Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ರಾಹುಲ್‌ ದ್ರಾವಿಡ್‌ ದಾಖಲೆಯ ಮೇಲೆ ವಿರಾಟ್ ಕೊಹ್ಲಿ ಕಣ್ಣು

ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಹ ಭಾಗವಹಿಸುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದ್ದು, ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಇನ್ನು ಭಾರತ ತಂಡ ಲೀಗ್‌ನ ಮೂರನೇ ಪಂದ್ಯವನ್ನು ಭಾನುವಾರ, ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

ಟೀಮ್ ಇಂಡಿಯಾ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಪಾಕ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿತು. ಅಲ್ಲದೆ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಲಯವನ್ನು ಕಂಡುಕೊಂಡಿದ್ದರು. ಈ ಪಂದ್ಯದಲ್ಲಿ 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಶತಕ ಬಾರಿಸಿ ಅಬ್ಬರಿಸಿದ್ದರು. ಈಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಮತ್ತೊಂದು ದಾಖಲೆಯನ್ನು ಬರೆಯುವ ಕನಸಿನಲಿದ್ದಾರೆ.

Virat Kohli Eyes Rahul Dravid s Catching Record in India vs New Zealand Clash

ಭಾರತ, ನ್ಯೂಜಿಲೆಂಡ್ ಪಂದ್ಯದಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ ಮೇಲೆ ನೆಟ್ಟಿರುತ್ತವೆ. ಆದರೆ ಈ ಬಾರಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ದಾಖಲೆಯನ್ನು ಬರೆಯುತ್ತಿಲ್ಲ. ಈ ಬಾರಿ ತಮ್ಮ ಅಮೋಘ ಫೀಲ್ಡಿಂಗ್‌ ನೆರವಿನಿಂದ ದಾಖಲೆ ಬರೆಯುವ ಕನಸಿನಲಿದ್ದಾರೆ. ಪಾಕಿಸ್ತಾನ ವಿರುದ್ಧ ವಿರಾಟ್‌ ಎರಡು ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಮೊಹಮ್ಮದ್ ಅಜರುದ್ದೀನ್ ದಾಖಲೆಯ ಸಮಕ್ಕೆ ನಿಂತರು.

ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಖುಸ್ದಿಲ್ ಶಾ ಮತ್ತು ನಸೀಮ್ ಶಾ ಕ್ಯಾಚ್‌ ಪಡೆದು ಅಬ್ಬರಿಸಿದ್ದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಅಜರುದ್ಧಿನ್‌ ದಾಖಲೆ ಅಳಿಸಿ ಹಾಕಿದರು. ಟೀಮ್ ಇಂಡಿಯಾದ ಮಾಜಿ ನಾಯಕ ಅಜರುದ್ಧಿನ್‌ 156 ಕ್ಯಾಚ್‌ಗಳನ್ನು ಪಡೆದಿದ್ದರು. ಈಗ ವಿರಾಟ್‌ ಕೊಹ್ಲಿಯ ಬುಟ್ಟಿಯಲ್ಲಿ 158 ಕ್ಯಾಚ್‌ಗಳು ಇವೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿಗೆ ರಾಹುಲ್ ದ್ರಾವಿಡ್ ದಾಖಲೆಯನ್ನು ಅಳಿಸುವ ಅವಕಾಶ ಇದೆ.

Virat Kohli Eyes Rahul Dravid s Catching Record in India vs New Zealand Clash

ರಾಹುಲ್‌ ದ್ರಾವಿಡ್‌ ದಾಖಲೆ ಮೇಲೆ ಕಣ್ಣು

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಇವರು 509 ಪಂದ್ಯಗಳಲ್ಲಿ 334 ಕ್ಯಾಚ್‌ ಪಡೆದಿದ್ದಾರೆ. ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ 2 ಕ್ಯಾಚ್ ಪಡೆದಲ್ಲಿ ದ್ರಾವಿಡ್‌ ಅವರ ದಾಖಲೆ ಅಳಿಸಬಲ್ಲರು. ಸದ್ಯ ವಿರಾಟ್‌ 333 ಕ್ಯಾಚ್‌ ಪಡೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಕೀರ್ತಿ ಶ್ರೀಲಂಕಾದ ಮಹೇಲ ಜಯವರ್ಧನೆ (440 ಕ್ಯಾಚ್‌) ಅವರದ್ದಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಐದು ಭಾರತೀಯ ಆಟಗಾರರು

ರಾಹುಲ್‌ ದ್ರಾವಿಡ್‌, 504 ಪಂದ್ಯ, 334 ಕ್ಯಾಚ್‌
ವಿರಾಟ್‌ ಕೊಹ್ಲಿ, 547 ಪಂದ್ಯ, 333 ಕ್ಯಾಚ್‌
ಮೊಹಮ್ಮದ್‌ ಅಜರುದ್ಧಿನ್‌, 433 ಪಂದ್ಯ, 261 ಕ್ಯಾಚ್‌
ಸಚಿನ್ ತೆಂಡೂಲ್ಕರ್‌, 664 ಪಂದ್ಯ, 256 ಕ್ಯಾಚ್‌
ರೋಹಿತ್ ಶರ್ಮಾ, 496 ಪಂದ್ಯ, 229 ಕ್ಯಾಚ್‌

Story first published: Wednesday, February 26, 2025, 19:30 [IST]
Other articles published on Feb 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+