Virat Kohli: ಗಬ್ಬಾ ಟೆಸ್ಟ್‌ಗೆ ವಿರಾಟ್ ಭರ್ಜರಿ ಸಿದ್ಧತೆ: ಬಿಗ್ ಇನಿಂಗ್ಸ್ ಕಟ್ಟಲು ಕೊಹ್ಲಿ ಡಿಫ್ರೆಂಟ್ ರಣ ತಂತ್ರ
ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ಗೆ ತಯಾರಿ ನಡೆಸಿದ್ದಾರೆ. ನೆಟ್ಸ್‌ನಲ್ಲಿ ಬೆವರು ಹರಿಸುತ್ತಿರುವ ಟೀಮ್ ಇಂಡಿಯಾ ಸ್ಟಾರ್ ಆಡಿಲೇಡ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಎರಡನೇ ಟೆಸ್ಟ್ ಮೂರೇ ದಿನದಲ್ಲಿ ಮುಕ್ತಾಯವಾದ ಬಳಿಕ ಉಳಿದ ಎರಡು ದಿನದಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಭ್ಯಾಸವನ್ನು ಕಂಡು ಹರ್ಭಜನ್ ಸಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಆರ್ಭಟ ನಡೆಸಿದ್ದರು. ಈ ವೇಳೆ ಶತಕ ಬಾರಿಸಿ ಸಂಭ್ರಮಿಸಿದ್ದರು. ಇವರ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಆದರೆ ಆಡಿಲೇಡ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಇವರು ಭರ್ಜರಿ ಕಂ ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಲೇಡ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿದರು.

ಕಂ ಬ್ಯಾಕ್‌ಗೆ ತಯಾರಿ ನಡೆಸಿರುವ ವಿರಾಟ್?
ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಮಾತನಾಡಿರುವ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ ಅವರು ಬ್ಯಾಕ್ ಫುಟ್ ಡಿಫೆನ್ಸ್ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಗಬ್ಬಾದಲ್ಲಿ ಎದುರಾಗುವ ಸವಾಲನ್ನು ಮೆಟ್ಟಿನಿಲ್ಲಲು ವಿರಾಟ್ ಬೆವರು ಹರಿಸುತ್ತಿದ್ದಾರೆ. ಗಬ್ಬಾದಲ್ಲಿ ಹೆಚ್ಚಿನ ಬೌನ್ಸ್ ಇರಲಿದ್ದು, ಈ ನಿಟ್ಟಿನಲ್ಲಿ ವಿರಾಟ್ ತಾಲೀಮು ನಡೆಸುತ್ತಿದ್ದಾರೆ.
ಆಟದಲ್ಲಿ ಏನಾಗಿದೆ ಬದಲಾವಣೆ?
"ನಾನು ಅವರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಸಾಮಾನ್ಯವಾಗಿ ಫ್ರಂಟ್ ಫುಟ್ ಪ್ಲೇಯರ್. ಭಾರತದ ಪಿಚ್‌ಗಳಲ್ಲಿ ಈ ತಂತ್ರ ಸಹಾಯಕ. ಬೌನ್ಸ್ ಪಿಚ್‌ನಲ್ಲಿ ರಿಕ್ಕಿ ಪಾಂಟಿಂಗ್, ಸ್ಟೀವ್ ವಾಘ್, ಲ್ಯಾಂಗರ್, ಮ್ಯಾಥ್ಯೂ ಹೆಡನ್ ಮಿಂಚಿದ್ದಾರೆ. ಈ ಎಲ್ಲ ಬ್ಯಾಟರ್‌ಗಳು ಬ್ಯಾಕ್ ಫುಟ್ ಆಟಗಾರರು. ಕಾರಣ ಇಲ್ಲಿ ಬೌನ್ಸ್ ಹೆಚ್ಚಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಕಮಾಲ್ ಮಾಡಲು ಬ್ಯಾಟರ್ ಬ್ಯಾಕ್ ಫುಟ್ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಬೆವರು ಹರಿಸುತ್ತಿದ್ದಾರೆ" ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರ ಅಭ್ಯಾಸವನ್ನು ಗಮನಿಸಿದರೆ, ಗಬ್ಬಾದಲ್ಲಿ ಉತ್ತಮ ಆಟವನ್ನು ಆಡುವ ಸೂಚನೆ ಕಾಣುತ್ತಿದೆ. ನೆಟ್ಸ್‌ನಲ್ಲಿ ವಿರಾಟ್ ಆಡಿದ ಧಾಟಿಯನ್ನು ನೋಡಿದರೆ, ಇವರು ಸಾಕಷ್ಟು ಬ್ಯಾಕ್‌ಫುಟ್ ಎಸೆತಗಳನ್ನು ಆಡುತ್ತಿದ್ದಾರೆ. ಇನ್ನು ಶಾರ್ಟರ್ ಎಸೆತಗಳನ್ನು ಬಿಡುತ್ತಿದ್ದಾರೆ. ಕೆಲವೊಮ್ಮೆ ಅವುಗಳನ್ನು ಆಡಲು ಸಹ ಪ್ರಯತ್ನಿಸುತ್ತಿದ್ದರು ಎಂದು ಭಜ್ಜಿ ತಿಳಿಸಿದ್ದಾರೆ.
ವಿರಾಟ್ ಅವರಿಗೆ ಗಬ್ಬಾ ಪಿಚ್ ಹೇಗೆ ವರ್ತಿಸಲಿದೆ ಎಂಬ ಬಗ್ಗೆ ಅರಿವು ಇದೆ. ಪರ್ತ್ ಹಾಗೂ ಆಡಿಲೇಡ್ ಪಿಚ್‌ಗಳಿಗಿಂತಲೂ ಕೊಂಚ್ ಭಿನ್ನವಾಗಿದೆ. ಗಬ್ಬಾ ಪಿಚ್‌ನಲ್ಲಿ ಹೆಚ್ಚು ಬೌನ್ಸ್ ಸಿಗುವ ಕಾರಣ ಬ್ಯಾಕ್ ಫುಟ್ ತಂತ್ರವನ್ನು ಅನುಸರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ನ್ಯೂನತೆಗಳಿಂದ ಬೇಗ ಪುಟಿದೇಳುವ ಆಟಗಾರ ಎಂದು ಟೀಮ್ ಇಂಡಿಯಾ ಮಾಜಿ ಆಫ್ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications