ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ 'ವೇಷಭೂಷಣ' ಚಾಲೆಂಜ್!


ಬೆಂಗಳೂರು, ಆಗಸ್ಟ್ 09: ಸಾಂಪ್ರದಾಯಿಕ ಉಡುಪು ತೊಟ್ಟು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಒಂದು ಸವಾಲು ಹಾಕಿದ್ದಾರೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಹೆಮ್ಮೆಯನ್ನು ಸಾರುವ ಉಡುಗೆ ತೊಟ್ಟು ಸಂಭ್ರಮಿಸಿ ಎಂದು ಕೊಹ್ಲಿ ಚಾಲೆಂಜ್ ಹಾಕಿದ್ದಾರೆ.
ಮಾನ್ಯವಾರ್ ಬ್ರ್ಯಾಂಡ್ ಉಡುಪು ತೊಟ್ಟ ಕೊಹ್ಲಿ ಅವರು 72ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಸ್ಟ್ 15ರಂದು ಫೋಟೊ ತೆಗೆದು ಕಳಿಸಿ ಎಂದು ಕೇಳಿಕೊಂಡಿದ್ದಾರೆ.
ದೆಹಲಿಯ ತಮ್ಮ ದೋಸ್ತ್ ಗಳಾದ ಶಿಖರ್ ಧವನ್ ಹಾಗೂ ರಿಷಬ್ ಪಂತ್ ಅವರಿಗೆ ಸವಾಲು ಹಾಕಿದ್ದು, ಎಲ್ಲರೂ ಈ ವೈವಿಧ್ಯತೆಯ ಉಡುಪು ಧರಿಸುವ ಚಾಲೆಂಜ್ ನಲ್ಲಿ ಪಾಲ್ಗೊಂಡು ಸಂಭ್ರಮಿಸಿ ಎಂದಿದ್ದಾರೆ.
ಕೊಹ್ಲಿ ಈ ಚಾಲೆಂಜ್ ಗೆ 'ವೇಷ್ ಭೂಷಣ್' ಎಂಬ ಹೆಸರಿಟ್ಟಿದ್ದಾರೆ. ಚಿಕ್ಕಂದಿನಲ್ಲಿ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಮಕ್ಕಳು ಯೋಧರಂತೆ ಉಡುಪು ಧರಿಸಿ ಕಾಣಿಸಿಕೊಳ್ಳುವುದು ರೂಢಿಯಲ್ಲಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ' ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ' ಎಂಬ ವಾಕ್ಯವನ್ನು ಉಲ್ಲೇಖಿಸುವ ಕೊಹ್ಲಿ ಅವರು ಈ ಚಾಲೆಂಜ್ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications