ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಬಲಗೈ ವೇಗದ ಬೌಲರ್, ದ.ಆಫ್ರಿಕಾದ ಈ ಕ್ರಿಕೆಟಿಗನೆಂದರೆ ನನಗೆ ಅಚ್ಚುಮೆಚ್ಚು: ವಿರಾಟ್ ಕೊಹ್ಲಿ

Virat Kohli introduced himself as right arm quick bowler during Under 19 world cup 2008

ಸದ್ಯ ಅಂಡರ್ 19 ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಫೈನಲ್ ಹಂತಕ್ಕೆ ಭಾರತ ಅಂಡರ್ 19 ಮತ್ತು ಇಂಗ್ಲೆಂಡ್ ಅಂಡರ್ 19 ತಂಡಗಳು ಲಗ್ಗೆ ಇಟ್ಟಿವೆ. ಫೆಬ್ರವರಿ 5ರ ಶನಿವಾರದಂದು ಇತ್ತಂಡಗಳ ನಡುವಿನ ಫೈನಲ್ ಸೆಣಸಾಟ ನಡೆಯಲಿದ್ದು, ಸತತ ನಾಲ್ಕನೇ ಬಾರಿಗೆ ಫೈನಲ್ ಹಂತ ತಲುಪಿರುವ ಟೀಮ್ ಇಂಡಿಯಾ ಟ್ರೋಫಿ ಎತ್ತಿಹಿಡಿಯುವ ಯೋಜನೆಯಲ್ಲಿದೆ. ಹೀಗೆ ಈ ಮಹತ್ವದ ಪಂದ್ಯದ ಆರಂಭಕ್ಕೂ ಮುನ್ನ ಭಾರತ ಅಂಡರ್ 19 ತಂಡದ ಆಟಗಾರರು ಟೀಮ್ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪಂದ್ಯದಲ್ಲಿ ಯಾವ ರೀತಿ ಆಡಬೇಕು ಎಂಬುದರ ಕುರಿತು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಸದ್ಯ ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರನಾಗಿ, ಯಶಸ್ವಿ ನಾಯಕನಾಗಿ ಗೆದ್ದಿದ್ದು ಈ ಹಿಂದೆ ತನ್ನ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾಗೆ ಅಂಡರ್ 19 ವಿಶ್ವಕಪ್ ತಂದುಕೊಟ್ಟ ಸಾಧನೆಯನ್ನು ಕೂಡಾ ಮಾಡಿದ್ದರು.

ಸಾಲು ಸಾಲು ಯಶಸ್ಸು ಕಂಡರೂ ಆಸ್ಟ್ರೇಲಿಯಾ ಕೋಚ್ ಸ್ಥಾನದಿಂದ ಕೆಳಗಿಳಿದು ಆಶ್ಚರ್ಯ ಮೂಡಿಸಿದ ಲ್ಯಾಂಗರ್!ಸಾಲು ಸಾಲು ಯಶಸ್ಸು ಕಂಡರೂ ಆಸ್ಟ್ರೇಲಿಯಾ ಕೋಚ್ ಸ್ಥಾನದಿಂದ ಕೆಳಗಿಳಿದು ಆಶ್ಚರ್ಯ ಮೂಡಿಸಿದ ಲ್ಯಾಂಗರ್!

ಹೌದು, 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಿದ್ದ ಭಾರತ ತಂಡ ಟ್ರೋಫಿ ಎತ್ತಿ ಹಿಡಿದಿತ್ತು. ಆ ಸಂದರ್ಭದಲ್ಲಿಯೇ ತನ್ನ ಅಮೋಘ ಪ್ರದರ್ಶನ ಹಾಗೂ ಮೈದಾನದಲ್ಲಿನ ತನ್ನ ಅಗ್ರೆಸಿವ್ ನಡವಳಿಕೆಯಿಂದ ಕ್ರಿಕೆಟ್ ಅಭಿಮಾನಿಗಳ ಚಿತ್ತವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ವಿರಾಟ್ ಕೊಹ್ಲಿ ಭಾರೀ ಚರ್ಚೆಗೆ ಒಳಗಾಗಿದ್ದರು.

ಮಹಿಳಾ ಐಪಿಎಲ್ ಯಾವಾಗ ಎಂಬುದರ ಕುರಿತು ಸುಳಿವು ತಿಳಿಸಿದ ಗಂಗೂಲಿಮಹಿಳಾ ಐಪಿಎಲ್ ಯಾವಾಗ ಎಂಬುದರ ಕುರಿತು ಸುಳಿವು ತಿಳಿಸಿದ ಗಂಗೂಲಿ

ಹೀಗೆ ಅಂದು ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಇದೀಗ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗಿದ್ದಾರೆ. ಈಗಾಗಲೇ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ ಕಿಂಗ್ ಕೊಹ್ಲಿ ಎಂದು ಹೆಸರನ್ನು ಪಡೆದುಕೊಂಡಿದ್ದಾರೆ. ಹಾಗೂ ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟಿರುವ 4 ನಾಯಕರ ಪೈಕಿ ವಿರಾಟ್ ಕೊಹ್ಲಿಯೂ ಓರ್ವರಾಗಿದ್ದು, ಈ ಹಿಂದೆ ಅಂಡರ್ 19 ವಿಶ್ವಕಪ್ ಸಮಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಪರಿಚಯವನ್ನು ಮಾಡಿಕೊಳ್ಳುವ ವಿಡಿಯೋವೊಂದು ಬಿಡುಗಡೆಯಾಗಿತ್ತು. ಅಂದು ಬಿಡುಗಡೆಯಾಗಿದ್ದ ವಿಡಿಯೋ ಸದ್ಯ ಇದೀಗ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರವೇಶಿಸಿರುವುದರಿಂದ ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಪರಿಚಯವನ್ನು ಈ ಕೆಳಕಂಡಂತೆ ಮಾಡಿಕೊಂಡಿದ್ದು ತಮ್ಮ ನೆಚ್ಚಿನ ಆಟಗಾರ ಯಾರು ಎಂಬುದನ್ನು ಕೂಡ ತಿಳಿಸಿದ್ದರು.

ನಾನು ಬಲಗೈ ವೇಗಿ ಎಂದಿದ್ದ ಕೊಹ್ಲಿ

ನಾನು ಬಲಗೈ ವೇಗಿ ಎಂದಿದ್ದ ಕೊಹ್ಲಿ

2008ರ ಅಂಡರ್ 19 ವಿಶ್ವಕಪ್ ಟೂರ್ನಿಯ ಸಲುವಾಗಿ ಆಟಗಾರರ ಪರಿಚಯದ ವಿಡಿಯೋಗಳನ್ನು ಚಿತ್ರೀಕರಿಸಲಾಗಿತ್ತು. ಈ ವಿಡಿಯೋದಲ್ಲಿ ತನ್ನ ಪರಿಚಯವನ್ನು ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ನನ್ನ ಹೆಸರು ವಿರಾಟ್ ಕೊಹ್ಲಿ, ನಾಯಕ, ನಾನು ಬಲಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ವೇಗಿ ಎಂದು ಹೇಳಿಕೊಂಡಿದ್ದರು.

ಹರ್ಷಲ್ ಗಿಬ್ಸ್ ನನ್ನ ನೆಚ್ಚಿನ ಆಟಗಾರ

ಹರ್ಷಲ್ ಗಿಬ್ಸ್ ನನ್ನ ನೆಚ್ಚಿನ ಆಟಗಾರ

ಇನ್ನೂ ಮುಂದುವರಿದು ಆ ವಿಡಿಯೋದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಎಂದು ಹೇಳಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಹರ್ಷಲ್ ಗಿಬ್ಸ್ ಎಂದರೆ ವಿರಾಟ್ ಕೊಹ್ಲಿಗೆ ಅಚ್ಚುಮೆಚ್ಚು ಹಾಗೂ ಇತ್ತೀಚೆಗಷ್ಟೇ ನಡೆದಿದ್ದ ಸಂದರ್ಶನವೊಂದರಲ್ಲಿಯೂ ಕೂಡ ಹರ್ಷಲ್ ಗಿಬ್ಸ್ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದರು.

ಕೇನ್ ವಿಲಿಯಮ್ಸನ್ ವಿಕೆಟ್ ಪಡೆದಿದ್ದ ವಿರಾಟ್ ಕೊಹ್ಲಿ

ಕೇನ್ ವಿಲಿಯಮ್ಸನ್ ವಿಕೆಟ್ ಪಡೆದಿದ್ದ ವಿರಾಟ್ ಕೊಹ್ಲಿ

ಇನ್ನು ಆಗ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಕೇನ್ ವಿಲಿಯಮ್ಸನ್ ಅವರ ವಿಕೆಟ್ ಪಡೆದಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ವಿಡಿಯೋದಲ್ಲಿ ನಾನೋರ್ವ ಬಲಗೈ ವೇಗಿ ಎಂದು ಹೇಳಿಕೊಂಡಿದ್ದ ವಿರಾಟ್ ಕೊಹ್ಲಿ ಬಲಿಷ್ಠ ಕೇನ್ ವಿಲಿಯಮ್ಸನ್ ವಿಕೆಟ್ ಪಡೆದದ್ದು ವಿಶೇಷವಾಗಿತ್ತು.

Story first published: Saturday, February 5, 2022, 12:32 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X