ಅಭ್ಯಾಸದ ವೇಳೆ ಗಮನ ಸೆಳೆದ ವಿರಾಟ್ ಕೊಹ್ಲಿ, ಬುಮ್ರಾ ಕಾಳಗ
ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳು ಚೆನ್ನೈನ ಚೆಪಾಕ ಅಂಗಳದಲ್ಲಿ ಭರ್ಜರಿ ತಾಲೀಮು ನಡೆಸಿವೆ. ಭಾರತ ತಂಡದ ಸ್ಟಾರ್ ಆಟಗಾರರು ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯನ್ನು ಗೆಲ್ಲುವ ಪ್ಲ್ಯಾನ್ ಮಾಡಿಕೊಂಡಿದೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಲು ತಯಾರಿ ನಡೆಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಜಸ್ಪ್ರಿತ್ ಬುಮ್ರಾ ಅವರ ಎಸೆತಗಳನ್ನು ಎದುರಿಸಿದರು. ಈ ಮೂಲಕ ಕಠಿಣ ಸವಾಲಿಗೆ ತಾವು ರೆಡಿ ಎಂದು ಸೂಚಿಸಿದಂತಿತ್ತು. ಇನ್ನು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರಿತ್ ಬುಮ್ರಾ ನಡುವಣ ಅಭ್ಯಾಸ ಎಲ್ಲರ ಚಿತ್ತ ಕದ್ದಿತ್ತು.

ಬುಮ್ರಾ VS ವಿರಾಟ್
ಸಾಮಾನ್ಯವಾಗಿ ಐಪಿಎಲ್‌ಗಳಲ್ಲಿ ಜಸ್ಪ್ರಿತ್ ಬುಮ್ರಾ VS ವಿರಾಟ್ ಕೊಹ್ಲಿ ಅವರ ಕಾಳಗವನ್ನು ನೋಡುತ್ತೇವೆ. ಆದರೆ ಈ ಬಾರಿ ಟೆಸ್ಟ್ ಅಭ್ಯಾಸದ ವೇಳೆ ಇಬ್ಬರ ಖ್ಯಾತ ನಾಮರ ನಡುವಿನ ಹೋರಾಟ ಗಮನ ಸೆಳೆಯಿತು. ಜಸ್ಪ್ರಿತ್ ಬುಮ್ರಾ ಅವರ ಎಸೆತಗಳನ್ನು ಎದುರಿಸುವಲ್ಲಿ ವಿರಾಟ್ ಕೊಹ್ಲಿ, ಕೊಂಚ ಹಿಂದೆ ಬಿದ್ದಂತೆ ಕಂಡು ಬಂದಿತು.
ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಕೆಂಪು ಮಣ್ಣಿನ ಪಿಚ್ ಮೇಲೆ ನಡೆಯಲಿದೆ. ಅಭ್ಯಾಸದ ವೇಳೆ ಬುಮ್ರಾ ಅವರ ಚೆಂಡನ್ನು ತಾವು ಹೇಳಿದಂತೆ ಕುಣಿಸಿದರು. ಈ ವೇಳೆ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಹಲವು ಚೆಂಡನ್ನು ಬಿಟ್ಟರು. ಇನ್ನು ಹಲವು ಬಾರಿ ಬೀಟ್ ಸಹ ಆದರು. ವರದಿಗಳ ಅನುಸಾರ ಬುಮ್ರಾ ಕೆಲವೊಮ್ಮೆ ಔಟ್ ಸ್ವಿಂಗ್ ಹಾಕಿ ಕಾಟ ನೀಡಿದರೆ, ಇನ್ನು ಕೆಲವೊಮ್ಮೆ ನೈಜ ಇನ್ ಸ್ವಿಂಗ್ ಮಾಡಿ ಕೊಹ್ಲಿಗೆ ಸತಾಯಿಸಿದರು.

ಜಸ್ಪ್ರಿತ್ ಬುಮ್ರಾ ಅವರ ಎಸೆದ ಒಂದು ಚೆಂಡು ಬಿದ್ದಿದ್ದನ್ನು ಗಮನಿಸಿದ ಕೊಹ್ಲಿ, ಮುಂದೆ ಬಂದು ಆಡಲು ಪ್ರಯತ್ನಿಸಿದರು. ಕೊಹ್ಲಿ ಅವರ ಪ್ರಕಾರ ಆ ಚೆಂಡು ಬಹಳ ಎತ್ತರದಲ್ಲಿ ಬರುತ್ತದೆ ಎಂದಾಗಿತ್ತು. ಆದರೆ ಚೆಂಡು ನೇರವಾಗಿ ಸ್ಟಂಪ್‌ಗೆ ಬಡೆದಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾ ಬೌಲರ್ ಕಟ್ಟಿ ಹಾಕಲು ಭಾರತ ಮಾಸ್ಟರ್ ಪ್ಲ್ಯಾನ್
ಬಾಂಗ್ಲಾದೇಶದ ತಂಡದಲ್ಲಿ ಸ್ಥಾನ ಪಡೆದಿರುವ 6 ಅಡಿ 5 ಇಂಚಿನ ಎತ್ತರದ ಬೌಲರ್ ಅವರನ್ನು ಎದುರಿಸಲು ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಗುರ್ನೂರ್ ಸಿಂಗ್ ಅವರನ್ನು ಬಳಸಿಕೊಳ್ಳಲಾಯಿತು. ಇವರು ಸಹ ವಿರಾಟ್ ಕೊಹ್ಲಿ ಅವರಿಗೆ ತೊಂದರೆಯನ್ನು ಉಂಟು ಮಾಡಿದ್ದಾರೆ.
ಪಾಕಿಸ್ತಾನದ ಪ್ರವಾಸದ ವೇಳೆ 6 ಅಡಿಗಿಂತ ಹೆಚ್ಚು ಎತ್ತರದ ನಹಿದ್ ರಾಣಾ ಪಾಕ್ ಬ್ಯಾಟರ್‌ಗಳನ್ನು ಕಾಡಿದ್ದರು. ಇದನ್ನು ಅರಿತ ಟೀಮ್ ಇಂಡಿಯಾ ಗುರ್ನೂರ್ ಸಿಂಗ್ ಅವರನ್ನು ಬಳಸಿಕೊಂಡು ಅಭ್ಯಾಸ ನಡೆಸಲು ಮುಂದಾಯಿತು. ಗುರ್ನೂರ್ ಅವರು ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications