Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿರಾಟ್‌ ಕೊಹ್ಲಿ 67 ರನ್‌ ಬಾರಿಸಿದರೆ ದೊಡ್ಡ ದಾಖಲೆ

ಆರ್‌ಸಿಬಿ ತನ್ನ ಲೀಗ್‌ ಹಂತದ 13ನೇ ಪಂದ್ಯವನ್ನು ಶುಕ್ರವಾರ ಲಕ್ನೋನಲ್ಲಿ ಆಡಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ ಆತಿಥ್ಯ ನೀಡಬೇಕಿತ್ತು. ಆದರೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪಂದ್ಯ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಯಿತು. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಆರ್‌ಸಿಬಿ ತಂಡದ್ದಾಗಿದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.

ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಅಂಗಳಕ್ಕೆ ಇಳಿಯಲಿದ್ದಾರೆ. ಹೋದ ಶನಿವಾರ ಕೆಕೆಆರ್‌ ವಿರುದ್ಧ ವಿರಾಟ್‌ ಅಂಗಳಕ್ಕೆ ಇಳಿಯಬೇಕಿತ್ತು. ಆದರೆ ಆ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯದ ವೇಳೆ ಆರ್‌ಸಿಬಿ ಫ್ಯಾನ್ಸ್‌ ಬಿಳಿ ಜೆರ್ಸಿ ಹಾಕಿಕೊಂಡು ಬಂದು ವಿರಾಟ್‌ಗೆ ಗೌರವ ಸೂಚಿಸಿದ್ದರು. ಈಗ ವಿರಾಟ್‌ ಲಕ್ನೋನಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Virat Kohli Eyes Records in Crucial RCB Clash Against SRH After Test Retirement

ಆರ್‌ಸಿಬಿ ಪರ ಬ್ಯಾಟ್‌ ಮಾಡುವ ವಿರಾಟ್‌ ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 62 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಷ್ಟೇ ಸಂಖ್ಯೆಯ ಅರ್ಧಶತಕಗಳನ್ನು ಡೇವಿಡ್‌ ವಾರ್ನರ್ ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಬಾರಿಸುವಲ್ಲಿ ಸಫಲರಾದರೆ, ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ ವಿರಾಟ್‌ ಈ ಪಂದ್ಯದಲ್ಲಿ ಮತ್ತೊಂದು ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

67 ರನ್‌ ಬಾರಿಸಿದರೆ...

ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 67 ರನ್‌ ಸಿಡಿಸಿದಲ್ಲಿ ಆರ್‌ಸಿಬಿ ಪರ 9000 ರನ್‌ ಗಳಿಸಿದ ದಾಖಲೆಯನ್ನು ಮಾಡಲಿದ್ದಾರೆ. ಇವರು 2008ರಿಂದ ಆರ್‌ಸಿಬಿ ಪರ ಐಪಿಎಲ್‌ ಹಾಗೂ ಚಾಂಪಿಯನ್ಸ್‌ ಲೀಗ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಈ ವೇಳೆ ವಿರಾಟ್‌ 278 ಟಿ20 ಪಂದ್ಯಗಳನ್ನು ಆಡಿದ್ದು, 39.52 ಸರಾಸರಿಯಲ್ಲಿ 8933 ರನ್ ಗಳಿಸಿದ್ದಾರೆ. ಈ ವೇಳೆ 8 ಶತಕ ಮತ್ತು 64 ಅರ್ಧಶತಕ ಸೇರಿವೆ. ವಿರಾಟ್‌ ಅವರು ಹೈದರಾಬಾದ್‌ ವಿರುದ್ಧ ಆಡಿದ 23 ಪಂದ್ಯಗಳಲ್ಲಿ 36.29 ಸರಾಸರಿಯಲ್ಲಿ 762 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕ ಇನ್ನಿಂಗ್ಸ್‌ಗಳು ಸೇರಿವೆ.

Virat Kohli Eyes Records in Crucial RCB Clash Against SRH After Test Retirement

ವಿರಾಟ್‌ ಕೊಹ್ಲಿ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ವಿರಾಟ್‌ ಈ ಲೀಗ್‌ನಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ. ವಿರಾಟ್ ಈ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 505 ರನ್‌ ಸಿಡಿಸಿದ್ದಾರೆ. ಈ ವೇಳೆ 7 ಅರ್ಧಶತಕಗಳು ಸೇರಿವೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ವಿರಾಟ್‌ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Story first published: Friday, May 23, 2025, 12:54 [IST]
Other articles published on May 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+