Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೋತ ಪಂದ್ಯದಲ್ಲೂ ನಾಯಕ ಕೊಹ್ಲಿಯಿಂದ ವಿಶಿಷ್ಟ ದಾಖಲೆ!

Virat Kohli first Indian to score 4000 runs as Test captain

ಬೆಂಗಳೂರು, ಸೆಪ್ಟೆಂಬರ್ 02: ಐದು ಟೆಸ್ಟ್ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದಲ್ಲೂ ಭಾರತದ ಪರ ಬ್ಯಾಟಿಂಗ್ ಬೆನ್ನೆಲುಬಾಗಿ ಮತ್ತೊಮ್ಮೆ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಂಡರು.

ಆದರೆ, ನಾಯಕ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ಅವರ ಅರ್ಧ ಶತಕಗಳು ವ್ಯರ್ಥವಾದವು. ಇಂಗ್ಲೆಂಡ್ ಈ ಪಂದ್ಯವನ್ನು 60 ರನ್ ಗಳಿಂದ ಗೆದ್ದು ಸರಣಿಯನ್ನು 3-1ರಲ್ಲಿ ತನ್ನದಾಗಿಸಿಕೊಂಡಿತು.

1
42377

ಇದೇ ಟೆಸ್ಟ್ ಸರಣಿಯಲ್ಲಿ 6000ರನ್ ಗಳಿಸಿದ ಸಾಧನೆ ಮಾಡಿದ ನಾಯಕ ಕೊಹ್ಲಿ ಅವರು ಇಂದು ನಾಯಕನಾಗಿ 4000ರನ್ ಗಳಿಸಿದ ದಾಖಲೆ ಬರೆದರು.

ಸೌಥಾಂಪ್ಟನ್ ನಲ್ಲಿ ನಾಲ್ಕನೇ ಇನ್ನಿಂಗ್ ನಲ್ಲಿ 245ರನ್ ಚೇಸ್ ಮಾಡುವಾಗ ಅರ್ಧಶತಕ (58 ರನ್) ಗಳಿಸಿ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಈ ನಡುವೆ 39ನೇ ಟೆಸ್ಟ್ ಪಂದ್ಯದ 65ನೇ ಇನ್ನಿಂಗ್ಸ್ ನಲ್ಲಿ 4,000ರನ್ ಪೂರೈಸಿದ ಸಾಧನೆ ಮಾಡಿದರು. ನಾಯಕನಾಗಿ 16 ಶತಕ(243 ಗರಿಷ್ಠ ಮೊತ್ತ, ದೆಹಲಿ), 9 ಅರ್ಧಶತಕ ಬಾರಿಸಿರುವ ಕೊಹ್ಲಿ ಅವರ ರನ್ ಸರಾಸರಿ 66ಕ್ಕೂ ಅಧಿಕವಿದೆ.

* ತ್ವರಿತಗತಿಯಲ್ಲಿ 4,000ರನ್ ಗಳಿಸಿದ ಭಾರತ ಹಾಗೂ ಏಷ್ಯಾದ ನಾಯಕ.
* ಇದಲ್ಲದೆ, ಸರಣಿಯಲ್ಲಿ 500ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ, 6ನೇ ಪ್ರವಾಸಿ ನಾಯಕ ಎನಿಸಿಕೊಂಡರು.
* 6,000 ಟೆಸ್ಟ್ ರನ್ ಗಳಿಸಿರುವ ಕೊಹ್ಲಿ ಅವರು ಕಳೆದ 15 ಇನ್ನಿಂಗ್ಸ್ ಗಳಲ್ಲೇ 1,000ರನ್ ಪೇರಿಸಿರುವುದು ವಿಶೇಷ.

Story first published: Sunday, September 2, 2018, 22:29 [IST]
Other articles published on Sep 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+