Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಸ್ನೇಹಿತನ ದಾಖಲೆಯ ಮೇಲೆ ಚೇಸಿಂಗ್ ಸ್ಟಾರ್ ಕಣ್ಣು

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೇರೆ ಬೇರೆ ತಂಡಗಳ ಪರ ಕಣಕ್ಕೆ ಇಳಿದಿದ್ದಾರೆ. ಇತ್ತೀಚಿಗೆ ಮುಂಬೈನ ವಾಂಖೇಡೆಯಲ್ಲಿ ಈ ಇಬ್ಬರೂ ಸ್ಟಾರ್ ಆಟಗಾರರು ಮುಖಾಮುಖಿಯಾಗಿದ್ದರು. ಈ ವೇಳೆ ಇವರಿಬ್ಬರೂ ಪ್ರತಿನಿಧಿಸುವ ತಂಡ ತಮ್ಮ ತಮ್ಮ ತಂಡಗಳ ಸ್ಟಾರ್ ಆಟಗಾರರಾಗಿದ್ದಾರೆ. ಈ ವೇಳೆ ಅಭಿಮಾನಿಗಳ ಕಣ್ಣು ತಮ್ಮ ತಮ್ಮ ಸ್ಟಾರ್ ಆಟಗಾರರ ಮೇಲೆ ನೆಟ್ಟಿವೆ. ಈ ವೇಳೆ ಇಬ್ಬರೂ ಐಪಿಎಲ್‌ನಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಆದರೆ ಆ ಒಂದು ದಾಖಲೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ದಾಖಲೆಯನ್ನು ಮೀರಿ ನಿಲ್ಲುವ ಸಾಧ್ಯತೆ ಇದೆ.

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹಿರಿಮೆ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಅವರಿಗೆ ಸಲ್ಲುತ್ತದೆ. ಇವರು 357 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ದಾಖಲೆಯನ್ನು ಸದ್ಯಕ್ಕಂತು ಮುರಿಯುವುದು ಕಷ್ಟ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರನೇ ರೋಹಿತ್ ಶರ್ಮಾ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಐಪಿಎಲ್‌ನಲ್ಲಿ 282 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Virat Kohli Eyes Rohit Sharma s Sixes Record in IPL Showdown

ವಿರಾಟ್‌ ಕೊಹ್ಲಿ 248 ಐಪಿಎಲ್‌ ಇನಿಂಗ್ಸ್‌ಗಳಲ್ಲಿ 278 ಸಿಕ್ಸರ್ ಬಾರಿಸಿದ್ದಾರೆ. ಇದೇ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ರೋಹಿತ್‌ ಶರ್ಮಾ ಅವರ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಅಳಿಸುವ ಅವಕಾಶ ಇದೆ.

ದಾಖಲೆ ಮೇಲೆ ವಿರಾಟ್ ಕಣ್ಣು

ರೋಹಿತ್ ಶರ್ಮಾ ಒಬ್ಬ ಬೆಸ್ಟ್‌ ಟೈಮಿಂಗ್ ಹೊಂದಿರುವ ಪ್ಲೇಯರ್. ಯಾವ ಪ್ಲೇಯರನ್ನು ಯಾವ ಸ್ಟ್ಯಾಂಡ್‌ಗೆ ಕಳಿಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಪ್ರಸಕ್ತ ಲೀಗ್‌ನಲ್ಲಿ ರೋಹಿತ್ ಶರ್ಮಾ ಫಾರ್ಮ್ ನಿಜಕ್ಕೂ ಫ್ರಾಂಚೈಸಿ ಚಿಂತೆಯನ್ನು ಹೆಚ್ಚಿಸಿದೆ. ಆದರೆ ಇದೇ ವೇಳೆಗೆ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಅಲ್ಲದೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರಾಗುತ್ತಿದ್ದಾರೆ. ಈ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ 5 ಸಿಕ್ಸರ್‌ ಬಾರಿಸಿದರೆ, ರೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.

Virat Kohli Eyes Rohit Sharma s Sixes Record in IPL Showdown

ಪ್ರಸಕ್ತ ಫಾರ್ಮ್‌ನ್ನು ವಿರಾಟ್ ಮುಂದುವರೆಸಿದರೆ, ನಿಶ್ಚಿತವಾಗಿ ರೋಹಿತ್ ಶರ್ಮಾ ಅವರ ಸಿಕ್ಸರ್‌ಗಳ ದಾಖಲೆಯನ್ನು ಮೀರಿ ನಿಲ್ಲಬಹುದು. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಹಿರಿಮೆ ಮಹೇಂದ್ರ ಸಿಂಗ್‌ ಧೋನಿ ಅವರಿಗೂ ಸಲ್ಲುತ್ತದೆ. ಧೋನಿ ಆಡಿರುವ 234 ಇನಿಂಗ್ಸ್‌ಗಳಲ್ಲಿ 259 ರನ್‌ ಸಿಡಿಸಿದ್ದಾರೆ. ಧೋನಿ ಸಾಮಾನ್ಯವಾಗಿ 5 ರಿಂದ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಕ್ರಮಾಂಕವನ್ನು ನೋಡಿದರೆ ಈ ನಂಬರ್ ಬೆಸ್ಟ್.

Story first published: Wednesday, April 9, 2025, 18:46 [IST]
Other articles published on Apr 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+