Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಸಚಿನ್-ಗಂಗೂಲಿ- ದ್ರಾವಿಡ್ ಕ್ಲಬ್‌ಗೆ ವಿರಾಟ್ ಕೊಹ್ಲಿ

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಕೊನೆಯ ಗುಂಪು ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಆಡುವ ಮೂಲಕ ಭಾರತ ತಂಡ ‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನು ಆಡಿದ ಭಾರತದ 7ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಅವರು ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರ ವಿಶೇಷ ಕ್ಲಬ್‌ ಸೇರಿದ್ದಾರೆ.

ವಿರಾಟ್ ಕೊಹ್ಲಿ ಅವರ 300ನೇ ಏಕದಿನ ಪಂದ್ಯಗಳನ್ನು ಆಡುವ ಮೂಲಕ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಉತ್ತಮವಾಗಿ ಕಾರ್ಯ ನಿರ್ವಹಿಸದಿದ್ದರೂ, ಅವರು ತಮ್ಮ ಹೆಸರಿನಲ್ಲಿ ಅಂತಹ ಉತ್ತಮ ದಾಖಲೆಯನ್ನು ದಾಖಲಾಗಿದೆ. ವಿರಾಟ್ ಹೊರತುಪಡಿಸಿ, ವಿಶ್ವದ ಯಾವುದೇ ಆಟಗಾರರ ದಾಖಲೆ ಸನಿಹ ತಲುಪಲು ಸಾಧ್ಯವಾಗಿಲ್ಲ.

Virat Kohli has created world record by playing his 300th ODI

ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಆಡುವ ಮೂಲಕ ತಮ್ಮ 300ನೇ ಏಕದಿನ ಪಂದ್ಯವನ್ನು ವಿಶೇಷವಾಗಿಸಲು ಸಾಧ್ಯವಾಗಲಿಲ್ಲ. ಅವರು ಮ್ಯಾಟ್ ಹೆನ್ರಿ ಎಸೆತದಲ್ಲಿ ಔಟಾದರು. ವಿರಾಟ್ ತಮ್ಮ ಬ್ಯಾಟ್‌ನಿಂದ ಎರಡು ಬೌಂಡರಿಗಳೊಂದಿಗೆ 11 ರನ್ ಗಳಿಸಿದರು. ಅವರನ್ನು ಔಟ್ ಮಾಡಲು, ವಿಶ್ವದ ಅತ್ಯುತ್ತಮ ಫೀಲ್ಡರ್‌ ಗ್ಲೆನ್ ಫಿಲಿಪ್ಸ್ ಒಂದು ಕೈಯಲ್ಲಿ ಹಾರುತ್ತಾ ಅದ್ಭುತ ಕ್ಯಾಚ್ ಹಿಡಿದರು. ಅದನ್ನು ನೋಡಿದ ವಿರಾಟ್ ಸ್ವತಃ ತಮ್ಮ ಕಣ್ಣುಗಳನ್ನು ನಂಬಲು ಸಾಧ್ಯವಾಗಲಿಲ್ಲ. ಆದರೂ ಕೊಹ್ಲಿ ದಾಖಲೆ ಮಾಡುವಲ್ಲಿ ಹಿಂದೆ ಉಳಿಯಲಿಲ್ಲ.

ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ, ಏಕದಿನ ಮಾದರಿಯಲ್ಲಿ 300 ಪಂದ್ಯಗಳನ್ನು ಆಡಿದ ಸಾಧನೆದೊಂದಿಗೆ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ಸಹ ಬರೆದಿದ್ದಾರೆ. ಕೊಹ್ಲಿ 300 ಏಕದಿನ ಪಂದ್ಯಗಳ ಜೊತೆಗೆ ಕನಿಷ್ಠ 100 ಟೆಸ್ಟ್ ಮತ್ತು 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, 18 ಕ್ರಿಕೆಟಿಗರು ಇಲ್ಲಿಯವರೆಗೆ ತಮ್ಮ ದೇಶಗಳ ಪರ 300 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಲ್ಲಿ ಯಾರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತರ ಎರಡೂ ಸ್ವರೂಪಗಳಲ್ಲಿ ತಲಾ 100 ಪಂದ್ಯಗಳನ್ನು ಆಡಲು ಸಾಧ್ಯವಾಗಿಲ್ಲ.

ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಭಾರತೀಯರು

ಸಚಿನ್ ತೆಂಡೂಲ್ಕರ್ - 463 ಪಂದ್ಯಗಳು
ಎಂಎಸ್ ಧೋನಿ - 347 ಪಂದ್ಯಗಳು
ರಾಹುಲ್ ದ್ರಾವಿಡ್ - 340 ಪಂದ್ಯಗಳು
ಮೊಹಮ್ಮದ್ ಅಜರುದ್ದೀನ್ - 334 ಪಂದ್ಯಗಳು
ಸೌರವ್ ಗಂಗೂಲಿ - 308 ಪಂದ್ಯಗಳು
ಯುವರಾಜ್ ಸಿಂಗ್ - 301 ಪಂದ್ಯಗಳು
ವಿರಾಟ್ ಕೊಹ್ಲಿ - 300 ಪಂದ್ಯಗಳು

ಕೊಹ್ಲಿ ಏಕದಿನ ದಾಖಲೆಗಳು

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಹೊಂದಿದ್ದಾರೆ. ಇದರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 14000 ರನ್‌ಗಳನ್ನು ಪೂರ್ಣಗೊಳಿಸಿದ ಇತ್ತೀಚಿನ ವಿಶ್ವ ದಾಖಲೆಯೂ ಸೇರಿದೆ. ಅವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಈ ದಾಖಲೆಯನ್ನು ಸಾಧಿಸಿದ್ದಾರೆ. ಭಾರತ ಪರ 50 ಓವರ್‌ಗಳ ಸ್ವರೂಪದಲ್ಲಿ 8000 ರನ್‌ಗಳು (175 ಇನ್ನಿಂಗ್ಸ್‌ಗಳು), 9000 ರನ್‌ಗಳು (194 ಇನ್ನಿಂಗ್ಸ್‌ಗಳು), 10000 ರನ್‌ಗಳು (205 ಇನ್ನಿಂಗ್ಸ್‌ಗಳು), 11000 ರನ್‌ಗಳು (222 ಇನ್ನಿಂಗ್ಸ್‌ಗಳು), 12000 ರನ್‌ಗಳು (242 ಇನ್ನಿಂಗ್ಸ್‌ಗಳು), 13000 ರನ್‌ಗಳು (287 ಇನ್ನಿಂಗ್ಸ್‌ಗಳು) ಮತ್ತು 14000 ರನ್‌ಗಳು (299 ಇನ್ನಿಂಗ್ಸ್‌ಗಳು) ತಲುಪಿದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ, ಏಕದಿನ ಕ್ರಿಕೆಟ್‌ ಅತಿಹೆಚ್ಚು ಶತಕಗಳನ್ನು ಬಾರಿಸಿರುವ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 51 ಶತಕಗಳನ್ನು ಹೊಂದಿದ್ದಾರೆ.

Story first published: Sunday, March 2, 2025, 18:32 [IST]
Other articles published on Mar 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+