ಚಾಲ್ತಿ ಆಟಗಾರರಲ್ಲಿ ಅತ್ಯಧಿಕ ರನ್: ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ


ನವದೆಹಲಿ, ಅಕ್ಟೋಬರ್ 29: ದಾಖಲೆಗಳ ಮೇಲೆ ದಾಖಲೆ ಮುರಿಯುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಕ್ರಿಕೆಟ್ ಆಡುತ್ತಿರುವ ಹಾಲಿ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ ಅತ್ಯಧಿಕ ರನ್ ಗಳಿಸಿರುವ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದು, ವಿಂಡೀಸ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಕೊಹ್ಲಿ ಮುರಿದಿದ್ದಾರೆ.
ಚಾಲ್ತಿಯಲ್ಲಿರುವ ಕ್ರಿಕೆಟಿಗರಲ್ಲಿ ಕ್ರಿಸ್ ಗೇಲ್, ಮೂರೂ ವಿಭಾಗಗಳಿಂದ ಒಟ್ಟು 18,548 ರನ್ ಗಳಿಸಿದ್ದಾರೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕೊಹ್ಲಿ, ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 18,632 ರನ್ ಗಳಿಸಿರುವ ಕೊಹ್ಲಿ, ಈಗ ಆಡುತ್ತಿರುವ ಕ್ರಿಕೆಟಿಗರ ಪೈಕಿ ಅತ್ಯಧಿಕ ರನ್ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ (17995), ಮಹೇಂದ್ರ ಸಿಂಗ್ ಧೋನಿ (16.506) ಮತ್ತು ನ್ಯೂಜಿಲೆಂಡ್‌ನ ರಾಸ್ ಟೇಲರ್ (14963) ನಂತರದ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications