Virat Kohli Fined: ಕೊಹ್ಲಿಗೆ, ಸ್ಯಾಮ್ ಜಟಾಪಟಿ: ವಿರಾಟ್‌ಗೆ ದಂಡ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಕೊಂಚ ಹಿನ್ನಡೆ ಅನುಭವಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಈ ವೇಳೆ ಗುರುವಾರ ಹಲವು ಘಟನೆಗಳು ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ನಡುವೆ ಮಾತಿನ ಚಕಮಕಿ ಕೊಹ್ಲಿ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿದೆ.
ಈ ಪಂದ್ಯದ ವೇಳೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್ ಸ್ಯಾಮ್ ಕಾನ್‌ಸ್ಟಾಸ್ ಅವರೊಂದಿಗೆ ಘರ್ಷಣೆ ಮುಂದಾದರು. ಕ್ರಿಕ್‌ಬಜ್ ವರದಿಯ ಪ್ರಕಾರ, ಐಸಿಸಿ ಅವರ ಪಂದ್ಯದ ಶುಲ್ಕದ 20% ದಂಡ ವಿಧಿಸಿದೆ. ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಕಳೆದ 24 ತಿಂಗಳಲ್ಲಿ ಕೊಹ್ಲಿಗೆ ಇದು ಮೊದಲ ಡಿಮೆರಿಟ್ ಪಾಯಿಂಟ್. ಹೀಗಾಗಿ ಅವರಿಗೆ ಯಾವುದೇ ನಷ್ಟ ಆಗುವುದಿಲ್ಲ.

ಆಗಿದ್ದೇನು?
ಆಸ್ಟ್ರೇಲಿಯಾ ಇನಿಂಗ್ಸ್‌ನ 10ನೇ ಓವರ್ ಮುಗಿದಿತ್ತು. ಈ ವೇಳೆ ಆಟಗಾರರು ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗುತ್ತಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಚೆಂಡನ್ನು ಕೈಯಲ್ಲಿ ಹಿಡಿದು ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗುವಾಗ, ಅತ್ತ ಕಡೆಯಿಂದ ಬಂದ ಸ್ಯಾಮ್ ಕಾನ್‌ಸ್ಟಾಸ್ ಅವರಿಗೆ ಕೊಹ್ಲಿ ಡಿಕ್ಕಿ ಹೊಡೆದರು. ಭುಜಕ್ಕೆ ಪೆಟ್ಟಾದ ನಂತರ ಕೊಹ್ಲಿ ಮುಂದೆ ಸಾಗಿದರು. ಆಗ ಆಸೀಸ್ ತಂಡದ ಯುವ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕನ್‌ಸ್ಟಾಸ್ ನಡುವೆ ಮಾತಿನ ಚಕಮತಿ ನಡೆಯಿತು. ಈ ವೇಳೆ ಫೀಲ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪಾಂಟಿಂಗ್ ಹೇಳಿದ್ದೇನು?
ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕಾನ್ಸ್‌ಸ್ಟಾಸ್ ಜೊತೆ ಘರ್ಷಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಆರೋಪಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಚಾನೆಲ್ 7 ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ದೃಶ್ಯ ಟಿವಿ ಪರದೆಯ ಮೇಲೆ ರಿಪೀಟ್ ಟೆಲಿಕಾಸ್ಟ್ ಆಯಿತು. ಇದನ್ನು ನೋಡಿದಾಗ ಯಾರ ತಪ್ಪು ಇದೇ ಎಂಬುದು ನಿಶ್ಚಿತವಾಗಿ ಅರ್ಥವಾಗುತ್ತದೆ. ಈ ವಿಷಯದ ಕುರಿತು ನನ್ನ ಮನಸ್ಸಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪಾಂಟಿಂಗ್ ತಿಳಿಸಿದ್ದಾರೆ.
ಎದುರಾಳಿ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ಆತಿಥೇಯ ತಂಡದ ಯುವ ಆಟಗಾರನ ವಿರುದ್ಧ ನಡೆದು ಕೊಂಡ ರೀತಿ ನಿಜಕ್ಕೂ ಬೇಸರ ತರಿಸಿದೆ. ಈ ಘಟನೆ ನಿಜಕ್ಕೂ ತಂಡಕ್ಕೆ ಸ್ಪೂರ್ತಿದಾಯಕವವಲ್ಲ. ಒಂದು ವೇಳೆ ಭಾರತ ಈ ರೀತಿ ಆಟವನ್ನು ಆಡಲು ಬಯಸಿದ್ದರೆ, ಅದು ಅವರ ನಿರ್ಣಯ. ಇದರಿಂದ ಸ್ಯಾಮ್ ಕಾನ್‌ಸ್ಟಾಸ್ ವಿಚಲಿತರಾಗಿಲ್ಲ ಎಂದು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ ಅವರ ಪತ್ನಿ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡದ ಆಟಗಾರ್ತಿ ಅಲಿಸ್ಸಾ ಹೀಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications