For Quick Alerts
ALLOW NOTIFICATIONS  
For Daily Alerts
 

Virat Kohli: ಆಸೀಸ್ ಪ್ರವಾಸಕ್ಕೂ ಮುನ್ನ ಟೆಕ್ಷನ್ ಹೆಚ್ಚಿಸಿದ ಕೊಹ್ಲಿ ಫಾರ್ಮ್; 5 ವರ್ಷಗಳಲ್ಲಿ ಹೊಡೆದ ಶತಕಗಳೆಷ್ಟು?

ಪ್ರತಿ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಎದುರಾಳಿ ತಂಡಗಳಿಗೆ ದೊಡ್ಡ ಸವಾಲು ಆಗಿರುತ್ತಿದ್ದರು. ಭಾರತ ವಿರುದ್ಧ ಆಡುವ ಪ್ರತಿವೊಂದು ತಂಡವೂ ಕೊಹ್ಲಿ ಅವರಿಗಾಗಿ ಪ್ರತ್ಯೇಕ ತಂತ್ರಗಾರಿಕೆಯನ್ನು ಮಾಡುತ್ತಿದ್ದವು. ಅಷ್ಟರ ಮಟ್ಟಿಗೆ ಎದುರಾಳಿ ತಂಡಗಳ ಎದೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ನಡುಕ ಹುಟ್ಟಿಸಿದ್ದರು.

ಇದೀಗ ವಿರಾಟ್ ಕೊಹ್ಲಿ ಬ್ಯಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲಿನಂತೆ ಸದ್ದು ಮಾಡುತ್ತಿಲ್ಲ. ಕೊಹ್ಲಿಯ ಫಾರ್ಮ್ ಬಗ್ಗೆ ಅನುಭವಿ ಆಟಗಾರರು ತಮ್ಮದೇ ವಿವರಣೆ ನೀಡುತ್ತಿದ್ದು, ಕೊಹ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ. ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ.

Virat Kohli is facing form problem before Australia tour

ನ್ಯೂಜಿಲೆಂಡ್ ವಿರುದ್ಧ ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ತಮ್ಮ ವಿರಾಟ್ ರೂಪ ತೋರಿರಲಿಲ್ಲ. ಈಗ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ಟೀಮ್ ಇಂಡಿಯಾಕ್ಕೆ ಟೆಕ್ಷನ್ ತಂದಿದೆ.

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್ ತಲುಪಬೇಕಾದರೆ ಇನ್ನುಳಿದ 6 ಪಂದ್ಯಗಳ ಪೈಕಿ 4 ರಲ್ಲಿ ಗೆಲುವು ಸಾಧಿಸಬೇಕಾಗಿದೆ. ಅದರೆ ಈ ಗೆಲುವು ಭಾರತಕ್ಕೆ ಅಷ್ಟೂ ಸುಲಭವಾಗಿಲ್ಲ. ಏಕೆಂದರೆ 6 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ 5 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ತಂಡದ ಮೇಲೆ ಪರಿಣಾಮ ಬೀರಲಿದೆ.

ಫಾರ್ಮ್ ಸಮಸ್ಯೆ

ವಿರಾಟ್ ಕೊಹ್ಲಿ ಈ ವರ್ಷ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಇದುವರೆ ಅವರು ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 28.50 ಸರಾಸರಿಯಲ್ಲಿ ಕೇವಲ 228 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. 2020 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಂಕಿ-ಅಂಶಗಳು ಸತತವಾಗಿ ಕುಸಿದಿವೆ. ಕೊಹ್ಲಿ ಆಡಿರುವ 33 ಟೆಸ್ಟ್ ಪಂದ್ಯಗಳಲ್ಲಿ 33.01 ಸರಾಸರಿಯಲ್ಲಿ ಕೇವಲ 1816 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಒಂಬತ್ತು ಅರ್ಧ ಶತಕಗಳು ಸೇರಿವೆ. ಕಳಪೆ ಪ್ರದರ್ಶನದಿಂದಾಗಿ ಅವರ ಟೆಸ್ಟ್ ಸರಾಸರಿಯು 2019 ರಲ್ಲಿ 54.97 ರಿಂದ 48.48 ಕ್ಕೆ ಕುಸಿದಿದೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಹಳೆ ಖದರ್ ಉಳಿಸಿಕೊಂಡಿಲ್ಲ. ಮುಂಚೆ ಅಬ್ಬರಿಸುತ್ತಿದ್ದ ಅವರ ಬ್ಯಾಟ್ ಈಗ ಸೈಲೆಂಟ್ ಆಗಿದೆ. ಮತ್ತೊಂದೆಡೆ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ಅವರ ಸ್ಥಾನಕ್ಕೆ ಕುತ್ತು ಎದುರಾಗಿದೆ. ಇತ್ತೀಚೆಗೆ ಭಾರತ ತಂಡದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವುದರಿಂದ ಕೊಹ್ಲಿ ಅಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಲಯ ಕಂಡುಕೊಳ್ಳಬೇಕಾಗಿದೆ. ಹೀಗಾಗಿ ಕೊಹ್ಲಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮಹತ್ವದ್ದಾಗಿದೆ. ಈ ಸರಣಿಯಕಲ್ಲಿ ಕೊಹ್ಲಿ ಅಬ್ಬರಿಸುತ್ತಾರಾ? ಅಥವಾ ಟೀಕೆಗಳನ್ನು ಎದುರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.

Story first published: Monday, October 28, 2024, 13:38 [IST]
Other articles published on Oct 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+