For Quick Alerts
ALLOW NOTIFICATIONS  
For Daily Alerts
 

Virat Kohli: ಬ್ರಿಟನ್ ಪೌರತ್ವ ಪಡೆಯಲು ಮುಂದಾದ್ರ ವಿರಾಟ್ ಕೊಹ್ಲಿ?; ನಿಯಮ ಹೇಳುವುದೇನು?

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಲಂಡನ್‌ನಲ್ಲಿ ಕುಟುಂಬ ಸಮೇತ ರಜೆ ದಿನಗಳನ್ನು ಆನಂದಿಸುತ್ತಿದ್ದಾರೆ. ಟೀಮ್ ಇಂಡಿಯಾ ಸೆಪ್ಟೆಂಬರ್ 19 ರವರೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿಲ್ಲ. ಸೆಪ್ಟೆಂಬರ್ 20 ರಿಂದ ಬಾಂಗ್ಲಾದೇಶ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದ್ದು, ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ.

ಕೊಹ್ಲಿ ಇತ್ತೀಚೆಗೆ ಲಂಡನ್ ಬೀದಿಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಲಂಡನ್‌ನಲ್ಲಿ ರಸ್ತೆ ದಾಟುವುದು, ರೈಲ್ವೆ ನಿಲ್ದಾಣದಲ್ಲಿ ಇರುವುದು ಹೀಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕುತೂಹಲದಿಂದ ಶೇರ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.

Virat Kohli is likely to get British citizenship

ಕೊಹ್ಲಿ ಮಾತುಗಳು

ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿದ ಅಭಿಮಾನಿಗಳು ಈ ಹಿಂದೆ ಅವರು ಕ್ರಿಕೆಟ್‌ ವೃತ್ತಿಜೀವನದ ಕುರಿತು ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. " ಒಮ್ಮೆ ನಾನು ಆಟವಾಡುವುದನ್ನು ಮುಗಿಸಿದರೆ ನಾನು ಮೈದಾನದಿಂದ ದೂರ ಹೋಗುತ್ತೇನೆ. ಸ್ವಲ್ಪ ಸಮಯದವರೆಗೆ ನೀವು ನನ್ನನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾನು ಆಡುವವರೆಗೂ ನನ್ನ ಎಲ್ಲವನ್ನೂ ನೀಡಲು ನಾನು ಬಯಸುತ್ತೇನೆ" ಎಂದು ಕೊಹ್ಲಿ ಹೇಳಿದ್ದರು.

ಈಗ ಕೊಹ್ಲಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಭಿಮಾನಿಗಳು ವಿರಾಟ್ ಯುಕೆ ಪೌರತ್ವವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆದರೆ ಇದುವರೆಗೆ ಈ ಬಗ್ಗೆ ಯಾರಿಂದಲ್ಲೂ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಅಭಿಮಾನಿಗಳಲ್ಲಿ ಕುತೂಹಲ

ವಿರಾಟ್ ಕೊಹ್ಲಿ ಯುಕೆ ಪೌರತ್ವ ತೆಗೆದುಕೊಳ್ಳುವ ಬಗ್ಗೆ ದೊಡ್ಡ ಪ್ರಶ್ನೆಯೊಂದು ಹುಟ್ಟುಕೊಂಡಿದೆ. ಅವರು ಯುಕೆ ಪೌರತ್ವವನ್ನು ಪಡೆದರೆ, ಟೀಮ್ ಇಂಡಿಯಾ ಪರ ಆಡಲು ಸಾಧ್ಯವೆ?, ಇಂತಹ ಪ್ರಕರಣಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಯಾವ ನಿಯಮಗಳು ಜಾರಿಯಾಗಲಿವೆ ಎಂಬುದು ಕೊಹ್ಲಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

ಐಸಿಸಿ ಹೇಳುವುದೇನು?

ಪೌರತ್ವ ಮತ್ತು ಕ್ರಿಕೆಟ್ ಆಡುವ ಅರ್ಹತೆಗೆ ಸಂಬಂಧಿಸಿದಂತೆ ಐಸಿಸಿ ನಿಯಮಗಳು ರಾಷ್ಟ್ರೀಯ ತಂಡಕ್ಕೆ ಆಡಲು ಆಟಗಾರನು ತಾನು ಪ್ರತಿನಿಧಿಸುತ್ತಿರುವ ದೇಶದ ಪ್ರಜೆಯಾಗಿರಬೇಕು ಎಂದು ಹೇಳುತ್ತದೆ. ಅವರು ಪ್ರತಿನಿಧಿಸುವ ದೇಶದಲ್ಲಿ ಜನಿಸಿರಬೇಕು ಅಥವಾ ಆ ದೇಶದ ಮಾನ್ಯವಾದ ಪಾಸ್‌ಪೋರ್ಟ್ ಹೊಂದಿರಬೇಕು. ಈ ಮೂಲಕ ತನ್ನ ಪೌರತ್ವವನ್ನು ಸಾಬೀತುಪಡಿಸಬಹುದು.

ಒಂದು ವೇಳೆ ವಿರಾಟ್ ಯುಕೆ ಪೌರತ್ವವನ್ನು ತೆಗೆದುಕೊಂಡರೆ, ಅವರು ಭಾರತ ನೀಡಿದ ಪಾಸ್‌ಪೋರ್ಟ್ ಅನ್ನು ಹೊಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಪರ ಆಡಲು ಅವಕಾಶವಿರುವುದಿಲ್ಲ.

ಭಾರತೀಯ ಪೌರತ್ವ ಕಾನೂನುಗಳನು?

ಭಾರತ ಸಂವಿಧಾನದಲ್ಲಿ ಉಭಯ ಪೌರತ್ವವನ್ನು ನೀಡಲು ಯಾವುದೇ ಅಧಿಕೃತ ಅವಕಾಶವಿಲ್ಲ. ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಎರಡು ಅಥವಾ ಹೆಚ್ಚಿನ ದೇಶಗಳ ಪ್ರಜೆಯಾಗಿ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟಾಗ ಉಭಯ ಪೌರತ್ವ ನೀಡಲಾಗುತ್ತದೆ. ವಿದೇಶಿ ಪ್ರಜೆಯು ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಅನ್ನು ಹೊಂದಿದ್ದರೆ, ಭಾರತೀಯ ಮೂಲದ ಜನರು ಅನಿರ್ದಿಷ್ಟವಾಗಿ ದೇಶದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಕೊಹ್ಲಿ ಯುಕೆಗೆ ಸ್ಥಳಾಂತರಗೊಂಡ ಅವರು ಭಾರತದ ಪೌರತ್ವವನ್ನು ಹೊಂದಿದ್ದರೆ, ಒಸಿಐ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ, ದೇಶದ ಪರ ಕ್ರಿಕೆಟ್ ಆಡಲು ಇದು ಉಪಯೋಗಕ್ಕೆ ಬರುವುದಿಲ್ಲ. ಒಸಿಐ ಕಾರ್ಡ್ ಭಾರತೀಯ ಪೌರತ್ವಕ್ಕೆ ಸಮನಾಗಿರುವುದಿಲ್ಲ.

ಕೊಹ್ಲಿ ಬೇರೆ ದೇಶದ ಪರ ಆಡಲು ಬಯಸಿದರೆ, ಅವರು ನಿರ್ದಿಷ್ಟ ಅವಧಿಯವರೆಗೆ ಕಾಯಬೇಕು. ಐಸಿಸಿ ನಿಯಮಗಳ ಪ್ರಕಾರ ಭಾರತವನ್ನು ಪ್ರತಿನಿಧಿಸಿದ ನಂತರ ಮತ್ತೊಂದು ದೇಶಕ್ಕಾಗಿ ಅರು ದೇಶೀಯ ಕ್ರಿಕೆಟ್ ಆಡಬೇಕಾಗುತ್ತದೆ. ಕೊಹ್ಲಿ ಪ್ರಸ್ತುತ ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ ವಿದಾಯ ಹೇಳಿದ್ದಾರೆ.

ಪೌರತ್ವ ಬದಲಾಯಿಸಿದ ಆಟಗಾರರು

ವಿಶ್ವ ಕ್ರಿಕೆಟ್‌ನಲ್ಲಿ ಅನೇಕ ಆಟಗಾರರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಆಡುವ ಸಲುವಾಗಿ ತಮ್ಮ ರಾಷ್ಟ್ರೀಯತೆಯನ್ನು ಬದಲಾಯಿಸಿದ್ದಾರೆ. ಇಯಾನ್ ಮೋರ್ಗನ್ ಅವರಂತಹ ಅನೇಕ ಸ್ಟಾರ್ ಕ್ರಿಕೆಟಿಗರು ಇದ್ದಾರೆ. ಅವರು 2019ರಲ್ಲಿ ಇಂಗ್ಲೆಂಡ್ ನಾಯಕರಾಗಿ ಏಕದಿನವಿಶ್ವಕಪ್ ಗೆಲುವಿಗೆ ಕಾರಣರಾಗಿದ್ದಾರೆ. ಇದಕ್ಕೂ ಮೊದಲು 2007ರ ಏಕದಿನ ವಿಶ್ವಕಪ್‌ನಲ್ಲಿ ಐರ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರ.

ಆರಂಭದಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ ಕೆವಿನ್ ಪೀಟರ್ಸನ್ ನಂತರ ಇಂಗ್ಲೆಂಡ್‌ ಪರ ಆಡಿದ್ದಾರೆ. ನಂತರ 2009ರ ಟಿ20 ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್‌ ತಂಡದ ಪರ ಆಡಿದ್ದ ಡಿರ್ಕ್ ನ್ಯಾನೆಸ್, ಬಳಿಕ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ.

Story first published: Wednesday, September 4, 2024, 7:04 [IST]
Other articles published on Sep 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+