ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮಗಳು ಆಟಗಾರರಿಗೆ ಕಬ್ಬಿಣದ ಕಡಲೆಯಂತೆ ಪರಿಣಮಿಸುತ್ತಿವೆ. ಆದರೆ ನೀವು ಮಾಡಿದ ರೂಲ್ಸ್ ಅನ್ನು ಫಾಲೋ ಮಾಡ್ತಿನಿ. ಅಲ್ಲದೆ ನನ್ನ ಡಯೇಟ್ ಪ್ಲ್ಯಾನ್ ಬ್ರೇಕ್ ಮಾಡೋದಿಲ್ಲ ಎಂದು ಟೀಮ್ ಇಂಡಿಯಾದ ಸ್ಟಾರ್ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಈ ಮೂಲಕ ಪರ್ಸನಲ್ ಚೆಫ್‌ಗೆ ಅವಕಾಶ ಇಲ್ಲದೇ ಇದ್ರೂ ಸಹ ವಿರಾಟ್ ಬೇರೆ ದಾರಿಯನ್ನು ಉಪಯೋಗಿಸಿ ತಮ್ಮ ಇಷ್ಟದ ಖಾದ್ಯವನ್ನು ಸವಿದಿದ್ದಾರೆ.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟಿಂಗ್ ಮಾಡುವಾಗ ತಮಗೆ ಇಷ್ಟ ಬಂದ ಕಡೆ, ಚೆಂಡನ್ನು ಅಟ್ಟವು ಆಟಗಾರ. ಬೌಲರ್‌ಗಳ ಲಯವನ್ನು ಹಾಳು ಮಾಡಿ ಅವರ ಚಿಂತೆಯನ್ನು ದ್ವಿಗುಣ ಮಾಡುವ ಬ್ಯಾಟರ್. ಬಿಸಿಸಿಐ ಹಾಗೂ ಮ್ಯಾನೇಜ್ಮೆಂಟ್ ಏನೇ ರೂಲ್ಸ್ ತಂದ್ರೂ ಅದನ್ನು ಅಚ್ಚುಕಟ್ಟಾಗಿ ಪಾಲಿಸುವ ಸ್ಟಾರ್ ಪ್ಲೇಯರ್. ಆದರೆ ಬಿಸಿಸಿಐ ಇತ್ತೀಚಿಗೆ 10 ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಒಂದು ನಿಯಮ ಮಾತ್ರ ವಿರಾಟ್‌ಗೆ ಬಹುವಾಗಿ ಕಾಡಿದೆ. ಆದರೆ ಅದಕ್ಕೆಲ್ಲಾ ತಲೆ ಕಡಿಸಿಕೊಳ್ಳದ ವಿರಾಟ್, ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಯಾವುದೇ ಪ್ರವಾಸಕ್ಕೆ ಹೋದರೂ ಸಹ ಅವರ ಜೊತೆ ಅವರ ಬಾಣಸಿಗ ಇದ್ದೇ ಇರುತ್ತಿದ್ದರು. ಆದರೆ ಬಿಸಿಸಿಐ ಹೊಸ ರೂಲ್ಸ್ ವೈಯಕ್ತಿಕ ಬಾಣಸಿಗರಿಗೆ ಬ್ರೇಕ್ ಹಾಕಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ವಿರಾಟ್ ಪರ್ಯಾಯ ಮಾರ್ಗವನ್ನು ಅನುಸರಿಸಿದ್ದಾರೆ. ದುಬೈನಲ್ಲಿ ತಮ್ಮ ನೆಚ್ಚಿನ ಆಹಾರವನ್ನು ತಿನ್ನಲು ಅವರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಬಿಸಿಸಿಐ ವೈಯಕ್ತಿಕ ಅಡುಗೆಯವರು ಮತ್ತು ಇತರ ವಿಷಯಗಳ ಮೇಲೆ ನಿಷೇಧ ಹೇರಿದೆ. ಹೀಗಾಗಿ ವಿರಾಟ್ ತಮ್ಮ ನೆಚ್ಚಿನ ಖಾದ್ಯಕ್ಕಾಗಿ ಟೀಮ್ ಮ್ಯಾನೇಜ್ಮೆಂಟ್ ಮುಂದೆ ತಮ್ಮ ಪ್ರಸ್ತಾಪನೆ ಇಟ್ಟಿದ್ದಾರೆ. ಅದಕ್ಕೆ ಮ್ಯಾನೇಜ್ಮೆಂಟ್ ಸಹ ಅಸ್ತು ಎಂದು ಹೇಳಿದೆ. ವಿರಾಟ್ ಕೊಹ್ಲಿ ದುಬೈನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾಗಲೇ ಅವರ ಹೆಸರಿಗೆ ಮೈದಾನಕ್ಕೆ ಒಂದು ಪಾರ್ಸಲ್ ಬಂದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಿರಾಟ್ ಹೆಸರಿಗೆ ಮೈದಾನಕ್ಕೆ ಬಂದ ಪಾರ್ಸಲ್‌ನಲ್ಲಿ ದುಬೈನ ಜನಪ್ರಿಯ ತಿನಿಸುಗಳ ಅಂಗಡಿಯಿಂದ ಆಹಾರವನ್ನು ಆರ್ಡರ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಎಲ್ಲರೂ ನೆಟ್ಸ್ ಅಭ್ಯಾಸ ಮುಗಿಸಿದ ಬಳಿಕ ತಮ್ಮ ತಮ್ಮ ಕಿಟ್ ಬ್ಯಾಗ್‌ಗಳನ್ನು ಪ್ಯಾಕ್ ಮಾಡ್ತಾ ಇದ್ದರೆ, ವಿರಾಟ್ ಮಾತ್ರ ತಮಗೆ ಬಂದಿದ್ದ ಪಾರ್ಸಲ್ ಓಪನ್ ಮಾಡಿ, ತಮ್ಮ ಇಷ್ಟದ ಖಾದ್ಯವನ್ನು ಸವಿದರು. ಅಲ್ಲದೆ ಇನ್ನೊಂದು ಪಾಕೆಟ್‌ನ್ನು ಎತ್ತಿ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಸಿಸಿಐನ 10 ಅಂಶಗಳ ನೀತಿಗೆ ಟೀಮ್ ಇಂಡಿಯಾದ ಯಾವುದೇ ಆಟಗಾರನು ತನ್ನೊಂದಿಗೆ ವೈಯಕ್ತಿಕ ಸಿಬ್ಬಂದಿಯನ್ನು ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವನ್ನು ಸೇರಿಸಲಾಗಿದೆ.