For Quick Alerts
ALLOW NOTIFICATIONS  
For Daily Alerts
 

ಆಡಿಲೇಡ್‌ನಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ 45 ನಿಮಿಷ ಅಭ್ಯಾಸ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಆಡಿಲೇಡ್‌ನಲ್ಲಿ ಗುರುವಾರ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಅಬ್ಬರಿಸಲು ಟೀಮ್ ಇಂಡಿಯಾ ಭರವಸೆಯ ಬ್ಯಾಟರ್‌ ವಿರಾಟ್‌ ಕೊಹ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿ ತಮ್ಮಲ್ಲಿರುವ ಕ್ಷಮತೆಯನ್ನು ಸಾಬೀತು ಪಡಿಸಲು ವಿರಾಟ್ ಕೊಹ್ಲಿ ಅವರು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾದ ನೆಚ್ಚಿನ ಅಂಗಳ ಆಡಿಲೇಡ್‌ನಲ್ಲಿ ಕಮಾಲ್‌ ಪ್ರದರ್ಶನ ನೀಡಿ ಆರ್ಭಟಿಸಲು, ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ತಮ್ಮನ್ನು ಪರಿಗಣಿಸುವಂತೆ ವಿರಾಟ್‌ ಕೊಹ್ಲಿ ಅವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ಸರಣಿಯಲ್ಲಿ ಅಬ್ಬರಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ವಿರಾಟ್‌ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ವಿರಾಟ್ ಆಡಿಲೇಡ್‌ ಅಂಗಳದಲ್ಲಿ ಬೆವರು ಹರಿಸಿದರು. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Virat Kohli Hits Adelaide Nets for 45 Mins Eyes Big Comeback in Crucial 2nd ODI

ಆಡಿಲೇಡ್‌ನಲ್ಲಿ ಮಳೆ ಕಾಟ ನೀಡಿದ್ದರಿಂದ ಒಳಾಗಂಣ ತರಬೇತಿಯನ್ನು ಆರಂಭದಲ್ಲಿ ನಡೆಸಲಾಯಿತು. ಮಳೆ ತನ್ನ ಕೆಲಸವನ್ನು ಮುಗಿಸುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ತಮ್ಮ ಕೆಲಸವನ್ನು ಆರಂಭಿಸಲು ಮೈದಾನಕ್ಕೆ ಆಗಮಿಸಿದರು. ಔಟ್‌ಫೀಲ್ಡ್ ಒದ್ದೆಯಾಗಿದ್ದ ಕಾರಣ, ವೇಗದ ಬೌಲರ್‌ಗಳು ನಿಧಾನವಾಗಿ ಬೌಲಿಂಗ್ ಮಾಡಿದರು. ಈ ವೇಳೆ ಬ್ಯಾಟರ್‌ಗಳು ನೆಟ್ಸ್‌ನಲ್ಲಿ ಬೆವರು ಹರಿಸಿದರು. ಈ ವೇಳೆ ಭಾರತದ ವಿರಾಟ್‌ ಕೊಹ್ಲಿ ನೆಟ್ಸ್‌ನಲ್ಲಿ ಬೆವರು ಹರಿಸಿದರು.

ನೆಟ್ಸ್‌ನಲ್ಲಿ45 ನಿಮಿಷ ಅಭ್ಯಾಸ

ಎರಡನೇ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಥ್ರೋಡೌನ್ ಎಸೆತಗಳನ್ನು ಇವರು ಹೆಚ್ಚಾಗಿ ಆಡಿದರು. ಇದೇ ವೇಳೆ ವಿರಾಟ್‌ ತಮ್ಮನ್ನು ತಾವು ಬೂಸ್ಟ್ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು. ತಮ್ಮ ನೆಚ್ಚಿನ ಅಂಗಳದಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸಿ ಅಬ್ಬರಿಸಲು ತಯಾರಿ ನಡೆಸಿದ್ದಾರೆ.

ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಭರ್ಜರಿ ತಾಲೀಮು ನಡೆಸಿದರು. ಈ ವೇಳೆ ಹಲವು ಬಾರಿ ಚೆಂಡು ಇವರ ಬ್ಯಾಟಿನ ಅಂಚಿಗೆ ಬಡೆದು ಹೋಯಿತು. ಈ ವೇಳೆ ಇವರು ಕೆಲಸವು ತಪ್ಪು ಶಾಟ್‌ಗಳನ್ನು ಪ್ರಯೋಗಿಸಿದರು. ಇದೇ ವೇಳೆ ವಿರಾಟ್‌ ಕೊಹ್ಲಿ ಕೆಲವು ಪವರ್ ಫುಲ್‌ ಡ್ರೈವ್‌ಗಳು ಮತ್ತು ಪುಲ್ ಶಾಟ್‌ಗಳನ್ನು ಹೊಡೆದರು. ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಕೂಡ ಸೆಷನ್‌ನಲ್ಲಿ ಭಾಗವಹಿಸಿದ್ದರು.

ವಿರಾಟ್‌ ಕೊಹ್ಲಿ ಆಡಿಲೇಡ್‌ನಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ. ಈ ಮೂಲಕ ವಿರಾಟ್ ಈ ಮೈದಾನದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Story first published: Wednesday, October 22, 2025, 11:35 [IST]
Other articles published on Oct 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+