ವಿರಾಟ್ ಕೊಹ್ಲಿಯದ್ದು ಆಲ್ ಟೈಮ್ ಬೆಸ್ಟ್ ಭಾರತ ತಂಡ ಎಂದ ಮಾಜಿ ಕೋಚ್

ನವದೆಹಲಿ, ಜುಲೈ 14: ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿರುವ ಟೀಮ್ ಇಂಡಿಯಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಬೆಸ್ಟ್ ತಂಡವೆಂದು ಭಾರತದ ಮಾಜಿ ಬ್ಯಾಟ್ಸ್‌ಮನ್, ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಹೇಳಿದ್ದಾರೆ. ಈಗಿನ ಭಾರತ ತಂಡ ಸಾಕಷ್ಟು ಬಲಿಷ್ಟವಾಗಿದೆ ಎಂದು ಅಂಶುಮಾನ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಕಿಗೆ ಭಾರತದ ಟೆಸ್ಟ್ ನಾಯಕತ್ವವನ್ನು 2015ರಲ್ಲಿ ಮತ್ತು ಏಕದಿನ ನಾಯಕತ್ವವನ್ನು 2017ರಲ್ಲಿ ನೀಡಲಾಯ್ತು. ಅದಾಗಿ ಕೊಹ್ಲಿ ಮುಂದಾಳತ್ವದ ತಂಡ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಅಷ್ಟೇ ಅಲ್ಲ, ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಆವರಿಸಿಕೊಂಡಿತ್ತು ಕೂಡ.
ಭಾರತ ತಂಡದಲ್ಲಿ ಬೆಸ್ಟ್ ಬೌಲರ್‌ಗಳಿದ್ದಾರೆ. ವಿಶ್ವದ ಮಾರಕ ವೇಗಿಗಳಲ್ಲಿ ಗುರುತಿಸಿಕೊಂಡಿರುವ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರಂತ ಬೌಲರ್‌ಗಳಿದ್ದಾರೆ. ಹೀಗಾಗಿಯೇ ಭಾರತ ತಂಡ ವಿಶ್ವದ ಗಮನ ಸೆಳೆಯುತ್ತಿದೆ.

ಸ್ಪೋರ್ಟ್ಸ್ ಕೀಡಾದ ಸಂದರ್ಶನದಲ್ಲಿ ಮಾತನಾಡಿದ ಅಂಶುಮಾನ್ ಗಾಯಕ್ವಾಡ್, 'ಯಾವ ತಂಡ ಬೆಸ್ಟ್ ಅಂತ ನೀವು ನನ್ನಲ್ಲಿ ಪ್ರಶ್ನಿಸಿದರೆ, ಭಾರತದ ಇತಿಹಾಸದಲ್ಲೇ ವಿರಾಟ್ ಕೊಹ್ಲಿ ಅವರು ಬೆಸ್ಟ್ ತಂಡವನ್ನು ಹೊಂದಿದ್ದಾರೆ. ಬೌಲಿಂಗ್, ಬ್ಯಾಟಿಂಗ್, ತಂಡದ ಸಮತೋಲನ ಉತ್ತಮವಾಗಿದೆ ಎನ್ನುತ್ತೇನೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications