Virat Kohli: ವಿರಾಟ್ ಕೊಹ್ಲಿ ಬೆನ್ನು ಬಿಡ್ಡುತ್ತಿಲ್ಲ ಕಳಪೆ ಕಾಟ: 2012ರ ಬಳಿಕ ಹೀಗೆ ಆಗಿದ್ದು ಇದೇ ಮೊದಲು
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಮೈದಾನಕ್ಕೆ ಇಳಿದರೆ ರನ್‌ಗಳ ಮೂಲಕ ದಾಖಲೆ ಬರೆಯುತ್ತಿದ್ದ ಪ್ಲೇಯರ್ ಬ್ಯಾಟ್ ಈಗ ಮೌನಕ್ಕೆ ಶತಣಾಗಿದೆ. ವಿಶ್ವದ ಯಾವುದೇ ಅಂಗಳದಲ್ಲಾದ್ರೂ ಸಲೀಸಾಗಿ ರನ್ ಕಲೆ ಹಾಕುತ್ತಿದ್ದ ಪ್ಲೇಯರ್, ಮಂಕಾಗಿದ್ದಾರೆ. ಇತ್ತೀಚಿಗೆ ಆಸ್ಟ್ರೇಲಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ವಿರಾಟ್ ನೀರಸ ಪ್ರದರ್ಶನ ಮುಂದುವರೆದಿದ್ದು ಟೀಕೆಗಳು ಕೇಳಿ ಬಂದಿವೆ. ಇವರ ಆಟದ ನೇರ ಪರಿಣಾಮ ಅವರ ಶ್ರೇಯಾಂಕದ ಮೇಲೂ ಆಗಿದೆ. ವಿರಾಟ್ ತಮ್ಮ ವೃತ್ತಿ ಜೀವನದ 12 ವರ್ಷಗಳಿಂದ ಕಾಣದ ಶ್ರೇಯಾಂಕವನ್ನು ಈಗ ಕಂಡಿದ್ದಾರೆ.
ಆಸ್ಟ್ರೇಲಿಯಾದ ಪ್ರವಾಸದ ಮೊದಲ ಪಂದ್ಯದಲ್ಲಿ ವಿರಾಟ್ ಅಬ್ಬರಿಸಿದ್ದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದ ವಿರಾಟ್, ಶತಕ ಬಾರಿಸಿ ಸಂಭ್ರಮಿಸಿದ್ದರು. ವಿರಾಟ್ ಅವರ ಈ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಆದರೆ ಆಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ ಅಂಗಳದಲ್ಲಿ ನಿರಾಸೆಯ ಕಡಲಿನಲ್ಲಿ ವಿರಾಟ್ ಪ್ರಯಾಣ ಮಾಡಿದ್ದಾರೆ. ಒಟ್ಟಾರೆ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಇವರು ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದಾರೆ.

ಕಳಪೆ ಬ್ಯಾಟಿಂಗ್
ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್ ಉತ್ತಮ ದಾಖಲೆಯನ್ನು ಹೊಂದಿದ್ದರು. ಆದರೆ ಈ ಬಾರಿ ಪ್ರವಾಸದಲ್ಲಿ ನೀಡಿದ ಪ್ರದರ್ಶನ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದರ ನೇರ ಪರಿಣಾಮ ಐಸಿಸಿ ಟೆಸ್ಟ್ ಶ್ರೇಯಾಂಕದ ಮೇಲೂ ಆಗಿದೆ. ವಿರಾಟ್ ಸದ್ಯ ಶ್ರೇಯಾಂಕದಲ್ಲಿ ಟಾಪ್ 25ರಲ್ಲೂ ಸ್ಥಾನ ಪಡೆದಿಲ್ಲ ಎಂಬುದೇ ಬೇಸರದ ಸಂಗತಿ.
ಅಗ್ರ 25 ರಿಂದ ಹೊರಕ್ಕೆ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ಬೆಸ್ಟ್ ಪ್ಲೇಯರ್‌ಗಳಲ್ಲಿ ಒಬ್ಬರು. ಆದರೆ ಸದ್ಯದ ಫಾರ್ಮ್‌ನ್ನು ನೋಡಿದರೆ ಇದು ಸುಳ್ಳು ಎಂಬಂತಾಗಿದೆ. ಆಫ್ ಸ್ಟಂಪ್ ಕಿರಿಕಿರಿ ವಿರಾಟ್‌ರನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿದೆ. ಬ್ಯಾಟಿಂಗ್ ಫ್ರೆಂಡ್ಲಿ ಪಿಚ್‌ಗಳಲ್ಲೂ ವಿರಾಟ್ ಅಬ್ಬರಿಸದೇ ಇರುವುದು ಟೀಮ್ ಮ್ಯಾನೇಜ್ಮೆಂಟ್ ಟೆನ್ಷನ್ ದುಪ್ಪಟ್ಟು ಆಗುವ ಹಾಗೆ ಮಾಡಿದೆ. ಬುಧುವಾರ ಬಿಡುಗಡೆ ಆದ ಐಸಿಸಿ ಶ್ರೇಯಾಂಕದಲ್ಲಿ ವಿರಾಟ್ 3 ಸ್ಥಾನ ಕುಸಿತ ಕಂಡಿದ್ದಾರೆ. ಈ ಮೂಲಕ ಅಗ್ರ 25 ಶ್ರೇಯಾಂಕದಲ್ಲೂ ವಿರಾಟ್ ಸ್ಥಾನ ಪಡೆದಿಲ್ಲ. ಸದ್ಯ ಇವರ ಬುಟ್ಟಿಯಲ್ಲಿ 614 ರೇಟಿಂಗ್ ಪಾಯಿಂಟ್ಸ್ ಗಳಿವೆ.
ವಿರಾಟ್ ಕೊಹ್ಲಿ 2012ರ ಬಳಿಕ ಮೊದಲ ಬಾರಿಗೆ ಟಾಪ್ 25 ಶ್ರೇಯಾಂಕದಿಂದ ಹೊರ ನಡೆದಿದ್ದಾರೆ. 2011ರಲ್ಲಿ ವಿರಾಟ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಆ ಬಳಿಕ ಬ್ಯಾಟಿಂಗ್‌ನಲ್ಲಿ ಸ್ಥಿರ ತೆ ಕಾಯ್ದುಕೊಂಡು ರನ್ ಕಲೆ ಹಾಕುತ್ತಾ ಸಾಗಿದ್ದರು. ಆದರೆ ಈಗ ಬ್ಯಾಟ್ ಮೌನಕ್ಕೆ ಶರಣಾಗಿದ್ದು, ಕಳಪೆ ಸಾಧನೆ ಮಾಡಿದ್ದಾರೆ. 2018ರಲ್ಲಿ ವಿರಾಟ್ ತಮ್ಮ ಟೆಸ್ಟ್ ಕರಿಯರ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದರು. ಅಲ್ಲದೆ 918 ರೇಟಿಂಗ್ ಅಂಕವನ್ನು ಸಂಪಾದಿಸಿದ್ದರು. ಇದು ಭಾರತೀಯ ಆಟಗಾರನೊಬ್ಬನ ಶ್ರೇಷ್ಠ ಸಾಧನೆ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications