ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನು ಸೂಪರ್ ಸ್ಟಾರ್ ಆಟಗಾರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಬ್ಯಾಟ್ ಮಾಡಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅಭಿಮಾನಿಗಳ ಮನದಲ್ಲಿ ಮೂಡಿರುವ ಪ್ರಶ್ನೆಗಳಲ್ಲಿ ಒಂದು ಅವರು ಸರ್ಕಾರಿ ಕೆಲಸವನ್ನು ಮಾಡುತ್ತಿದ್ದಾರಾ? ಈ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾ ಪ್ರವಾಸವೇ ವಿರಾಟ್ ಕೊಹ್ಲಿ ಅವರ ಏಕದಿನ ಕ್ರಿಕೆಟ್‌ನ ಕೊನೆಯ ಸರಣಿ ಎಂಬ ಮಾತುಗಳು ಸಹ ಕೇಳು ಬರುತ್ತಿವೆ. ಅಲ್ಲದೆ ಇವರು ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತರಾಗುತ್ತಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಇನ್ನು ಏನು ಖಚಿತತೇ ಇಲ್ಲ. ಇವರು ಈಗ ಎರಡು ಫಾರ್ಮೆಟ್‌ನಿಂದ ದೂರವಾದಗ ತಮ್ಮ ಬಿಡುವಿನ ಸಮಯದಲ್ಲಿ ಯಾವ ಕೆಲಸ ಮಾಡುತ್ತಾರೆ. ಇವರಿಗೆ ಸರ್ಕಾರಿ ನೌಕರಿ ಇದೆಯಾ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಟೀಮ್ ಇಂಡಿಯಾದ ಹಲವು ಸ್ಟಾರ್ ಆಟಗಾರರಿಗೆ ಸರ್ಕಾರಿ ಕೆಲಸ ಇದೆ. ಟೀಮ್ ಇಂಡಿಯಾಕ್ಕೆ ಮೊದಲ ವಿಶ್ವಕಪ್ ತೊಡಿಸಿದ ನಾಯಕ ಕಪಿಲ್ ದೇವ್ ಸಹ ಸರ್ಕಾರಿ ಕೆಲಸದಲ್ಲಿದ್ದಾರೆ. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಯನ್ನು ಹೊಂದಿದ್ದಾರೆ. ಕೂಲ್ ಕ್ಯಾಪ್ಟನ್ ನಾಯಕ ಎಂಎಸ್ ಧೋನಿ ಸಹ ಭಾರತದ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿಎಸ್ಪಿ) ಆಗಿದ್ದಾರೆ. ಆದರೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಯಾವುದೇ ಸರ್ಕಾರಿ ಕೆಲಸವಿಲ್ಲ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಕೌಶಲ್ಯಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಇವರು ಹಲವು ವ್ಯವಹಾರಗಳನ್ನು ಹೊಂದಿದ್ದಾರೆ. ಒನ್8 ಬ್ರ್ಯಾಂಡ್ ಹೊಂದಿದ್ದು, ಹಲವು ನಗರಗಳಲ್ಲಿ ಇದರ ಶಾಖೆಗಳನ್ನು ತೆರೆಯಲಾಗಿದೆ. ಇದೇ ಬ್ರ್ಯಾಂಡ್‌ನ ಪಾದರಕ್ಷೆಗಳು ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಅಲ್ಲದೆ ವಿರಾಟ್ ಕೊಹ್ಲಿ ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಛಾಪು ಹೊಂದಿದ್ದಾರೆ. ಇವರ ಒಡೆತನದ WROGN ನ ಅತಿದೊಡ್ಡ ಪ್ರಾಯೋಜಕರಾಗಿದ್ದಾರೆ. ಇದಲ್ಲದೆ ಬೇರೆ ಬೇರೆ ಬ್ರ್ಯಾಂಡ್‌ಗಳಲ್ಲಿ ವಿರಾಟ್ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರ ಖಜಾನೆ ತುಂಬುತ್ತಿದೆ.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಅಲ್ಲದೆ ಇವರು ಭಾರತಕ್ಕೆ ಮತ್ತೊಂದು ವಿಶ್ವಕಪ್ ತೊಡಿಸುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಇವರು ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ವಿರಾಟ್ ಇತ್ತೀಚಿಗೆ ಲಂಡನ್‌ನಲ್ಲಿ ಏಕದಿನ ಸರಣಿಗಾಗಿ ಅಭ್ಯಾಸವನ್ನು ಆರಂಭಿಸಿದ್ದರು. ಈ ಮೂಲಕ ಎದುರಾಳಿಗಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.