For Quick Alerts
ALLOW NOTIFICATIONS  
For Daily Alerts
 

Virat Kohli: ದಶಕಗಳ ಹಳೆಯ ದಾಖಲೆಯ ಮೇಲೆ ವಿರಾಟ್‌ ಚಿತ್ತ: 55 ರನ್‌ ಬಾರಿಸುತ್ತಿದ್ದಂತೆ ವಿಶ್ವ ದಾಖಲೆ

ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ಭಾನುವಾರ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹಲವು ದಾಖಲೆಗಳನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಸಫಲರಾದರೆ, ವಿಶ್ವ ಮಟ್ಟದಲ್ಲಿ ಮತ್ತೆ ಸದ್ದು ಮಾಡಲಿದ್ದಾರೆ. ವಿರಾಟ್ ಕೊಹ್ಲಿ ನಿರ್ಮಿಸಲಿರುವ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಸುಮಾರು 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ. ಈ ಪಂದ್ಯದಲ್ಲಿ ಡೆಲ್ಲಿಯ ವಿರಾಟ್‌ ಕೊಹ್ಲಿ ದೊಡ್ಡ ದಾಖಲೆಯನ್ನು ಬರೆಯುವ ಹಂಬಲದಲ್ಲಿದ್ದಾರೆ. ವಿರಾಟ್‌ ಕೊಹ್ಲಿ ಹಲವು ದಾಖಲೆಗಳನ್ನು ಬರೆಯಲಿದ್ದಾರೆ. ಈ ವೇಳೆ ಇವರ ಕಣ್ಣು ಆ ಒಂದು ದೊಡ್ಡ ದಾಖಲೆಯ ಮೇಲೆ ನೆಟ್ಟಿರಲಿದೆ.

Virat Kohli Eyes Historic Milestone Just 55 Runs Away from Surpassing Kumar Sangakkara in ODI Runs

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿರುವ 301 ಏಕದಿನ ಪಂದ್ಯಗಳಲ್ಲಿ 58.11 ಸರಾಸರಿಯಲ್ಲಿ14180 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 74 ಅರ್ಧಶತಕಗಳು ಸೇರಿವೆ. ಫೈನಲ್‌ ಪಂದ್ಯದಲ್ಲಿ ವಿರಾಟ್‌ ಅತಿ ಹೆಚ್ಚು ರನ್‌ಗಳಿಸಿದ ಎರಡನೆ ಆಟಗಾರ ಆಗುವ ಕನಸು ಕಾಣುತ್ತಿದ್ದಾರೆ. ಫೈನಲ್‌ ಪಂದ್ಯದಲ್ಲಿ ವಿರಾಟ್‌ 55 ರನ್‌ ಬಾರಿಸುವಲ್ಲಿ ಸಫಲರಾದರೆ, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಾಕ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

Take a Poll

ಕುಮಾರ್‌ ದಾಖಲೆಯ ಮೇಲೆ ಕಣ್ಣು

ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಾಕ್ಕರ್ ತಾವಾಡಿದ 404 ಏಕದಿನ ಪಂದ್ಯಗಳ 380 ಇನಿಂಗ್ಸ್‌ಗಳಲ್ಲಿ 14234 ರನ್‌ ಕಲೆ ಹಾಕಿದ್ದಾರೆ. ವಿರಾಟ್‌ ಈ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಹೊಸ ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ವಿರಾಟ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 55 ರನ್‌ ಬಾರಿಸುವಲ್ಲಿ ಸಫಲರಾದರೆ, ಎರಡನೇ ಸ್ಥಾನಕ್ಕೆ ಜಂಪ್ ಆಗಬಹುದು. 10 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ನವ ಇತಿಹಾಸ ನಿರ್ಮಿಸುವ ಇರಾದೆ ವಿರಾಟ್ ಅವರದ್ದಾಗಿದೆ.

Virat Kohli Eyes Historic Milestone Just 55 Runs Away from Surpassing Kumar Sangakkara in ODI Runs

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಟೀಮ ಇಂಡಿಯಾದ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರಿಗೆ ಅಗ್ರ ಸ್ಥಾನ. ಇವರು ಆಡಿದ 463 ಪಂದ್ಯಗಳ 452 ಇನಿಂಗ್ಸ್‌ಗಳಲ್ಲಿ 18426 ರನ್‌ ಸಿಡಿಸಿದ್ದಾರೆ. ಇದರಲ್ಲಿ 49 ಶತಕ ಹಾಗೂ 96 ಅರ್ಧಶತಕಗಳು ಸೇರಿವೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ವಿರಾಟ್ ಪ್ರದರ್ಶನ

ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವುರ ಆಡಿದ 4 ಪಂದ್ಯಗಳಲ್ಲಿ 72ರ ಸರಾಸರಿಯಲ್ಲಿ 217 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕ ಸಹ ಸೇರಿದೆ.

Story first published: Saturday, March 8, 2025, 16:34 [IST]
Other articles published on Mar 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+