Virat Kohli: ವಿರಾಟ್ ಕೊಹ್ಲಿ ಸಾಧನಗೆ ಸಿಕ್ತು ಐಸಿಸಿಯಿಂದ ಮತ್ತೊಂದು ಪ್ರಶಸ್ತಿ!
ಜೂನ್ 2 ನ ಭಾನುವಾರ, ಪ್ರಸ್ತುತ ಆರಂಭವಾಗಿರುವ ಐಸಿಸಿ 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಿಂದ ಪ್ರಶಸ್ತಿ ಲಭಿಸಿದೆ.
ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿಗೆ ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಕೊಹ್ಲಿ 2023ರ ಐಸಿಸಿ ವರ್ಷದ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದಾರೆ. ಐಸಿಸಿ ಭಾನುವಾರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶಸ್ತಿಯೊಂದಿಗೆ ಕೊಹ್ಲಿ ಅವರ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರಿಗೆ ಟ್ರೋಫಿ ಮತ್ತು ಕ್ಯಾಪ್ ನೀಡಿರುವುದು ಕಾಣಬಹುದಾಗಿದೆ.

ವಿರಾಟ್ ಕೊಹ್ಲಿ 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವರ್ಷ, ವಿರಾಟ್ 27 ಏಕದಿನ ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 72.47 ಸರಾಸರಿ ಮತ್ತು 99.13 ಸ್ಟ್ರೈಕ್ ರೇಟ್‌ನೊಂದಿಗೆ 1377 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 8 ಅರ್ಧ ಶತಕಗಳು ಸೇರಿವೆ. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 166 ರನ್ ಆಗಿದೆ.
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅಭೂತಪೂರ್ವ ಪ್ರದರ್ಶನ ನೀಡಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದರು. ವಿರಾಟ್ ಅವರ 3 ಶತಕಗಳು ವಿಶ್ವಕಪ್‌ನಂತಹ ದೊಡ್ಡ ಸ್ವರೂಪಗಳಲ್ಲಿ ಬಂದಿದ್ದುವಿಶೇಷವಾಗಿತ್ತು.
ಈ ವೇಳೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ 49 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿದಿದ್ದರು. ಇಂತಹ ಅಬ್ಬರದ ಪ್ರದರ್ಶನದಿಂದಾಗಿ ಕೊಹ್ಲಿಗೆ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ನೀಡಲಾಗಿದೆ.
ಇದಕ್ಕೂ 7 ಭಾರತೀಯ ಆಟಗಾರರಿಗೆ ಐಸಿಸಿ ವರ್ಷದ ಪ್ರಶಸ್ತಿ ನೀಡಲಾಗಿತ್ತು. ರವೀಂದ್ರ ಜಡೇಜಾ ಅವರಿಗೆ ವರ್ಷದ ಟೆಸ್ಟ್ ತಂಡದ ಕ್ಯಾಪ್ ನೀಡಲಾಯಿತು. ಸೂರ್ಯಕುಮಾರ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಅವರಿಗೆ ವರ್ಷದ ಟಿ20 ಕ್ರಿಕೆಟ್ ತಂಡದ ಕ್ಯಾಪ್ ನೀಡಿದರೆ, ಸೂರ್ಯ ಅವರಿಗೆ ವರ್ಷದ ಟಿ20 ಆಟಗಾರ ಪ್ರಶಸ್ತಿಯನ್ನೂ ನೀಡಲಾಯಿತು.
ಐಸಿಸಿಯಿಂದ ವಿಶೇಷ ಗೌರವ ಪಡೆದ ಭಾರತ ತಂಡದ 7 ಆಟಗಾರರು
ಇದಲ್ಲದೆ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್ ಮತ್ತು ಕುಲದೀಪ್ ಯಾದವ್ ಅವರಿಗೆ ಐಸಿಸಿ ವರ್ಷದ ಏಕದಿನ ತಂಡದ ಕ್ಯಾಪ್ ನೀಡಲಾಗಿದೆ. ಇದೀಗ ಒಟ್ಟು 8 ಭಾರತೀಯ ಆಟಗಾರರು ಐಸಿಸಿ ವಾರ್ಷಿಕ ಪ್ರಶಸ್ತಿಯನ್ನು ಮೂರು ಮಾದರಿಯಲ್ಲೂ ಪಡೆದು ದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications