ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್

ನವದೆಹಲಿ, ನವೆಂಬರ್ 6: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ. ಎರಡು ತಿಂಗಳ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸ್ಟ್ರೇಲಿಯಾದ ಯುವ ಆಟಗಾರರು ಇದನ್ನು ಮನಗಾಣಬೇಕು. ಕೊಹ್ಲಿಯನ್ನು ನೋಡಿ ಕಲಿಯಬೇಕು, ಅವರ ಬಗ್ಗೆ ಯೋಚಿಸುವಂತಾಗಬೇಕು ಎಂದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಕ್ರಿಕೆಟ್ ಡಾಟ್ ಕಾಮ್‌ನೊಂದಿಗೆ ಮಾತನಾಡುತ್ತ ಮ್ಯಾಕ್ಸ್‌ವೆಲ್, 'ಮೌಲ್ಯಯುತ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ತಂಡದಲ್ಲಿ ಆತ್ಮವಿಶ್ವಾ ಮೂಡಿಸುವುದು ಈ ನಿಟ್ಟಿನಲ್ಲೆಲ್ಲ ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕರಾಗಿ, ಮುಂದಾಳುವಾಗಿ ಕಾಣಿಸುತ್ತಾರೆ' ಎಂದರು.
'ರನ್ ಗಳಿಸುವಿಕೆ, ಫೀಲ್ಡಿಂಗ್, ಫಿಟ್‌ನೆಟ್ ಕಾಯ್ದುಕೊಳ್ಳುವಿಕೆ ಹೀಗೆ ಒಬ್ಬ ಉತ್ತಮ ಆಟಗಾರನಲ್ಲಿ ಏನೆಲ್ಲಾ ಬೇಕೋ ಅವೆಲ್ಲದಕ್ಕೂ ಹೋಲಿಕೆಯಾಗುವ ವಿರಾಟ್ ಅದ್ಭುತ ಆಟಗಾರ ಮತ್ತು ನಾಯಕ' ಎಂದು ಮ್ಯಾಕ್‌ವೆಲ್ ಅಭಿಪ್ರಾಯಪಟ್ಟರು. ಕೊಹ್ಲಿಯ ಏಕದಿನ ದಾಖಲೆಗಳು, ಅವರ ವ್ಯಕ್ತಿತ್ವ ಎಲ್ಲವನ್ನೂ ಪರಿಗಣಿಸಿ ಗ್ಲೆನ್ ಈ ಮಾತುಗಳನ್ನಾಡಿದರು.
'ಪ್ರಾಬಲ್ಯ ಸಾಧಿಸುವ ಹೆಬ್ಬಯಕೆ ಉಳ್ಳವರು ಕೊಹ್ಲಿ. ಅವರದ್ದು ದೋಷರಹಿತ ಕೌಶಲ್ಯ. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಉಳಿದೆಲ್ಲರಿಗಿಂತಲೂ ಹೆಚ್ಚಾಗಿ ಮಿನುಗುತ್ತಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ಉಳಿದ ಎಲ್ಲರಿಗಿಂತಲೂ ಹೆಚ್ಚು ಕಾಲ ಉಳಿಯುವವರಾಗಿ ಕೋಹ್ಲಿ ಗೋಚರಿಸುತ್ತಿದ್ದಾರೆ' ಎಂದು ಮ್ಯಾಕ್ಸ್‌ವೆಲ್, ಟೀಮ್ ಇಂಡಿಯಾ ನಾಯಕನ್ನು ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications