For Quick Alerts
ALLOW NOTIFICATIONS  
For Daily Alerts
 

Virat kohli: "ಪಿಚ್‌ ಯಾವುದಾದರೇನು, ಬೌಲರ್‌ ಯಾರಾದರೇನು, ನಾನು ಔಟ್‌ ಆಗುವುದು ಹೀಗೆ"

ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ರೋಹಿತ್ ಶರ್ಮಾ ತಂಡದಿಂದ ಹೊರ ನಡೆದಿದ್ದರಿಂದ, ಇವರ ಸ್ಥಾನದಲ್ಲಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದಾರೆ. ಈ ಪಂದ್ಯದಲ್ಲೂ ಟೀಮ್ ಇಂಡಿಯಾದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದು ನಿರಾಸೆ ಮೂಡಿಸಿದ್ದಾರೆ. ಅದರಲ್ಲೂ ವಿರಾಟ್‌ ಕೊಹ್ಲಿ ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಯನ್ನು ಉಲ್ಟಾ ಮಾಡಿದ್ದಾರೆ.

ಪ್ರತಿ ಟೆಸ್ಟ್‌ ಆರಂಭಕ್ಕೂ ಮುನ್ನ ನಡೆಯುವ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ, ಪುಟಿದೇಳುವ ಸೂಚನೆಯನ್ನು ನೀಡುತ್ತಾರೆ. ಆದರೆ ಮೈದಾನಕ್ಕೆ ಇಳಿದ ಮೇಲೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸುತ್ತಾರೆ. ಆದರೆ ಐದನೇ ಟೆಸ್ಟ್‌ನಲ್ಲಿ ಇವರು ಬಿಗ್ ಇನಿಂಗ್ಸ್‌ ಕಟ್ಟುವ ಆಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ಆ ಆಸೆ ಸಹ ಮಣ್ಣು ಪಾಲಾಗಿದೆ. ಪಂದ್ಯದ ವೇಳೆ ಪೂರ್ತಿ ಕಂಟ್ರೋಲ್‌ನಲ್ಲಿ ಕಂಡು ಬಂದ ವಿರಾಟ್‌ ಕೊಹ್ಲಿ, ಯಾವುದೋ ಹೊಸ ತಪ್ಪು ಮಾಡಿ ಔಟ್‌ ಆಗಿಲ್ಲ. ಬದಲಿಗೆ ಅದೇ ತಮ್ಮ ಹಳೆಯ ತಪ್ಪಿನ ಹಿಂದೆ ಬಿದ್ದಿದ್ದಾರೆ.

Virat Kohli Falls to Off-Stump Trap Again as India Struggles in Sydney Test Against Australia

ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಿಂದ ಅವರನ್ನು ತಂಡದಿಂದ ಹೊರಗಿಡಲಾಯಿತು. ಹೀಗಾಗಿ ವಿರಾಟ್ ಕೊಹ್ಲಿ ಅವರ ಮೇಲೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಗಳು ಇದ್ದವು. ಹೊಸ ವರ್ಷದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ತಮ್ಮ ಹಿಂದಿನ ತಪ್ಪುಗಳಿಂದ ಪಾಠ ಕಲಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿರಾಟ್ ಕೊಹ್ಲಿ, ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ಸಿಡ್ನಿಯಲ್ಲಿ ತೋರಿಸುವಲ್ಲಿ ವಿಫಲರಾಗಿದ್ದಾರೆ.

ಆಫ್‌ ಸ್ಟಂಪ್‌ ಕಿರಿಕಿರಿ

ಮೊದಲೆಲ್ಲಾ ವಿರಾಟ್ ಕೊಹ್ಲಿ ಕ್ರೀಸ್‌ಗೆ ಇಳಿದರೆ ಎದುರಾಳಿ ಬೌಲರ್‌ಗಳಿಗೆ ಒಂದು ಭಯ ಇರುತ್ತಿತ್ತು. ಆದರೆ ಈಗ ವಿರಾಟ್ ಕೊಹ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಎದುರಾಳಿ ತಂಡದ ಬೌಲರ್‌ಗಳು ಫುಲ್‌ ರಿಲ್ಯಾಕ್ಸ್ ಆಗುತ್ತಾರೆ. ಕಾರಣ ವಿರಾಟ್‌ಗೆ ಔಟ್ ಮಾಡಲು ಅವರು ಹೊಸದನ್ನೇನು ಮಾಡುವ ಅವಶ್ಯಕತೆ ಇಲ್ಲ. ಹಿಂದಿನ ಪಂದ್ಯಗಳಲ್ಲಿ ಹೇಗೆ ಔಟ್ ಅಗಿದ್ದರೋ, ಆ ವಿಡಿಯೋಗಳನ್ನು ನೋಡಿಕೊಂಡು ಬಂದು ಬೌಲಿಂಗ್ ಮಾಡಿದರೆ ಸಾಕು. ಬೌಲರ್‌ಗಳು ವಿರಾಟ್ ಕ್ರೀಸ್‌ಗೆ ಬಂದರೆ, ವಿಕೆಟ್‌ ಟು ವಿಕೆಟ್‌ ಬೌಲಿಂಗ್ ಮಾಡುವುದೇ ಇಲ್ಲ. ಆಫ್‌ ಸ್ಟಂಪ್‌ ಆಚೆಗೆ ಹಾಕಲು ಆರಂಭಿಸುತ್ತಾರೆ.

Virat Kohli Falls to Off-Stump Trap Again as India Struggles in Sydney Test Against Australia

ವಿರಾಟ್‌ ಕೊಹ್ಲಿ ಒಬ್ಬ ಫ್ರಂಟ್‌ ಫುಟ್ ಆಟಗಾರ. ಇವರಿಗೆ ಆಫ್‌ ಸ್ಟಂಪ್ ಆಚೆಗೆ ಚೆಂಡನ್ನು ಹಾಕಿ ಆಡಲು ಸೂಚಿಸುತ್ತಾರೆ. ವಿರಾಟ್‌ ನಾಲ್ಕು ಹಾಗೂ ಐದನೇ ಸ್ಟಂಪ್‌ ಮೇಲೆ ಇರುವ ಚೆಂಡನ್ನು ಕೆಣಕಿ ಸ್ಲಿಪ್‌ನಲ್ಲಿರುವ ಫೀಲ್ಡರ್‌ಗೆ ಕ್ಯಾಚ್ ನೀಡುತ್ತಾರೆ. ಈ ಸರಣಿಯಲ್ಲಿ ವಿರಾಟ್‌ ಇದೇ ರೀತಿ ಹೆಚ್ಚು ಬಾರಿ ಔಟ್ ಆಗಿದ್ದಾರೆ. ಇದೇ ರಾಗ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲೂ ಮುಂದುವರೆದಿದೆ.

ಹಳೆಯ ಚಾಳಿ ಮುಂದುವರೆಸಿದ ವಿರಾಟ್

ಶುಕ್ರವಾರದಿಂದ ಆರಂಭವಾದ ಪಂದ್ಯದಲ್ಲಿ ವಿರಾಟ್‌ ತಾವು ಎದುರಿಸಿದ ಎರಡನೇ ಎಸೆತದಲ್ಲಿ ಔಟ್ ಆಗಬೇಕಿತ್ತು. ಆದರೆ ಇವರ ಬ್ಯಾಟ್‌ ಅಂಚಿನಿಂದ ತಾಗಿ ಹೋದ ಚೆಂಡು ಸ್ಮಿತ್‌ ಅವರ ಕೈ ಸೇರುವ ಮುನ್ನವೇ ಗ್ರೌಂಡ್‌ಗೆ ಟಚ್ ಆಗಿತ್ತು. ಇದನ್ನು ಪದೇ ಪದೇ ನೋಡಿದ ಫೀಲ್ಡ್ ಅಂಪೈರ್‌ ನಟೌಟ್ ಎಂದು ನೀಡಿದರು. ಒಂದು ಹಂತದಲ್ಲಿ 64 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 20 ರನ್‌ ಬಾರಿಸಿ ಭರವಸೆ ಮೂಡಿಸಿದ್ದ ವಿರಾಟ್‌, ನಿರಾಸೆ ಅನುಭವಿಸಿದರು.

ಸ್ಕಾಟ್‌ ಬೋಲೆಂಡ್‌ ಎಸೆದ ಇನಿಂಗ್ಸ್‌ 32ನೇ ಓವರ್‌ನ ಎರಡನೇ ಎಸೆತದಲ್ಲಿ ವಿರಾಟ್ ಹಳೆಯ ಧಾಟಿಯಲ್ಲಿ ಔಟ್ ಆದರು. ಬೋಲೆಂಡ್‌ ಎಸೆದ ಗುಡ್ ಲೆಂಥ್ ಹಾಗೂ ಐದನೇ ಸ್ಟಂಪ್ ಮೇಲೆ ಇದ್ದ ಚೆಂಡನ್ನು ವಿರಾಟ್ ಕೆಣಕಿ ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ವೆಬ್‌ಸ್ಟರ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಹೊಸ ವರ್ಷದಂದೂ ಹೊಸ ಆಸೆ ಫಲಿಲಸಲಿಲ್ಲ.

Story first published: Friday, January 3, 2025, 10:12 [IST]
Other articles published on Jan 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+