Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನಿಂಗ್ಸ್ ಬೆಳೆಸುವುದು ಹೇಗೆಂದು ವಿರಾಟ್ ಕೊಹ್ಲಿಯಿಂದ ಕಲಿತೆ: ದೇವದತ್ ಪಡಿಕ್ಕಲ್

Virat Kohli helped me in terms of how to build innings: Devdutt Padikkal

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಾದ ಯುವ ಆಟಗಾರ ದೇವದತ್ ಪಡಿಕ್ಕಲ್. ಮೊದಲನೇ ಆವೃತ್ತಿಲ್ಲೇ ನೀಡಿದ ಶ್ರೇಷ್ಠ ಪ್ರರ್ಶನಕ್ಕೆ ಉದಯೋನ್ಮುಖ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ಪಡಿಕ್ಕಲ್ ಪಡೆದುಕೊಂಡಿದ್ದಾರೆ. ಐಪಿಎಲ್ ಮುಕ್ತಾಯದ ಬಳಿಕ ನಾಯಕ ಕೊಹ್ಲಿ ತನ್ನ ಬ್ಯಾಟಿಂಗ್‌ಗೆ ಯಾವ ರೀತಿ ಸಹಕರಿಸಿದರು ಎಂಬುದನ್ನು ಹೇಳಿಕೊಂಡಿದ್ದಾರೆ.

ನನ್ನ ಸುತ್ತಲೂ ಸಾಕಷ್ಟು ಹಿರಿಯ ಆಟಗಾರರಿದ್ದರು. ಅವರಿಂದ ನಾನು ಸಾಕಷ್ಟು ಪ್ರಮಾಣದಲ್ಲಿ ಕಲಿತಿದ್ದೇನೆ. ಇದು ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ರೀತಿ ನಿಭಾಯಿಸಬೇಕೆಂಬ ಮನಸ್ಥಿತಿಯನ್ನು ಬದಲಾಯಿಸಿದೆ. ಹಿರಿಯ ಆಟಗಾರರು ಟೂರ್ನಿಯುದ್ದಕ್ಕೂ ತಂಡದ ಯಾವುದೇ ಸಂದರ್ಭದಲ್ಲೂ ಸ್ಥಿರವಾಗಿದ್ದರು. ಫಲಿತಾಂಶಕ್ಕಿಂತಲೂ ಪ್ರದರ್ಶನ ಉತ್ತಮ ನೀಡುವತ್ತ ದೃಷ್ಠಿ ನೆಟ್ಟಿದ್ದರು ಎಂದು ಪಡಿಕ್ಕಲ್ ಹೇಳಿದ್ದಾರೆ.

ನಾಯಕ ವಿರಾಟ್ ಕೊಹ್ಲಿಯಿಂದ ಹಲವಾರು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಲಹೆಗಳನ್ನು ಅವರಿಂದ ಪಡೆದುಕೊಂಡಿದ್ದೇನೆ. ಇನ್ನಿಂಗ್ಸ್ ಯಾವ ರೀತಿಯಲ್ಲಿ ಬೆಖೆಸಬೇಕೆಂದು ನನಗೆ ವಿರಾಟ್ ಕೊಹ್ಲಿ ತಿಳಿಸಿದ್ದಾರೆ ಎಂದು ಪಡಿಕ್ಕಲ್ ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಡಿಕ್ಕಲ್ ಗೌತಮ್ ಗಂಭೀರ್ ಅವರನ್ನು ತನ್ನ ನೆಚ್ಚಿನ ಆಟಗಾರರಲ್ಲಿ ಓರ್ವ ಎಂದಿದ್ದಾರೆ. ನನಗೆ ಗಂಭೀರ್ ಅವರ ಬ್ಯಾಟಿಂಗ್ ತುಂಬಾ ಇಷ್ಟ. ತಂಡಕ್ಕೆ ಯಾವಾಗ ಅಗತ್ಯವಿರುತ್ತದೋ ಆಗ ಗಂಭೀರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು. ಯಾವಾಗ ತಂಡ ಒತ್ತಡದಲ್ಲಿರುತ್ತದೋ ಆಔಗ ನೀವು ಗಂಭೀರ್ ಮೇಲೆ ನಂಬಿಕೆಯಿಡಬಹುದಿತ್ತು. ಆತ ನನ್ನ ನೆಚ್ಚಿನ ಆಟಗಾರಲ್ಲಿ ಓರ್ವ ಎಂದಿದ್ದಾರೆ ಪಡಿಕ್ಕಲ್.

Story first published: Friday, November 13, 2020, 9:34 [IST]
Other articles published on Nov 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+