Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಐಪಿಎಲ್‌ನಲ್ಲಿ 9000 ರನ್‌ಗಳ ಮೈಲಿಗಲ್ಲು ದಾಟಿದ ಕಿಂಗ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ಸೋಮವಾರ ದೊಡ್ಡ ದಾಖಲೆಯನ್ನು ಬರೆದರುಲ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದು, ಈ ಸಾಲಿಗೆ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದ್ದಾರೆ. ವಿರಾಟ್‌ ಐಪಿಎಲ್‌ನಲ್ಲಿ ಈ ವರೆಗೆ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆಯನ್ನು ಬರೆದರು.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ತಂಡವನ್ನು 75 ರನ್‌ಗಳಿಗೆ ಕಟ್ಟಿಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಮೊದಲ ವಿಕೆಟ್‌ಗೆ ಜಾಕೋಬ್ ಬೆಥೆಲ್ (20) ಹಾಗೂ ವಿರಾಟ್ ಕೊಹ್ಲಿ 2.5 ಓವರ್‌ಗಳಲ್ಲಿ 26 ರನ್‌ ಜೊತೆಯಾಟದ ಕಾಣಿಕೆ ನೀಡಿತು.

Virat Kohli

ವಿರಾಟ್‌ ಕೊಹ್ಲಿ ತವರು ಅಂಗಳದಲ್ಲಿ 11 ರನ್‌ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದರು. ಇವರು ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿ ಡೆಲ್ಲಿ ವಿರುದ್ಧ ಸ್ಥಿರ ಆಟವನ್ನು ಆಡಿದರು. ವಿರಾಟ್‌ ಚಿಕ್ಕ ಮೊತ್ತವನ್ನು ಬೆನ್ನಟ್ಟವಾಗ 11 ರನ್‌ ಬಾರಿಸುತ್ತಿದ್ದಂತೆ ಐಪಿಎಲ್‌ನಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಿದರು. ಇವರು ಐಪಿಎಲ್‌ನಲ್ಲಿ 9000 ರನ್‌ಗಳ ಮೈಲಿಗಲ್ಲು ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಟಾಪ್ 5 ಬ್ಯಾಟರ್ಸ್‌

ವಿರಾಟ್ ಕೊಹ್ಲಿ, 276 ಪಂದ್ಯ, 8989 ರನ್‌
ರೋಹಿತ್ ಶರ್ಮಾ, 276 ಪಂದ್ಯ, 7183 ರನ್‌
ಶಿಖರ್ ಧವನ್, 222 ಪಂದ್ಯ, 6769 ರನ್‌
ಡೇವಿಡ್ ವಾರ್ನರ್, 184 ಪಂದ್ಯ, 6565 ರನ್‌
ಕೆ.ಎಲ್. ರಾಹುಲ್, 152 ಪಂದ್ಯ, 5579 ರನ್‌

Story first published: Monday, April 27, 2026, 21:58 [IST]
Other articles published on Apr 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+