Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಹೃದಯವಂತಿಕೆ ತೋರಿದ ವಿರಾಟ್ ಕೊಹ್ಲಿ; ಪಂಜಾಬ್ ಯುವ ಆಟಗಾರನಿಗೆ ಸ್ಪೆಷಲ್ ಗಿಫ್ಟ್

ಐಪಿಎಲ್ 2025 ರಲ್ಲಿ 37ನೇ ಪಂದ್ಯ ಭಾನುವಾರ ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಿತು. ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ 7 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 157 ರನ್‌ಗಳಿಗೆ ಕಟ್ಟಿ ಹಾಕಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 7 ಎಸೆತಗಳಿ ಬಾಕಿ ಇರುವಂತೆ 3 ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಗೊಂಡಿತು.

ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಅಜೇಯ 71 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದ ನಂತರ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ಯುವ ಆಟಗಾರರಿಗೆ ತಮ್ಮ ಹೃದಯವಂತಿಕೆ ತೋರಿದ್ದಾರೆ.

Virat Kohli gives special gift to young Punjab players

ಪಂಜಾಬ್ ಕಿಂಗ್ಸ್ ತನ್ನ ಯುವ ಆಟಗಾರ ಮುಶೀರ್ ಖಾನ್ ಅವರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ದೇಶೀಯ ಕ್ರಿಕೆಟ್‌ನಲ್ಲಿ ಭಾರಿ ಸದ್ದು ಮಾಡಿರುವ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮಶೀರ್ ಖಾನ್ ಅವರಿಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಡಿಯೋದಲ್ಲಿ ಮುಶೀರ್ ಖಾನ್ ಪಂಜಾಬ್ ಕಿಂಗ್ಸ್ ಡ್ರೆಸ್ಸಿಂಗ್ ರೂಮ್ ಒಳಗೆ ಬರುತ್ತಾರೆ. ಸಹ ಆಟಗಾರರು ಅವರನ್ನು ಮುಶೀರ್ ಏನು? ಎಂದು ಕೇಳತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಮುಶೀರ್ ಈ ಬ್ಯಾಟ್ ವಿರಾಟ್ ಭಯ್ಯಾ ಅವರದು ಎಂದು ಹೇಳುತ್ತಾರೆ. ತಂಡದ ಉಳಿದ ಆಟಗಾರರು ಆ ಬ್ಯಾಟ್ ಅನ್ನು ತೆಗದುಕೊಂಡು ನೋಡುತ್ತಾರೆ. ಈ ಬ್ಯಾಟ್‌ಗಾಗಿ ನಮ್ಮ ಅಣ್ಣನ ಮುಂದೆ ಅಳುತ್ತಿದ್ದೆ. ಸರ್ಫರಾಜ್ ಭಯ್ಯಾ ಈ ಬ್ಯಾಟ್ ಅನ್ನು ನನಗಾಗಿ ತರುತ್ತಿದ್ದರು. ಈ ಬ್ಯಾಟ್‌ನಿಂದ ನಾನು ಸಾಕಷ್ಟು ರನ್ ಗಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮುಶೀರ್ ಖಾನ್‌ ಅವರಿಗೆ ಐಪಿಎಲ್ 2025 ರಲ್ಲಿ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ. ಪಂಜಾಬ್ ಕಿಂಗ್ಸ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಲ್ಲ. ಹೀಗಾಗಿ ಅವರು ಬೆಂಚ್ ಕಾಯುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಪಂಜಾಬ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಮುಶೀರ್ ಖಾನ್ ಅವರಿಗೆ ವಿರಾಟ್ ಕೊಹ್ಲಿ ಬ್ಯಾಟ್ ನೀಡಿರುವುದು ಮಾತ್ರವಲ್ಲದೆ, ಸೂರ್ಯಾಂಶ್ ಶೆಡ್ಜ್ ಅವರ ಜೆರ್ಸಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋ ಅನ್ನು ಸಹಾ ಪಂಜಾಬ್ ಕಿಂಗ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ಅವರಿಂದ ಆಟೋಗ್ರಾಫ್ ಪಡೆದಿರುವ ಸೂರ್ಯಾಂಶ್ ಶೆಡ್ಜ್ ಸಂತೋಷಗೊಂಡಿದ್ದಾರೆ.

Story first published: Monday, April 21, 2025, 20:00 [IST]
Other articles published on Apr 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+