ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖ್ಯಾತಿ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ನಾಪತ್ತೆಯಾಗಿದೆ. ಈ ಸುದ್ದಿ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಚೇಸಿಂಗ್ ಸ್ಟಾರ್ ವಿರಾಟ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಅಳಿಸಿದ್ದಾರಾ, ಅಮಾನತುಗೊಳಿಸಲಾಗಿದೆಯಾ ಎಂಬ ಬಗ್ಗೆ ಅನುಮಾನಗಳು ಹೆಚ್ಚಿದೆ. 274 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ ಹೊಂದಿದ್ದ ವಿರಾಟ್ ಸಾಮಾಜಿಕ ಖಾತೆ ನಿಷ್ಕೀಯವಾಗಿದೆ.
ಜನವರಿ 29 ರ ರಾತ್ರಿ ನಾಪತ್ತೆಯಾಗಿದ್ದ ವಿರಾಟ್ ಕೊಹ್ಲಿ ಅವರ ಅಕೌಂಟ್, ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಖಾತೆಯನ್ನು ಉದ್ದೇಶ ಪೂರಕವಾಗಿ ತೆಗೆದುಹಾಕಿದ್ದಾರೋ ಅಥವಾ ತಾಂತ್ರಿಕ ದೋಷದ ಸಮಸ್ಯೆಯಾಗಿತ್ತೊ ಎಂಬ ಗೊಂದಲ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಆದರೆ ಜನವರಿ 30ಕ್ಕೆ ವಿರಾಟ್ ಕೊಹ್ಲಿ ಅವರ ಖಾತೆ ಮತ್ತೆ ಸಾಮಾಜಿಕ ತಾಣದಲ್ಲಿ ಪ್ರತ್ಯಕ್ಷವಾಗಿದೆ. ಇದರಿಂದ ಅಭಿಮಾನಿಗಳ ಮನದಲ್ಲಿ ಮೂಡಿದ್ದ ಆತಂಕ ಕಡಿಮೆ ಆಗಿದೆ. ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದೇ ಪ್ರಚಾರಕ್ಕಾಗಿ ಸುಮಾರು ₹120-140 ಮಿಲಿಯನ್ ಶುಲ್ಕ ವಿಧಿಸುತ್ತಾರೆ.

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದೆ. ಇವರು ವಿಶ್ವದ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಆಟಗಾರರಲ್ಲಿ ಒಬ್ಬರು. ಕ್ರಿಸ್ಟಿಯಾನೊ ರೊನಾಲ್ಡೊ (650 ಮಿಲಿಯನ್) ಮತ್ತು ಲಿಯೋನೆಲ್ ಮೆಸ್ಸಿ (500 ಮಿಲಿಯನ್) ನಂತರ ಅವರು ವಿಶ್ವದಾದ್ಯಂತ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಆಟಗಾರ ವಿರಾಟ್. ಇವರು 215 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಕಣ್ಮರೆಯಾದ ಬಳಿಕ ಅಭಿಮಾನಿಗಳು ಅನುಷ್ಕಾ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆಗಳನ್ನು ಕೇಳಿದ್ದರು.
ಬರೀ ವಿರಾಟ್ ಕೊಹ್ಲಿ ಅವರ ಖಾತೆ ಮಾತ್ರ ನಾಪತ್ತೆ ಯಾಗಿರಲಿಲ್ಲ. ಅವರ ಸಹೋದರ ವಿಕಾಸ್ ಕೊಹ್ಲಿಯ ಅಕೌಂಟ್ ಸಹ ನಿಷ್ಕ್ರೀಯ ಗೊಳಿಸಲಾಗಿದೆ. ವಿರಾಟ್ ಅವರ ಖಾತೆ ಬೆಳಗ್ಗೆ 8.30ಕ್ಕೆ ಆಕ್ಟಿವ್ ಆದರೆ, ಸಹೋದರರ ಖಾತೆ ಇನ್ನು ಚಾಲ್ತಿಯಾಗಿಲ್ಲ. ಸದ್ಯಕ್ಕಂತೂ ವಿರಾಟ್ ಖಾತೆ ಓಪನ್ ಆಗಿದೆ. ಆದರೆ ನಾಪತ್ತೆಯಾಗಲು ಕಾರಣ ಏನು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಹಲವಾರು ದಾಖಲೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ಒಟ್ಟು 85 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಭಾರತದ ಏಕದಿನ ಕ್ರಿಕೆಟ್‌ನ್ನು ಮಾತ್ರ ಆಡುತ್ತಿದದಾರೆ. ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.