ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಗಿಸೊ ರಬಾಡ ಅಣಕಿಸಿದ ನಾಯಕ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

Virat Kohli gives priceless reaction after Kagiso Rabada’s sloppy fielding

ಪುಣೆ, ಅಕ್ಟೋಬರ್ 11: ಬ್ಯಾಟ್ಸ್‌ಮನ್‌ಗಳನ್ನು ಕೆಣಕುವ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ ಅವರನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಣಕಿಸಿದ ದೃಶ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 11) ಕಂಡುಬಂತು.

ಭಾರತ vs ದ.ಆಫ್ರಿಕಾ: ದಿಲೀಪ್ ವೆಂಗ್‌ಸರ್ಕಾರ್ ದಾಖಲೆ ಮುರಿದ ವಿರಾಟ್ಭಾರತ vs ದ.ಆಫ್ರಿಕಾ: ದಿಲೀಪ್ ವೆಂಗ್‌ಸರ್ಕಾರ್ ದಾಖಲೆ ಮುರಿದ ವಿರಾಟ್

ಭಾರತ vs ದಕ್ಷಿಣ ಆಫ್ರಿಕಾ ನಡುವಿನ 2 ಟೆಸ್ಟ್‌ ಪಂದ್ಯದ 2ನೇ ದಿನದಾಟದ ವೇಳೆ ಮಿಸ್ ಫೀಲ್ಡಿಂಗ್ ಮಾಡಿದ ರಬಾಡ ಅವರನ್ನು ಕೊಹ್ಲಿ ತಮಾಷೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಸಿಸಿಐ ಇದನ್ನು ತನ್ನ ಎಫ್‌ಬಿ ಖಾತೆಯಲ್ಲಿ ಹಾಕಿಕೊಂಡಿದೆ. ಪಂದ್ಯದ 66ನೇ ಓವರ್‌ನಲ್ಲಿ ಈ ಗಮ್ಮತ್ತಿನ ದೃಶ್ಯ ಸೆರೆಯಾಗಿತ್ತು.

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
46114

ಕೇಶವ್ ಮಹಾರಾಜ್ ಅವರ 65.3ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ಕೊಹ್ಲಿ ಸಿಂಗಲ್ ತೆಗೆದರು. ಕೊಹ್ಲಿ ರನ್ ಓಡುವಾಗ ಚೆಂಡು ಕೈಗೆತ್ತಿಕೊಂಡ ರಬಾಡ ಸ್ಟಂಪ್‌ನತ್ತ ಚೆಂಡು ಎಸೆದರು. ಆದರೆ ಚೆಂಡು ಕೀಪರ್ ಹತ್ತಿರಕ್ಕೂ ಬಾರದೆ ದೂರದಿಂದಲೇ ಹಾದು ಬೌಂಡರಿ ಗೆರೆ ಮುಟ್ಟಿತು (ಬಿಸಿಸಿಐ ಎಫ್‌ಬಿ ವಿಡಿಯೋ ಲಿಂಕ್‌ ಕೆಳಗಿದೆ).

ಮಿಸ್ ಫೀಲ್ಡಿಂಗ್‌ನಿಂದ ತಂಡಕ್ಕೆ ಹೆಚ್ಚುವರಿ ರನ್ ನೀಡಿದ ರಬಾಡ ಅವರನ್ನು ಉದ್ದೇಶಿಸಿ ಕೊಹ್ಲಿ ಸುತ್ತಲೂ ಥಂಬ್ಸ್ ಉಪ್ ಮಾಡಿ ನಕ್ಕರು. ಅಂದ್ಹಾಗೆ ಗುರುವಾರ (ಅ.10) ಮೊದಲ ದಿನದಾಟದ ವೇಳೆ ರಬಾಡ, ಪೂಜಾರ ಅವರನ್ನು ಕೆಣಕಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ತನ್ನ 7ನೇ ಟೆಸ್ಟ್‌ ದ್ವಿಶತಕ ಪೂರೈಸಿಕೊಂಡರಲ್ಲದೆ, 7000+ ರನ್ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 600 ರನ್ ಗಡಿ ಮುಟ್ಟಿದೆ.

Story first published: Friday, October 11, 2019, 15:46 [IST]
Other articles published on Oct 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X