ಎಂದರೆ ಅಚ್ಚು ಮೆಚ್ಚು. ಪ್ರಸಕ್ತ ಟೂರ್ನಿಯಲ್ಲಿ ವಿರಾಟ್‌ ಶತಕ ಬಾರಿಸಿ ಫಾರ್ಮ್‌ಗೆ ಮರಳಿದ್ದರಿಂದ ಭರವಸೆಗಳೂ ಹೆಚ್ಚಿವೆ. ಸೆಮಿಫೈನಲ್‌ ಪಂದ್ಯದಲ್ಲೂ ಅಭಿಮಾನಿಗಳು, ಮ್ಯಾನೇಜ್ಮೆಂಟ್‌ ವಿರಾಟ್‌ ಅವರಿಂದ ದೊಡ್ಡ ಇನಿಂಗ್ಸ್‌ ಆಸೆ ಮಾಡುತ್ತಿದೆ.

Virat Kohli Eyes Historic 1000 Runs in ICC Knockout Matches Ahead of Champions Trophy Semi-Final

ಸೆಮಿಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೈದಾನಕ್ಕೆ ಇಳಿದಾಗ ವಿರಾಟ್‌ ಮತ್ತೊಂದು ದಾಖಲೆಯನ್ನು ನಿರ್ಮಿಸಬಹುದಾಗಿದೆ. ಇವರು ಈ ಪಂದ್ಯದಲ್ಲಿ 61 ರನ್‌ಗಳನ್ನು ಬಾರಿಸಿದ್ದೇ ಆದಲ್ಲಿ ಮತ್ತೊಂದು ಇತಿಹಾಸ ಬರೆಯಲಿದ್ದಾರೆ.

Take a Poll

ಇತಿಹಾಸದ ಮೇಲೆ ಕಣ್ಣು

ವಿರಾಟ್‌ ಕೊಹ್ಲಿ ಒಬ್ಬ ಬಿಗ್ ಮ್ಯಾಚ್‌ ಪ್ಲೇಯರ್‌. ಇವರು ಯಾವಾಗಲೂ ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಐಸಿಸಿ ನಾಕೌಟ್‌ ಹಂತದಲ್ಲಿ ವಿರಾಟ್‌ ಕೊಹ್ಲಿ ಅಬ್ಬರದ ಆಟವನ್ನು ಆಡಿದ್ದಾರೆ. ಇವರು ಐಸಿಸಿ ನಾಕೌಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಸದ್ಯ ಇವರ ಬುಟ್ಟಿಯಲ್ಲಿ 939 ರನ್‌ಗಳಿವೆ. ಇವರು ಈ ಹಂತದಲ್ಲಿ 57ರ ಸರಾಸರಿಯಲ್ಲಿ ರನ್‌ಗಳನ್ನು ಸೇರಿಸಿದ್ದಾರೆ. ಒಂದು ವೇಳೆ ವಿರಾಟ್‌ ಆಸೀಸ್‌ ವಿರುದ್ಧ 61 ರನ್ ಬಾರಿಸುವಲ್ಲಿ ಸಫಲರಾದರೆ, ಐಸಿಸಿ ನಾಕೌಟ್‌ ಪಂದ್ಯಗಳಲ್ಲಿ 1 ಸಾವಿರ ರನ್‌ ಪೂರೈಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ವರೆಗೆ ಯಾವುದೇ ಬ್ಯಾಟರ್‌ ಈ ಸಾಧನೆ ಮಾಡಿಲ್ಲ.

Virat Kohli Eyes Historic 1000 Runs in ICC Knockout Matches Ahead of Champions Trophy Semi-Final

ವಿರಾಟ್ ಕೊಹ್ಲಿ ಸದ್ಯ ಉತ್ತಮ ಟಚ್‌ನಲ್ಲಿದ್ದಾರೆ. ಇವರು ಪ್ರಸಕ್ತ ಟೂರ್ನಿಯಲ್ಲಿ ಉತ್ತಮವಾಗಿ ರನ್‌ ಕಲೆ ಹಾಕುತ್ತಿದ್ದಾರೆ. ಬಾಂಗ್ಲಾ ವಿರುದ್ಧ 22, ಸಾಂಪ್ರದಾಯಿಕ ಎದುರಾಳಿ ಪಾಕ್‌ ವಿರುದ್ಧ 100 ಹಾಗೂ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 11 ರನ್‌ ಸಿಡಿಸಿದ್ದಾರೆ.

1
7-2025

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್

ವಿರಾಟ್ ಕೊಹ್ಲಿ - 939 ರನ್‌
ರೋಹಿತ್ ಶರ್ಮಾ - 780 ರನ್‌
ರಿಕಿ ಪಾಂಟಿಂಗ್ - 731 ರನ್‌
ಸಚಿನ್ ತೆಂಡೂಲ್ಕರ್ - 657 ರನ್‌
ಕುಮಾರ್ ಸಂಗಕ್ಕಾರ - 595 ರನ್
ಕೇನ್ ವಿಲಿಯಮ್ಸನ್ - 546 ರನ್

Story first published: Tuesday, March 4, 2025, 8:58 [IST]
Other articles published on Mar 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+