Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli Video: ಏನ್ ಗುರು ಗಿಲ್ ಬಗ್ಗೆ ವಿರಾಟ್ ಹೇಳಿದ್ದು ನಿಜಾನಾ?

ಇತ್ತೀಚಿನ ದಿನಗಳಲ್ಲಿ ಫೇಕ್‌ ವಿಡಿಯೋಗಳು ಸೆಲೆಬ್ರಿಟಿಗಳನ್ನು ಸುತ್ತುವರೆದಿವೆ. ಇದೀಗ ಕ್ರಿಕೆಟ್ ಮೈದಾನಕ್ಕೂ ಕಾಲಿಟ್ಟಿದೆ. ವಿಡಿಯೋವೊಂದರಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ತಂಡದ ಸಹಾ ಆಟಗಾರ ಶುಭಮನ್ ಗಿಲ್ ಅವರನ್ನು ನಿಂದಿಸಿರುವ ವೈರಲ್ ಆಗಿದೆ.

ಎಐ ತಂತ್ರಜ್ಞಾನ ಬಳಸಿ ವಿರಾಟ್ ಕೊಹ್ಲಿ ತಮ್ಮ ತಂಡದ ಆಟಗಾರ ಶುಭಮನ್ ಗಿಲ್ ಅವರನ್ನು ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಕೊಹ್ಲಿಯೇ ಮಾತನಾಡಿರುವ ವಿಡಿಯೋ ಎಂದು ಅಭಿಮಾನಿಗಳು ಭಾವಿಸಿದ್ದರು.

Virat Kohli Insulting Shubman Gill Fake Video Goes Viral

ವೀಡಿಯೊದಲ್ಲಿ ಕೊಹ್ಲಿಯ ಹೇಳಿಕೆಗಳು ಲಿಪ್ ಸಿಂಕ್ ಆಗಿರುವಂತೆ ತೋರುತ್ತಿತ್ತು. ಈಗ ವಿಡಿಯೋ ಅಸಲಿಯಲ್ಲಿ ನಕಲಿ ಎಂಬುದು ತಿಳಿದು ಬಂದಿದೆ. ವಿಡಿಯೋದಲ್ಲಿ "ನಾನು ಗಿಲ್ ಅವರನ್ನು ನೋಡುತ್ತಿದ್ದೇನೆ. ಗಿಲ್ ಖಂಡಿತವಾಗಿಯೂ ಪ್ರತಿಭಾವಂತ ಆಟಗಾರ. ಆದರೆ ಭವಿಷ್ಯದ ಆಟಗಾರನಾಗಿ ಭರವಸೆಯನ್ನು ತೋರಿಸುವುದಕ್ಕೂ ಮತ್ತು ದಂತಕಥೆಯಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಗಿಲ್ ಮುಂದಿನ ವಿರಾಟ್ ಕೊಹ್ಲಿಯಾಗಲು ಸಾಧ್ಯವಿಲ್ಲ" ಎಂದು ವಿರಾಟ್ ಮಾತನಾಡಿರುವಂತೆ ತಂತ್ರಜ್ಞಾನ ಬಳಸಲಾಗಿದೆ.

ಟೆಸ್ಟ್ ಶ್ರೇಯಾಂಕ

ಬುಧವಾರ ಟಐಸಿಸಿ ಟೆಸ್ಟ್ ಶ್ರೇಯಾಂಕ ಬಿಡುಗಡೆಯಾಗಿದೆ. ಈ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಎರಡು ಹೆಜ್ಜೆಗಳನ್ನು ಮುಂದಿಡುವ ಮೂಲಕ 8ನೇ ಸ್ಥಾನಕ್ಕೆ ತಲುಪಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಯುವ ಸ್ಪೋಟಕ ಆರಂಭಿಕ ಯಶಸ್ವಿ ಜೈಸ್ವಾಲ್ 7ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಈ ಮೂವರು ಟಾಪ್ 10 ರೊಳಗೆ ಇರುವ ಭಾರತದ ಬ್ಯಾಟರ್‌ಗಳಾಗಿದ್ದಾರೆ. ಇತ್ತೀಚೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನದ ನಂತರ ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ ನಂಬರ್ ಒನ್ ಆಗಿದ್ದಾರೆ.

Story first published: Wednesday, August 28, 2024, 17:45 [IST]
Other articles published on Aug 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+