ವಿರಾಟ್ ನಾಯಕತ್ವ ಕಳೆದುಕೊಂಡು ರೋಹಿತ್ ನಾಯಕನಾದದ್ದು ಒಳ್ಳೆಯದೇ ಎಂದ ಸ್ಟಾರ್ ಬೌಲರ್!

ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡದ್ದು ಸದ್ಯ ಕ್ರಿಕೆಟ್ ಜಗತ್ತಿನ ಬಿಸಿಬಿಸಿ ಚರ್ಚಾಸ್ಪದ ವಿಷಯವಾಗಿದೆ. ಅದರಲ್ಲಿಯೂ ಯಾವುದೇ ಮುನ್ಸೂಚನೆಯನ್ನೂ ನೀಡದೆ ವಿರಾಟ್ ಕೊಹ್ಲಿಯನ್ನು ಅಂತಿಮ ಕ್ಷಣದಲ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ದಿಡೀರನೆ ಬಿಸಿಸಿಐ ತೆಗೆದುಹಾಕಿದ್ದು ಸಾಕಷ್ಟು ಟೀಕೆ ಮತ್ತು ವಿವಾದಗಳನ್ನು ಹುಟ್ಟುಹಾಕಿತು.
ಹೌದು, ಮೊದಲಿಗೆ ಭಾರತಕ್ಕೆ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರೆಯುತ್ತೇನೆ ಎಂದು ತಿಳಿಸಿದ್ದರು. ಆದರೆ ಟಿ ಟ್ವೆಂಟಿ ವಿಶ್ವಕಪ್ ಮುಗಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ ಇದೇ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿ ರೋಹಿತ್ ಶರ್ಮಾ ಹೆಗಲಿಗೆ ಭಾರತ ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಿತು. ಹೀಗೆ ಯಾರೂ ಊಹಿಸಿರದ ರೀತಿಯಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿಯಿಂದ ನಾಯಕತ್ವವನ್ನು ಕಸಿದುಕೊಂಡದ್ದರ ವಿರುದ್ಧ ಕೊಹ್ಲಿ ಅಭಿಮಾನಿಗಳು ಗರಂ ಆದರು.
ಅದರಲ್ಲಿಯೂ ಈ ಕುರಿತಾಗಿ ವಿರಾಟ್ ಕೊಹ್ಲಿ ನಡೆಸಿದ ಸುದ್ದಿಗೋಷ್ಠಿಯಿಂದ ಬಿಸಿಸಿಐ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಇದ್ದ ಕೋಪ ಮತ್ತಷ್ಟು ಅತಿರೇಕಕ್ಕೆ ಹೋಯಿತು. ತನ್ನನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕುತ್ತಿರುವುದಾಗಿ ಅಂತಿಮ ಕ್ಷಣದಲ್ಲಿ ತಿಳಿಸಲಾಯಿತು ಮತ್ತು ನಾನು ಇದಕ್ಕೆ ಯಾವುದೇ ಪ್ರತಿರೋಧವನ್ನು ಒಡ್ಡಲಿಲ್ಲ, ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದು ಬಿಸಿಸಿಐ ಬಳಿ ಹೇಳಿಕೊಂಡಾಗ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸದೇ ನನ್ನ ನಿರ್ಧಾರವನ್ನು ಸ್ವಾಗತಿಸಿದರು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಕೂಡಾ ನಾನು ತಯಾರಿದ್ದೇನೆ ಎಂದು ತಿಳಿಸಿದ್ದೆ ಎಂಬ ಹೇಳಿಕೆಗಳನ್ನು ನೀಡುವುದರ ಮೂಲಕ ವಿರಾಟ್ ಕೊಹ್ಲಿ ತನ್ನ ವಿರುದ್ಧ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದು ಬಿಟ್ಟರು. ಹೀಗೆ ನಾಯಕತ್ವ ಕಳೆದುಕೊಂಡ ಕೊಹ್ಲಿ ಕುರಿತು ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದರೆ ಕೆಲ ಕ್ರಿಕೆಟಿಗರು ಕೊಹ್ಲಿ ನಾಯಕತ್ವ ಕಳೆದುಕೊಂಡದ್ದು ಒಳ್ಳೆಯದೇ ಆಯಿತು ಎಂಬ ಅಭಿಪ್ರಾಯಗಳನ್ನು ಕೂಡ ತಿಳಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಟಿಮ್ ಸೌಥಿ ಕೂಡ ಸೇರಿಕೊಂಡಿದ್ದು ಈ ಕೆಳಕಂಡಂತೆ ಮಾತನಾಡಿದ್ದಾರೆ..

ನಾಯಕತ್ವ ಬದಲಾವಣೆಯಾದದ್ದು ಒಳ್ಳೆಯದ್ದೇ ಎಂದ ಸೌಥಿ
ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಟಿಮ್ ಸೌಥಿ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅಂಡರ್ 19 ಆಟಗಾರನಾಗಿದ್ದ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಅಂಡರ್ 19 ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಟಿಮ್ ಸೌಥಿ ಆಗಿನಿಂದ ಈಗಿನವರೆಗೂ ಕೂಡ ಕೊಹ್ಲಿಗೆ ಮೈದಾನದಲ್ಲಿ ಬದ್ಧ ವೈರಿಯಾಗಿದ್ದಾರೆ. ಸದಾ ಕೊಹ್ಲಿ ಜೊತೆ ಮೈದಾನದಲ್ಲಿ ತೀವ್ರ ಹೋರಾಟ ನಡೆಸುವ ಟಿಮ್ ಸೌಥಿ ಕೊಹ್ಲಿ ನಾಯಕತ್ವ ಕಳೆದುಕೊಂಡು ರೋಹಿತ್ ಶರ್ಮಾ ನಾಯಕನಾದದ್ದು ಒಳ್ಳೆಯ ನಿರ್ಧಾರವೇ ಎಂದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದೊಡ್ಡ ಜವಾಬ್ದಾರಿಗಳನ್ನು ಕಳೆದುಕೊಂಡಿದ್ದು ಓರ್ವ ಆಟಗಾರನಾಗಿ ಇನ್ನೂ ಹೆಚ್ಚಿನ ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಹಾಗೂ ಇದು ರೋಹಿತ್ ಶರ್ಮಾಗೆ ಹೆಚ್ಚು ಅನುಕೂಲವಾಗಲಿದೆ ಎಂದು ಟಿಮ್ ಸೌಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಯಾವಾಗಲೂ ಆಟದ ಕುರಿತು ಚಿಂತಿಸುವ ಆಟಗಾರ ಎಂದು ಸೌಥಿ
ಇನ್ನು ವಿರಾಟ್ ಕೊಹ್ಲಿ ಕುರಿತು ವಿಶೇಷವಾಗಿ ಮಾತನಾಡಿರುವ ಟಿಮ್ ಸೌಥಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೆ ಹೊರಗಿನ ಸಮಯದಲ್ಲಿಯೂ ಸಹ ಆಟದ ಕುರಿತು ಹೆಚ್ಚಾಗಿ ಚರ್ಚಿಸುವ ವ್ಯಕ್ತಿತ್ವ ಉಳ್ಳಂತಹ ಆಟಗಾರ. ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗಲೂ ಕೊಹ್ಲಿ ಭೋಜನದ ಸಮಯದಲ್ಲಿ ಹಾಗೂ ಚಹಾದ ಸಮಯದಲ್ಲಿ ಕ್ರಿಕೆಟ್ ಕುರಿತಾಗಿ ಹೆಚ್ಚು ಚರ್ಚಿಸುತ್ತಿದ್ದರು ಎಂಬ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಒತ್ತಡವಿಲ್ಲದ ವಿರಾಟ್ ಕೊಹ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಲಿದ್ದಾರೆ ಎಂದು ಟಿಮ್ ಸೌಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಫಾರ್ಮ್ ಬಗ್ಗೆ ಸೌಥಿ ಹೇಳಿದ್ದಿಷ್ಟು
ಇನ್ನು ಕಳೆದ 2 ವರ್ಷಗಳಿಂದ ಶತಕ ಬಾರಿಸುವಲ್ಲಿ ವಿಫಲವಾಗಿರುವ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿಲ್ಲ ಉತ್ತಮ ರನ್ ಕಲೆ ಹಾಕುತ್ತಿದ್ದಾರೆ ಆದರೆ ಈ ಹಿಂದೆ ವಿರಾಟ್ ಕೊಹ್ಲಿ ಅತ್ಯುನ್ನತ ಮಟ್ಟದಲ್ಲಿ ಬ್ಯಾಟ್ ಬೀಸಿ ರನ್ ಕಲೆಹಾಕಿದ್ದು ಈಗ ಆ ಮಟ್ಟದಲ್ಲಿ ಬ್ಯಾಟ್ ಬೀಸುತ್ತಿಲ್ಲ ಹೀಗಾಗಿ ಅವರು ಫಾರ್ಮ್ ಕಳೆದುಕೊಂಡಿದ್ದಾರೆ ಎಂದೆನಿಸುತ್ತದೆ ಹೊರತು ನಿಜವಾಗಿಯೂ ಕೊಹ್ಲಿ ಫಾರ್ಮ್ ಕಳೆದುಕೊಂಡಿಲ್ಲ ಎಂದು ಟಿಮ್ ಸೌಥಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications