ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಸ್ಟೀವ್ ವಾ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿಯನ್ನು ಆಧುನಿಕ ದಿನಗಳ ಹೀರೋ ಎಂದು ಕರೆದಿರುವ ವಾ, ಕೊಹ್ಲಿಯೊಬ್ಬ ಭಾರತದ ಹೊಸ ಮನೋಭಾವದ ಪ್ರತಿನಿಧಿ ಎಂದಿದ್ದಾರೆ.
'ಕ್ಯಾಪ್ಚರಿಂಗ್ ಕ್ರಿಕೆಟ್: ಸ್ಟೀವ್ ವಾ ಇನ್ ಇಂಡಿಯಾ' ಎನ್ನುವ 60 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ವಿರಾಟ್ ಕೊಹ್ಲಿಯನ್ನು ಉಲ್ಲೇಖಿಸಿದ್ದಾರೆ. ಕೊಹ್ಲಿಯನ್ನು ಅಭಿಮಾನಿಗಳು ಅವರ ಮನೋಭಾವಕ್ಕಾಗಿ ಪ್ರೀತಿಸುತ್ತಾರೆಯೇ ಹೊರತು, ಅವರು ಎದುರಾಳಿಯನ್ನು ಹೆದರಿಸುವ ಪರಿಗಲ್ಲ ಎಂದಿದ್ದಾರೆ.
'ಕೊಹ್ಲಿ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಯಾಕೆ ಪ್ರೀತಿಯನ್ನಿಟ್ಟುಕೊಂಡಿದ್ದಾರೆಂದರೆ, ಅವರೊಬ್ಬರು ಭಾರತದ ಹೊಸ ಮನೋಭಾವದಂತೆ ಕಾಣುತ್ತಾರೆ. ಕೊಹ್ಲಿ ಈ ಕಾರಣಕ್ಕೆ ಅಭಿಮಾನಿಗಳ ಹೃದಯದಲ್ಲಿ ನಿಲ್ಲುತ್ತಾರೆಯೇ ಹೊರತು ಅವರು ಎದುರಾಳಿಯೆದರು ಬೆದರಿಸುವ ರೀತಿಗಲ್ಲ ಎಂದು ವಾ ಹೇಳಿಕೊಂಡಿದ್ದಾರೆ.
ಪ್ರವಾಸ ಸರಣಿಗೋಸ್ಕರ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತಕ್ಕೆ ಬಂದಿದ್ದು, ವಿರಾಟ್ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಭಾರತ-ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದ್ದು, 4ನೇ ಟೆಸ್ಟ್ ಮಾರ್ಚ್ 4ರಂದು ಅಹ್ಮದಾಬಾದ್‌ನಲ್ಲಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications