ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ: ಜೋ ರೂಟ್

ಲಂಡನ್: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ. ಕೊಹ್ಲಿ ಆಟದ ವಿಚಾರದಲ್ಲಿ ಆಲ್ ರೌಂಡರ್. ಅದರಲ್ಲೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿರುವ ಅವರ ಟೋಟಲ್ ಚೇಸಿಂಗ್ ಮಾಡುವ ಸಾಮರ್ಥ್ಯ ಅಸಾಧಾರಣ ಎಂದು ರೂಟ್ ಹೇಳಿದ್ದಾರೆ.
ತನ್ನದೇ ದೇಶದ ಜೋಸ್ ಬಟ್ಲರ್ ಕೂಡ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸದ್ಯ ವಿಶ್ವದಲ್ಲಿ ಪರಿಪೂರ್ಣ ಆಟಗಾರ ಎಂದೂ ಜೋ ರೂಟ್ ಹೇಳಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಬೆಸ್ಟ್ ಬ್ಯಾಟ್ಸ್‌ಮನ್ ಅಂತ ಬಹುತೇಕ ಎಲ್ಲಾ ಕ್ರಿಕೆಟರ್‌ಗಳು ಒಪ್ಪಿಕೊಂಡಿದ್ದಾರೆ. ರೂಟ್ ಕೂಡ ಕೊಹ್ಲಿಯನ್ನು ಕೊಂಡಾಡಿದ್ದಾರೆ.
'ವಿರಾಟ್ ಕೊಹ್ಲಿ ಬಹುಶಃ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಪರಿಪೂರ್ಣ ಬ್ಯಾಟ್ಸ್‌ಮನ್. ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಕೊಹ್ಲಿ ಚೇಸಿಂಗ್ ಮಾಡುವ ಸಾಮರ್ಥ್ಯ ಅದ್ಭುತ. ಅದರಲ್ಲೂ ಕೊಹ್ಲಿ ಅಜೇಯವಾಗಿ ಉಳಿದರೆ ಇನ್ನೂ ಉತ್ತಮ ಪ್ರದರ್ಶನ ನೀಡುತ್ತಾರೆ,' ಎಂದು ರೂಟ್ ವಿವರಿಸಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಭಾರತದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಸದ್ಯ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂಚೂಣಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications