ಪೂಜಾರ ಓಟದ ಬಗ್ಗೆ ಕೊಹ್ಲಿ ತಮಾಷೆ: ಎಬಿ ಡಿವಿಲಿಯರ್ಸ್ ಜೊತೆಗಿನ ಮಾತುಕತೆಯಲ್ಲಿ ವಿರಾಟ್ ಬಿಚ್ಚಿಟ್ಟ ಸತ್ಯ!

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸಕ್ರಿಯವಾಗಿದ್ದು ಅಂತಿಮ ಏಕದಿನ ಪಂದ್ಯವನ್ನಾಡಲು ಸಿದ್ಧವಾಗಿದ್ದಾರೆ. ಈ ಸರಣಿಯ ಬಳಿಕ ಇಮಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಕ್ರಿಕೆಟಿಗರು ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗೆ ಚಾಟ್ ಶೋವೊಂದರಲ್ಲಿ ಭಾಗಿಯಾಗಿದ್ದು ಟೀಮ್ ಇಂಡಿಯಾದ ಅನುಭವಿ ಆಟಗಾರ ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದಲ್ಲಿ ಸುದೀರ್ಘ ಕಾಲದಿಂದ ಜೊತೆಯಾಗಿ ಆಡಿದ್ದು ಅತ್ಯುತ್ತಮ ಬಾಂಧವ್ಯ ಹೊಂದಿರುವ ಕ್ರಿಕೆಟಿಗರು. ಹೀಗಾಗಿ ಎಬಿ ಡಿವಿಲಿಯರ್ಸ್ ಅವರ ಚಾಟ್ ಶೋದಲ್ಲಿ ಕೊಹ್ಲಿ ಭಾಗಿಯಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಬಗ್ಗೆ ವಿಕೆಟ್ ನಡುವಿನ ಓಟದ ವಿಚಾರವಾಗಿ ಎಬಿ ಡಿವಿಲಿಯರ್ಸ್ ಕೆಲ ಪ್ರಶ್ನೆಗಳನ್ನು ಮುಂದಿಟ್ಟರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಬಗ್ಗೆ ಹಂಚಿಕೊಂಡಿರುವ ತಮಾಷೆಯ ಮಾತು ಅಭಿಮಾನಿಗಳಲ್ಲಿ ನಗು ಮೂಡಿಸಿದೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಅವರೊಂದಿಗಿನ ರನ್ನಿಂಗ್ ಬಿಟ್ವೀನ್ ದ ವಿಕೆಟ್ ಅನುಭವ ಹಂಚಿಕೊಂಡಿದ್ದಾರೆ. ವೇಳೆ ವಿರಾಟ್ ಕೊಹ್ಲಿ ಪಂದ್ಯದಲ್ಲಿ ವಿಕೆಟ್‌ಗಳ ಮಧ್ಯೆ ಓಟದಲ್ಲಿ ತಾನು ಓಡಿರುವ ಅತ್ಯಂತ ಕೆಟ್ಟ ಓಟಗಾರ ಎಂದರೆ ಅದು ಚೇತೇಶ್ವರ್ ಪೂಜಾರ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ವಿರಾಟ್ ಕೊಹ್ಲಿ.
ಟೀಮ್ ಇಂಡಿಯಾದಲ್ಲಿ ವಿಕೆಟ್‌ಗಳ ಮಧ್ಯೆ ಅದ್ಭುತವಾಗಿ ಓಡುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಆದರೆ ಕೊಹ್ಲಿ ಪೂಜಾರ ವಿಚಾರವಾಗಿ ತನ್ನ ಅಭಿಪ್ರಾಯವನ್ನು ಈ ರೀತಿಯಾಗಿ ತಮಾಷೆಯಾಗಿ ಹೇಳಿ ನಗು ಮೂಡಿಸಿದ್ದಾರೆ.
ಇನ್ನು ಚೇತೇಶ್ವರ್ ಪೂಜಾರ ಟೆಸ್ಟ್ ಮಾದರಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಪೂಜಾರ ಸುದೀರ್ಘ ಕಾಲದಿಂ ಟೀಮ್ ಇಂಡಿಯಾದ ಆಧಾರ ಸ್ಥಂಭವಾಗಿದ್ದಾರೆ. ಇತ್ತೀಚೆಗಷ್ಟೇ ಅವರು 100ನೇ ಟೆಸ್ಟ್ ಪಂದ್ಯವನ್ನು ಆಡಿದ್ದು ಭಾರತದ ಪರವಾಗಿ ಈ ಸಾಧನೆ ಮಾಡಿದ ಅಪರೂಪದ ಸಾಧಕರ ಪಟ್ಟಿಗೆ ಪೂಜಾರ ಕೂಡ ಸೇರಿಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ಎಲ್ಲಾ ಮಾದರಿಯಲ್ಲಿಯೂ ಫಾರ್ಮ್ ಕಂಡುಕೊಂಡಿದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿರುವ ಕೊಹ್ಲಿ ಸುದೀರ್ಘ ಮಾದರಿಯಲ್ಲಿಯೂ ಫಾರ್ಮ್ ಕಂಡುಕೊಂಡಿದ್ದು ಸದ್ಯ ನಿರಾಳವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಕೊಹ್ಲಿ ಆರ್‌ಸಿಬಿ ಪರವಾಗಿ ಐಪಿಎಲ್‌ನಲ್ಲಿ ಮತ್ತೆ ರನ್ ಮಳೆ ಹರಿಸಲು ಸಜ್ಜಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications