Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟಿಂಗ್ ನಲ್ಲಿ ಕೊಹ್ಲಿಯನ್ನೇ ಮೀರಿಸಿದ್ದಾರೆ ಬೌಲರ್ ಭುವನೇಶ್ವರ್!

Virat Kohli Is Behind Bhuvneshwar Kumar In Batting Record In England

ನವದೆಹಲಿ, ಜುಲೈ 30: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಹೆಚ್ಚು ಗುರುತಿಸಿಕೊಂಡವರು. ಆದರೆ ಭಾರತದ ಬೌಲರ್ ಭುವನೇಶ್ವರ್ ಕುಮಾರ್ ಅವರು ಬ್ಯಾಟಿಂಗ್ ನಲ್ಲಿ ಕೊಹ್ಲಿಯನ್ನು ಮೀರಿಸಿದ್ದಾರೆಯೇ? ಹೌದೆನ್ನುತ್ತಿದೆ ಬ್ಯಾಟಿಂಗ್ ದಾಖಲೆಯೊಂದು.

ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ -ಭಾರತ ದ್ವಿಪಕ್ಷೀಯ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್ ಮೂಲಕ ವಿಶ್ವದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿರುವವರ ಸಾಲಿನಲ್ಲಿ ಕೊಹ್ಲಿಯಿರುವುದು ನಿಜ. ಆದರೆ ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಗಮನಾರ್ಹ ಬ್ಯಾಟಿಂಗ್ ಮಾಡಿದ ದಾಖಲೆಗಳಿಲ್ಲ. ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಮಧ್ಯಮ ವೇಗಿ ಭುವನೇಶ್ವರ್ ಅವರು ಕೊಹ್ಲಿಗಿಂತಲೂ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ ಎಂದರೆ ನೀವು ನಂಬಲೇ ಬೇಕು.

2014ರಲ್ಲಿ ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕತ್ವ ವಹಿಸಿದ್ದರು. ಆಗ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರಿಂದ ಸೋಲನುಭವಿಸಿತ್ತು. ಒಂದು ಪಂದ್ಯ ಡ್ರಾಗೊಂಡಿತ್ತು.

2014ರ ಈ ಟೆಸ್ಟ್ ಸರಣಿ ಸಂದರ್ಭ ಕೊಹ್ಲಿ ಎಲ್ಲಾ 5 ಪಂದ್ಯಗಳಲ್ಲಿ ಆಡಿದ್ದರು. ಆದರೆ ಸರಣಿ ಮುಗಿಯುವ ವೇಳೆ ಕೊಹ್ಲಿ 13.40 ರನ್ ರೇಟ್ ನಲ್ಲಿ ಗಳಿಸಿದ್ದು ಕೇವಲ 134 ರನ್ ಮಾತ್ರ. ಜೊತೆಗೆ ಈ ಸರಣಿಯಲ್ಲಿ ಹೊಹ್ಲಿ ಎರಡು ಬಾರಿ ಸೊನ್ನೆಗೆ ಔಟಾಗಿದ್ದು.

ಇದೇ ಟೆಸ್ಟ್ ಸರಣಿಯಲ್ಲಿ ಭುವಿ 27.44 ರನ್ ರೇಟ್ ನಲ್ಲಿ 247 ರನ್ ಗಳಿಸಿದ್ದರು. ಜೊತೆಗೆ ಒಟ್ಟು ಮೂರು ಅರ್ಧ ಶತಕಗಳು ಕುಮಾರ್ ಬ್ಯಾಟ್ ನಿಂದ ಸಿಡಿದಿತ್ತು. ಬ್ಯಾಟಿಂಗ್ ವಿಚಾರದಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಇತ್ತೀಚೆಗೆ ಕೊಹ್ಲಿಯ ಕಾಲೆಳೆದಿದ್ದೂ ಇದೇ ಸಂಗತಿಗೆ ಕೊಂಡಿ ಬೆಸೆದಿದೆ.

Story first published: Monday, July 30, 2018, 19:08 [IST]
Other articles published on Jul 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+